Job Description: * ವಿದ್ಯಾರ್ಥಿಗಳು ಓಬವ್ವ ಆತ್ಮರಕ್ಷಣಾ ಕಲೆಯನ್ನು ಕಲಿಯುವದರಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ, ಧೈರ್ಯ, ಮಾನಸಿಕ ಸದೃಢತೆ ಮತ್ತು ಅವರ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎಂದು ತಿಳಿಸಲಾಗಿದೆ. * ಈ ಓಬವ್ವ ಆತ್ಮರಕ್ಷಣಾ ಕಲೆ-ಸ್ವಯಂ ರಕ್ಷಣಾ ತರಬೇತಿಯನ್ನು ಸಮಾಜಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಸಂಘ ಆಶ್ರಯದಲ್ಲಿರುವ ಹಾಸ್ಟೆಲ್‌, ಶಾಲೆ-ಕಾಲೇಜು ವಿದ್ಯಾರ್ಥಿಗಳು ಸ್ವಯಂ ರಕ್ಷಣೆ ಕಲೆಯ ತರಬೇತಿ ಪಡೆದುಕೊಂಡರು. * ಚಿತ್ರದುರ್ಗದ '7' ಸುತ್ತಿನ ಕೋಟೆಯನ್ನು ಶತ್ರು ಸೇನೆಯು ಮುತ್ತಿಗೆಯನ್ನು ಹಾಕಲು ಸಂಚು ರೂಪಿಸಿದ ಸಂಧರ್ಭದಲ್ಲಿ ಆಗ ವೀರ ಮಹಿಳೆ ಓಬವ್ವ ಹೋರಾಟ ನಡೆಸಿ ಕೋಟೆ ರಕ್ಷಣೆ ಮಾಡಿದಳು. ಒನಕೆ ಓಬವ್ವ ತೋರಿದ ಧೈರ್ಯ, ಶೌರ್ಯ, ಮಹಿಳೆಯರಿಗೆ ಮಾದರಿಯಾಗಿದೆ. ಇದೀಗ ಸರ್ಕಾರವು ಓಬವ್ವ'ನ ಹೆಸರಲ್ಲಿ ಆತ್ಮರಕ್ಷಣಾ ಸ್ವಯಂ ತರಬೇತಿ ಯೋಜನೆ ಜಾರಿಗೊಳಿಸಿದೆ. * ಇದೀಗ ರಾಜ್ಯದ ಸರ್ಕಾರಿ ಹಾಸ್ಟೆಲ್‌ ಮತ್ತು ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೆ ತರಲಾಗಿದೆ. ಪ್ರಸ್ತುತ ರಾಜ್ಯದ 1,700 ವಸತಿ ಶಾಲೆಯ 1.8 ಲಕ್ಷ ವಿದ್ಯಾರ್ಥಿಗಳಿಗೆ ಆತ್ಮರಕ್ಷಣಾ ಸ್ವಯಂ ತರಬೇತಿಯನ್ನು ನೀಡಲಾಗುತ್ತಿದೆ. ಅದರಲ್ಲಿ ವಿದ್ಯಾರ್ಥಿಗಳಿಗೆ ಕರಾಟೆ, ಟೆಕ್ವೆಂಡೊ ಮತ್ತು ಜೂಡೊ ಕಲಿಸಲಾಗುತ್ತದೆ. ಈ ಕಲೆಯು ವಿದ್ಯಾರ್ಥಿಗಳಿಗೆ ಅಪಾಯಕರಾಗಿ ಸನ್ನಿವೇಶದಲ್ಲಿ ತಮ್ಮ ಆತ್ಮರಕ್ಷಣೆ ಮಾಡಿಕೊಳ್ಳಲು ಸಹಾಯಕಾರಿಯಾಗಲಿದೆ ಎಂದು ತಿಳಿಸಿದ್ದಾರೆ. * ಒನಕೆ ಓಬವ್ವ 18 ನೇ ಶತಮಾನದ ಹಿಂದೂ ಯೋಧ ಮಹಿಳೆಯಾಗಿದ್ದಾರೆ, ಇವರು ಭಾರತದ ಕರ್ನಾಟಕ ರಾಜ್ಯದಲ್ಲಿನ ಚಿತ್ರದುರ್ಗ ರಾಜ್ಯದಲ್ಲಿ ಹೈದರ್ ಅಲಿ ಜೊತೆಗೆ ಏಕಾಂಗಿಯಾಗಿ ಹೋರಾಡಿದ ಮಹಿಳೆಯಾಗಿದ್ದಾಳೆ. ಒನಕೆ ಓಬವ್ವನ ಪತಿ ಚಿತ್ರದುರ್ಗದ ಕಲ್ಲಿನ ಕೋಟೆಯ ಕಾವಲುಗಾರನಾಗಿದ್ದ. ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ಓಬವ್ವ ಅವರನ್ನು ಅಬ್ಬಕ್ಕ ರಾಣಿ, ಕೆಳದಿ ಚೆನ್ನಮ್ಮ ಹಾಗೂ ಕಿತ್ತೂರು ಚೆನ್ನಮ್ಮ ಅವರಂತಹ ಅಗ್ರಗಣ್ಯ ಮಹಿಳಾ ಯೋಧರು ಹಾಗೂ ದೇಶಭಕ್ತರಾಗಿ ಇವರ ದಿನವನ್ನು ಆಚರಿಸಲಾಗುತ್ತದೆ. * ಈ ಹಿಂದೆ 1754-1779 ನಡುವೆ ಮದಕರಿ ನಾಯಕನ ಆಳ್ವಿಕೆಯಲ್ಲಿನ ಚಿತ್ರದುರ್ಗ ನಗರವನ್ನು ಹೈದರ್ ಅಲಿ ಪಡೆಗಳು ಮುತ್ತಿಗೆ ಹಾಕಿದವು. ಈ ಹೈದರ್ ಅಲಿ ಪಡೆಯು ಬಂಡೆಗಳ ರಂಧ್ರದ ಮೂಲಕ ಚಿತ್ರದುರ್ಗದ ಕೋಟೆಯನ್ನು ಪ್ರವೇಶ ಪಡೆಯುತ್ತಿದ್ದರು. ಇದನ್ನು ಗಮನಿಸಿದ ಓಬ್ಬವ್ವ ಆಗ ಆ ಸೈನಿಕರ ತಲೆಯ ಮೇಲೆ ಹೊಡೆದು ಒಬ್ಬೊಬ್ಬರಾಗಿ ಕೊಲ್ಲಲು ಆರಂಭಿಸಿದಳು, ಆದರೆ ಅವಳು ಅದೇ ದಿನ ಶತ್ರು ಸೈನಿಕರಿಂದ ಮೃತಪಟ್ಟಳು. ಆಕೆಯ ಧೈರ್ಯ, ಶೌರ್ಯವನ್ನು ಮೆಚ್ಚಿ ಹೈದರ್ ಅಲಿಯ ಸೈನಿಕರು ನುಸುಳಿದ ರಂಧ್ರವನ್ನು ಒನಕೆ ಓಬವ್ವನ ಕಿಂಡಿ ಎಂದು ಕರೆಯಲಾಗುತ್ತದೆ.