Job Description: * ಮಾಲ್ಡೀವ್ಸ್'ನ ಮಾಜಿ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಅವರು ಭಾರತದ ವಿರುದ್ಧ ಆರಂಭಿಸಿದ್ದ ಇಂಡಿಯಾ ಔಟ್ ಅಭಿಯಾನವನ್ನು ವಿರುದ್ಧ ಕಾನೂನನ್ನು ಜಾರಿಗೊಳಿಸಲು ಇದೀಗ ಮಾಲ್ಡೀವ್ಸ್ ಸರ್ಕಾರ ಚಿಂತನೆಯನ್ನು ನಡೆಸಿದೆ. * ಮಾಜಿ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಆರಂಭಿಸಿರುವ ದ್ವೇಷ ಅಭಿಯಾನದಿಂದ ರಾಷ್ಟ್ರೀಯ ಭದ್ರತೆಗೆ ಹಾಗೂ ಅಲ್ಲಿರುವಂತಹ 29,000 ಜನ ಭಾರತೀಯರಿಗೆ, ಅಷ್ಟೇ ಅಲ್ಲದೇ ಭಾರತದಲ್ಲಿರುವ 5,000 ಮಾಲ್ಡೀವ್ಸ್ ಪ್ರಜೆಗಳಿಗೆ ಈ ಅಭಿಯಾನವು ಅಪಾಯ ಉಂಟುಮಾಡಲಿದೆ ಎಂದು ತಿಳಿದು ಇದೀಗ ಮಾಲ್ಡೀವ್ಸ್ ಸರ್ಕಾರವು ಕಾನೂನು ಜಾರಿಗೆ ತರಲು ಯೋಚಿಸುತ್ತಿದೆ. * ಈ ಹಿಂದೆ 2019 ರಲ್ಲಿ ಮಾಜಿ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಸಾಬೀತಾಗಿತ್ತು, ಆಗು ಅವರಿಗೆ 5 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ನೀಡಲಾಗಿತ್ತು. ಇತ್ತೀಚಿಗೆ 2021 ರ ಡಿಸೆಂಬರ್'ನಲ್ಲಿ ಮಾಲ್ಡೀವ್ಸ್'ನ ಸುಪ್ರೀಂ ಕೋರ್ಟ್ ನ ತೀರ್ಪಿನ ನಂತರ ಯಮೀನ್'ನ್ನು ಬಿಡುಗಡೆ ಗೊಳಿಸಲಾಗಿತ್ತು. ಮಾಜಿ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಅವರು ಜೈಲಿಂದ ಬಿಡುಗಡೆಯಾದ ನಂತರ ಈ ಇಂಡಿಯಾ ಔಟ್ ಎಂಬ ಭಾರತ ದ್ವೇಷಿ ಅಭಿಯಾನವು ಮತ್ತಷ್ಟು ಚುರುಕ್ಕಾಗಿತ್ತು. * ಮಾಜಿ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಅವರು ಆಡಳಿದಲ್ಲಿ ಚೀನಾ ದೇಶಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತಿದ್ದರು ಆದರೆ ಭಾರತದ ವಿರುದ್ಧ ಹಗೆತನವನ್ನು ಸಾಧಿಸುತ್ತಿದ್ದರು. ಇಂಡಿಯಾ ಔಟ್ ಎಂಬ ಭಾರತ ದ್ವೇಷ ಅಭಿಯಾನದ ಹಿನ್ನಲೆಯಿಂದಾಗಿ ಮಾಲ್ಡೀವ್ಸ್'ನಲ್ಲಿನ ಇಬ್ಬರು ಭಾರತೀಯ ಮೂಲದ ಶಿಕ್ಷಕರಿಗೆ ಹಿಂಸೆಯನ್ನು ನೀಡಲಾಗಿತ್ತು. * ಇತ್ತೀಚಿಗೆ ಮಾಲ್ಡೀವ್ಸ್ ಸರ್ಕಾರವು ಈ ಇಂಡಿಯಾ ಔಟ್ ಅಭಿಯಾನದಿಂದ ತನ್ನ ದೇಶದ ವಿದೇಶಾಂಗ ನೀತಿಗೆ ಧಕ್ಕೆ ಉಂಟಾಗಲಿದೆ ಎಂದು ತಿಳಿದುಕೊಂಡು ಇದೀಗ ಭಾರತ ವಿರೋಧಿ ಇಂಡಿಯಾ ಔಟ್ ಅಭಿಯಾನದ ವಿರುದ್ಧ ಕಾನೂನು ರೂಪಿಸಲು ಚಿಂತನೆ ನಡೆಸಿದೆ. ಈ ಅಭಿಯಾನದ ವಿರುದ್ಧ ಮಾಲ್ಡೀವ್ಸ್ ಮಾಜಿ ಅಧ್ಯಕ್ಷರಾದ ಮೊಹಮ್ಮದ್ ನಶೀದ್ ಅವರು ಚರ್ಚಿಸಿದರು. * ಪ್ರಸ್ತುತ ಅಧ್ಯಕ್ಷ ಇಬ್ರಾಹಿಮ್ ಮೊಹಮ್ಮದ್ ಸೊಲಿಹ್ ನೇತೃತ್ವದ ಮಾಲ್ಡಿವಿಯನ್ ಡೆಮಾಕ್ರೆಟಿಕ್ ಪಕ್ಷವು ಇಂಡಿಯಾ ಔಟ್ ಅಭಿಯಾನವನ್ನು ಅಪರಾಧಗೊಳಿಸುವ ಕಾನೂನನ್ನು ತಯಾರಿಸುತ್ತಿದೆ. ಈ ಇಂಡಿಯಾ ಔಟ್ ಅಭಿಯಾನದಲ್ಲಿ ಭಾಗಿಯಾದರೆ ಹಾಗೂ ಮಾಲ್ಡೀವ್ಸ್ ನ ವಿದೇಶಾಂಗ ನೀತಿಗೆ ಧಕ್ಕೆ ಉಂಟಾಗುವ ರೀತಿಯಲ್ಲಿ ಯಾರಾದರೂ ನಡೆದುಕೊಂಡವರ ಅಂತವರ ವಿರುದ್ಧ ಕ್ರಮ ಜರುಗಿಸಲಾಗುವದು, ಹಾಗೂ 20,000 ಮಾಲ್ಡೀವಿಯನ್ ರುಫಿಯನ್ ದಂಡ, 6 ತಿಂಗಳು ಅಥವಾ ಒಂದು ವರ್ಷಗಳ ಕಾಲ ಜೈಲು ಶಿಕ್ಷೆ ನೀಡಲಾಗುತ್ತದೆ ಮಾಲ್ಡೀವ್ಸ್ ಸರ್ಕಾರ ತಿಳಿಸಿದೆ. * ಮಾಲ್ಡೀವ್ಸ್ ಇದು ಶ್ರೀಲಂಕಾ ಮತ್ತು ಭಾರತದ ನೈಋತ್ಯದಲ್ಲಿದೆ, ಏಷ್ಯಾ ಖಂಡದ ಮುಖ್ಯ ಭೂಭಾಗದಿಂದ ಸುಮಾರು 750 ಕಿ.ಮೀ. ದೂರದಲ್ಲಿದೆ. ಈ ದೇಶವು ಭೂಪ್ರದೇಶದ ಮೂಲಕ ಅತ್ಯಂತ ಚಿಕ್ಕ ಮುಸ್ಲಿಂ ರಾಷ್ಟ್ರಗಳಲ್ಲಿ ಒಂದಾಗಿದೆ, ಏಷ್ಯಾದಲ್ಲಿ 2 ನೇ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿದೆ. ಹಾಗೂ ಈ ದೇಶವು ವಿಶ್ವದ ಅತ್ಯಂತ ಕೆಳಮಟ್ಟದ ದೇಶವಾಗಿದೆ.