Job Description: * ಈ ಮೊದಲು '2' ಬಾರಿ ಚಿನ್ನದ ಪದಕ ಗೆದ್ದಿರುವ ಎಸ್ತರ್‌ ಲಡೇಕ ಅವರು ಈ ಬಾರಿಯ ಬೀಜಿಂಗ್'ನಲ್ಲಿನ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ 3 ನೇ ಚಿನ್ನದ ಪದಕವನ್ನು ಜಯಿಸಿದ್ದಾರೆ. ಇವರು ಸ್ನೋಬೋರ್ಡ್‌ನ ಪ್ಯಾರಲಲ್ ಜೈಂಟ್ ಸ್ಲಲೋಮ್ ವಿಭಾಗದಲ್ಲಿ ಅಮೋಘವಾದ ಸಾಧನೆಯನ್ನು ಮಾಡಿದ್ದಾರೆ ಮಾಡಿದ ಅಷ್ಟೇ ಅಲ್ಲದೇ ವಿಭಿನ್ನ ಕ್ರೀಡೆಗಳಲ್ಲಿ ಚಿನ್ನ ಗೆದ್ದ ಮೊದಲ ಮಹಿಳೆ ಇವರಾಗಿದ್ದಾರೆ. * ಜೆಕ್ ಗಣರಾಜ್ಯದವರಾದ ಎಸ್ತರ್‌ ಅವರು ಈ ಹಿಂದೆ ಪಿಯಾಂಗ್‌ಚಾಂಗ್‌ನಲ್ಲಿ ಸ್ನೋಬೋರ್ಡ್‌ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗೆದಿದ್ದರು. ಅದೇ ವರ್ಷ ಸ್ಕೀಯಿಂಗ್‌ ವಿಭಾಗದಲ್ಲೂ ಚಿನ್ನದ ಪಕದವನ್ನು ಜಯಿಸಿಕೊಂಡಿದ್ದರು. ಈ ಎಸ್ತರ್‌ ಲಡೇಕ ಅವರು ಆಸ್ಟ್ರಿಯಾದ ಡ್ಯಾನಿಯೆಲಾ ಉಲ್‌ಬಿಂಗ್ ಅವರ ವಿರುದ್ಧ ಈ ಸ್ಪರ್ಧೆಯಲ್ಲಿ ಜಸ ಸಾಧಿಸಿದ್ದಾರೆ. ಹಾಗೂ ಸ್ಲೊವೇನಿಯಾದ ಗ್ಲೋರಿಯಾ ಕೊಟ್ನಿಕ್‌ ಕಂಚಿನ ಪದಕವನ್ನು ಜಯಿಸಿಕೊಂಡರು. * ಎಸ್ಟರ್ ಲೆಡೆಕಾ ಅವರು ಜೆಕ್ ಸ್ನೋಬೋರ್ಡರ್ ಮತ್ತು ಆಲ್ಪೈನ್ ಸ್ಕೀಯರ್, ಪ್ಯೊಂಗ್‌ಚಾಂಗ್‌ನಲ್ಲಿ ನಡೆದ 2018 ರ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಲೆಡೆಕಾ ಆಲ್ಪೈನ್ ಸ್ಕೀಯಿಂಗ್‌ನಲ್ಲಿ ಸೂಪರ್'ಜಿ ಮತ್ತು ಸ್ನೋಬೋರ್ಡಿಂಗ್‌ನಲ್ಲಿ ಸಮಾನಾಂತರ ದೈತ್ಯ ಸ್ಲಾಲೋಮ್‌ನಲ್ಲಿ ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದಾರೆ. ಒಂದೇ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಎರಡು ವಿಭಿನ್ನ ರೀತಿಯ ಉಪಕರಣಗಳನ್ನು ಬಳಸಿ ಎರಡು ಚಿನ್ನದ ಪದಕಗಳನ್ನು ಗೆದ್ದ ಮೊದಲ ವ್ಯಕ್ತಿ ಇವರಾಗಿದ್ದಾರೆ. ಎರಡು ಪ್ರತ್ಯೇಕ ವಿಭಾಗಗಳಲ್ಲಿ ಒಲಿಂಪಿಕ್ ಚಿನ್ನವನ್ನು ಗೆದ್ದ 2 ನೇ ಮಹಿಳೆ ಇವರಾಗಿದ್ದಾರೆ. * ಪುರುಷರ ವಿಭಾಗದಲ್ಲಿ ಆಸ್ಟ್ರಿಯಾದ ಬೆಂಜಮಿನ್ ಕರ್ಲ್‌ ಅವರು ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದಾರೆ. ಕರ್ಲ್‌ ಅವರು ಫೈನಲ್‌ ಹಣಾಹಣಿಯಲ್ಲಿ ಸ್ಲೊವೇನಿಯಾದ ಟಿಮ್ ಮಸ್ಟನಕ್‌ ಅವರ ವಿರುದ್ಧ ಗೆದ್ದು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಹಿಂದೆ 2010 ರ ವ್ಯಾಂಕೊವರ್ ಒಲಿಂಪಿಕ್ಸ್‌ನಲ್ಲಿ ಬೆಂಜಮಿನ್ ಕರ್ಲ್‌ ಅವರು ಬೆಳ್ಳಿ ಪದಕ ಗೆದಿದ್ದರು. ಮತ್ತೇ 2014 ರ ಸೋಚಿ ಒಲಿಂಪಿಕ್ಸ್‌ನಲ್ಲಿ '2' ಚಿನ್ನದ ಪದಕವನ್ನು ಜಯಿಸಿ ಸಾಧನೆ ಮಾಡಿದ್ದರು. * ಸ್ವೀಡನ್‌ ದೇಶದ ಜೊನಾ ಸುಂಡ್ಲಿಂಗ್‌ ಅವರು ಮಹಿಳಾ ವಿಭಾಗದ ಕ್ರಾಸ್ ಕಂಟ್ರಿ ಫ್ರೀಸ್ಟೈಲ್ ಸ್ಪ್ರಿಂಟ್‌ನಲ್ಲಿ ಚಿನ್ನದ ಪದಕವನ್ನು ಜಯಸಿಕೊಂಡಿದ್ದಾರೆ. ಹಾಗೂ ಅದೇ ದೇಶದವರಾದ ಮಾಜ ಡಲ್ಗ್‌ವಿಸ್ಟ್ ಬೆಳ್ಳಿ ಪದಕವನ್ನು ಜಯಿಸಿದ್ದಾರೆ. ಹಾಗೂ ಅಮೇರಿಕದ ಜೆಸಿ ಡಿಗಿನ್ಸ್‌ ಅವರು ಕಂಚಿನ ಪದಕವನ್ನು ಗೆದ್ದು ಸಾಧನೆ ಮಾಡಿದ್ದಾರೆ.