Job Description: * ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) 2022 ನೇ ವರ್ಷದ ಮೊದಲ ಉಡಾವಣೆಯನ್ನು ಫೆಬ್ರವರಿ. 14 ರಂದು ನಡೆಸಿದೆ. ಇಸ್ರೋ PSLV-C52 ಮಿಷನ್ '2' ಉಪಗ್ರಹಗಳ ಜೊತೆ ಯಶಸ್ವಿಯಾಗಿ ಉಡಾವಣೆ ಮಾಡಿದೆ. * ಪ್ರಸ್ತುತ ಈ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್- C52 ಯನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗಿದೆ. ಇದು ರಾಕೆಟ್ ಮೂಲಕ ಎರಡು ದೇಶದ ರಾಡಾರ್ ಇಮೇಜಿಂಗ್ ಉಪಗ್ರಹವಾದ RISAT-1A ನ್ನು ಉಡಾವಣೆ ಮಾಡಲಾಗಿದೆ. ಇದೀಗ ಈ RISAT-1A ಉಪಗ್ರಹಕ್ಕೆ ಭೂ ವೀಕ್ಷಣಾ ಉಪಗ್ರಹ-04 (Earth Observation Satellite(EOS)-04) ಎಂದು ಹೆಸರಿಸಲಾಗಿದೆ. * ಪ್ರಸ್ತುತ ಈ PSLV-C52 ನ್ನು 1710 ಕೆಜಿ ತೂಕದ ಮಿಷನ್‌ ಆಗಿದೆ, ಈ ಉಪಗ್ರಹವು ಉಡಾವಣೆ ಮಾಡಿದ ಕೇವಲ 17 ನಿಮಿಷಗಳಲ್ಲಿ ಈ ಭೂ ವೀಕ್ಷಣಾ ಉಪಗ್ರಹವನ್ನು 529 ಕಿ.ಮೀ. ದೂರದ ಕಕ್ಷೆಗೆ ರವಾನಿಸಲಾಗಿದೆ. ಸದ್ಯ ಈ ಉಪಗ್ರಹವನ್ನು 529 ಕಿ.ಮೀ. ಸೂರ್ಯನ ಸಿಂಕ್ರೊನಸ್ ಧ್ರುವೀಯ ಕಕ್ಷೆಯಲ್ಲಿ ಸುತ್ತುವಂತೆ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾಗಿದೆ. * ಪ್ರಸ್ತುತ ನಾಲ್ಕು ಹಂತಗಳನ್ನು ಒಳಗೊಂಡಿರುವ PSLV ರಾಕೆಟ್‌ನ ಒಂದೊಂದು ಹಂತದಲ್ಲಿ ಬೇರೆ ಬೇರೆ ರೀತಿಯ ಇಂಧನವನ್ನು ತುಂಬಲಾಗಿದೆ. ಮೊದಲ ಮತ್ತು 3 ನೇ ಹಂತದಲ್ಲಿ ಘನ ಇಂಧನ, 2 ನೇ ಹಾಗೂ 4 ನೇ ಹಂತದಲ್ಲಿ ದ್ರವ ಇಂಧನ ತುಂಬಲಾಗಿದೆ ಎಂದು ಇಸ್ರೋ ತಿಳಿಸಿದೆ. ಪ್ರಸ್ತುತ 44.4 ಮೀ. ಎತ್ತರ ಹಾಗೂ 321 ಟನ್ ತೂಕದ PSLV ರಾಕೆಟ್ನ ಒಟ್ಟು ಇಂಧನದ ತೂಕವು ಸರಿ ಸುಮಾರು 9 ಟನ್ ಆಗಿದೆ. ಇದರ ಜೊತೆಗೆ '6' ಬೂಸ್ಟರ್ ಮೋಟಾರ್ಗಳನ್ನು ಒಳಗೊಂಡಿದೆ, ಹಾಗೂ ಇದರ ಇಂಧನ ಸಾಮರ್ಥ್ಯ ಹೆಚ್ಚಿಸಲಾಗಿದೆ. ಈ PSLV-C52 ಮಿಷನ್ ಸಣ್ಣ ಉಪಗ್ರಹಗಳನ್ನು ಹೊತ್ತು ಒಯ್ಯುತ್ತದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೇಸ್ ಸೈನ್ಸ್ & ಟೆಕ್ನಾಲಜಿ ನಿಂದ ವಿದ್ಯಾರ್ಥಿಗಳು ಮಾಡಿದ ಉಪಗ್ರಹ INSPIREsat-1 ಮತ್ತು ಇಸ್ರೋ ನಿರ್ಮಾಣ ಮಾಡಿರುವ INS-2TD ಉಪಗ್ರಹವನ್ನು PSLV-C52 ಮಿಷನ್ ಹೊತ್ತು ಒಯ್ಯಲಿದೆ. ಹಾಗೂ ಅಮೆರಿಕದ ಕೊಲೊರಾಡೋ ವಿಶ್ವವಿದ್ಯಾಲಯದ ವಾಯುಮಂಡಲ ಮತ್ತು ಬಾಹ್ಯಾಕಾಶ ಭೌತಶಾಸ್ತ್ರದ ಪ್ರಯೋಗಾಲಯದ ಸಹಯೋಗದಿಂದ ಈ NSPIREsat-1 ನ್ನು ಈ ಉಪಗ್ರಹ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದ್ದಾರೆ.