Job Description: * ಬಿಲಿಯನೇರ್ ಉದ್ಯಮಿ, ಅದಾನಿ ಗ್ರೂಪ್ ನ ಮುಖ್ಯಸ್ಥ ಗೌತಮ್ ಅದಾನಿ ಅವರು ಸುಮಾರು 2 ಬಿಲಿಯನ್ ಡಾಲರ್‌ಗಳಷ್ಟು ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಇತ್ತೀಚಿಗೆ ಅದಾನಿ ಅವರ ವಿಲ್ಮರ್ ಷೇರು ಮಾರುಕಟ್ಟೆಯಲ್ಲಿ ಅವರ ಮೊದಲ ದಿನವು ಸುಮಾರು 35,467.5 ಕೋಟಿ ರೂ. ಮೌಲ್ಯದೊಂದಿಗೆ ಕೊನೆಯಾಗಿದೆ ಎಂದು ವರದಿಯಾಗಿದೆ. * ಪ್ರಸ್ತುತ ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಪ್ರಕಾರ ಅದಾನಿ ಗ್ರೂಪ್ ನ ಮುಖ್ಯಸ್ಥ ಗೌತಮ್ ಅದಾನಿ ಅವರು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರನ್ನು ಹಿಂದಿಕ್ಕಿದ್ದಾರೆ, ಇದೀಗ ಅದಾನಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರ ಹೊಮ್ಮಿದ್ದಾರೆ. * ಇತ್ತೀಚಿಗಿನ ಫೋರ್ಬ್ಸ್‌ನ ರಿಯಲ್-ಟೈಮ್ ಬಿಡುಗಡೆ ಮಾಡಿರುವ ಬಿಲಿಯನೇರ್ ಪಟ್ಟಿಯಲ್ಲಿ ಗೌತಮ್ ಅದಾನಿ ಅವರು ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿ ಭಾರತೀಯ ಶ್ರೀಮಂತ ವ್ಯಕ್ತಿಯಾಗಿದ್ದಾರೆ. * ಗೌತಮ್ ಅದಾನಿ ಅವರು ಇತ್ತೀಚಿಗೆ ಕಳೆದ 1 ವರ್ಷದಲ್ಲಿ ದಿನಕ್ಕೆ 1002 ಕೋಟಿ ಆದಾಯವನ್ನು ಗಳಿಸಿರುವ ಏಷ್ಯಾದ 2 ನೇ ಅತಿದೊಡ್ಡ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಇದೀಗ ಅದಾನಿ ಗ್ರೂಪ್ ಮಾಲೀಕತ್ವದ ಮೌಲ್ಯವು 15,166 ಕೋಟಿ ರೂ. ಏರಿಕೆ ಯಾಗಿದೆ. * ಪ್ರಸ್ತುತ ದೇಶದ ಅತಿದೊಡ್ಡ ಗ್ರಾಹಕ ಸರಕುಗಳ ಕಂಪನಿ ಅದಾನಿ ವಿಲ್ಮಾರ್ ಇದು ಅಹಮದಾಬಾದ್ ಮೂಲದ ಎಫ್‌ಎಂಸಿಜಿ ಷೇರುಗಳಲ್ಲಿ ಪಟ್ಟಿ ಮಾಡಲಾಗಿರುವ ಆದಾಯದ ಕಂಪನಿಯಾಗಿದೆ. ಈ ಕಂಪನಿಯು 2020-2021 ರ ಹಣಕಾಸು ವರ್ಷದಲ್ಲಿ, AWL ನ ಆದಾಯವು ಸರಿ ಸುಮಾರು 37,196 ಕೋಟಿ ರೂ.ಯಾಗಿತ್ತು. ಇದೇ ಕಂಪನಿಯು 21-22 ಹಣಕಾಸು (ಏಪ್ರಿಲ್-ಸೆಪ್ಟೆಂಬರ್)ವರ್ಷದಲ್ಲಿ ಸುಅಮರು 24,957 ಕೋಟಿ ರೂ. ಆದಾಯವನ್ನು ಗಳಿಸಿಕೊಂಡಿದೆ. * ಈ ಹಿಂದೆ 1999 ರ ಜನವರಿಯಲ್ಲಿ ಅದಾನಿ ವಿಲ್ಮಾರ್ ನ್ನು ಅಹಮದಾಬಾದ್‌ನ ಸಬರಮತಿ ನದಿ ಪ್ರದೇಶದಲ್ಲಿ ಸ್ಥಾಪನೆ ಮಾಡಲಾಗಿದೆ. ಈ ಕಂಪನಿಯು ಕಳೆದ ಎರಡು ದಶಕಗಳಲ್ಲಿ ದೇಶದ ಅತಿದೊಡ್ಡ ಖಾದ್ಯ ತೈಲ ಕಂಪನಿಯಾಗಿ ಹೊರ ಹೊಮ್ಮಿದೆ. * ಪ್ರಸ್ತುತ ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ ಗೌತಮ್ ಅದಾನಿ ಗ್ರೂಪ್‌ ನ 59 ವರ್ಷದ ನಿವ್ವಳ ಮೌಲ್ಯವು USD 88.5 ಬಿಲಿಯನ್ ಆಗಿದೆ ಎಂದು ಹೇಳಿದೆ. ಹಾಗೂ ಇದೇ ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಪ್ರಕಾರ ಅದಾನಿಯವರ ನಿವ್ವಳ ಮೌಲ್ಯವು ರಿಲಯನ್ಸ್ ಇಂಡಸ್ಟ್ರೀಸ್ ನಿವ್ವಳ ಮೌಲ್ಯ 87.9 ಶತಕೋಟಿ USDಗಿಂತಲೂ ಹೆಚ್ಚಿಗೆಯಿದೆ. ಇದೀಗ ಗೌತಮ್ ಅದಾನಿ ಅವರ ನಿವ್ವಳ ಮೌಲ್ಯವು USD 12 ಶತಕೋಟಿಗೆ ಏರಿಕೆಯಾಗಿದೆ. ಇದೀಗ ಅದಾನಿ ಈ ವರ್ಷ ವಿಶ್ವದ ಅತಿದೊಡ್ಡ ಆಸ್ತಿ ಗಳಿಸಿದ ವ್ಯಕ್ತಿಯಾಗಿದ್ದಾರೆ. * ಈ ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಎಲೋನ್ ಮಸ್ಕ್ ಅವರು ಅಗ್ರಸ್ಥಾನದಲ್ಲಿದ್ದಾರೆ. ಹಾಗೂ ಜೆಫ್ ಬೆಜೋಸ್, ಬರ್ನಾರ್ಡ್ ಅರ್ನಾಲ್ಟ್, ಬಿಲ್ ಗೇಟ್ಸ್ ಹಾಗೂ ಲ್ಯಾರಿ ಪೇಜ್ ನಂತರದ ಸ್ಥಾನಗಳಲ್ಲಿದ್ದಾರೆ. ವಾರೆನ್ ಬಫೆಟ್ ಅವರು USD 115 ಬಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿ 7 ನೇ ಸ್ಥಾನದಲ್ಲಿದ್ದಾರೆ. ಗೌತಮ್ ಅದಾನಿ ಹಾಗೂ ಮುಖೇಶ್ ಅಂಬಾನಿ ಅವರು ಕ್ರಮವಾಗಿ 10 ಮತ್ತು 11 ನೇ ಸ್ಥಾನದಲ್ಲಿದ್ದಾರೆ.