Job Description: * ಪ್ರಸ್ತುತ ಚೀನಾದ ಬೀಜಿಂಗ್'ನಲ್ಲಿ ಆರಂಭವಾಗಿರುವ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ನಾರ್ವೆಯ ಕ್ರಾಸ್ ಕಂಟ್ರಿ ಸ್ಕೀಯಿಂಗ್ ಪಟು ಆಗಿರುವ ಥೆರೆಜ್ ಜೊಹಾಗ್ ಅವರು ಮೊದಲ ಚಿನ್ನದ ಪದಕವನ್ನು ಜಯಿಸಿಕೊಂಡಿದ್ದಾರೆ. ಹಾಗೂ ಇವರು ಒಲಿಂಪಿಕ್ಸ್‌ನ ಸ್ಪರ್ಧೆಯಲ್ಲಿ ಮಹಿಳೆಯರ 7.5 ಕಿ.ಮೀ. ಸ್ಕಿಯಾಥ್ಲಾನ್‌ನಲ್ಲಿ ಮೊದಲನೆಯವರಾಗಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಚಳಿಗಾಲದ ಒಲಿಂಪಿಕ್ಸ್‌ನ ಕ್ರಾಸ್ ಕಂಟ್ರಿಯಲ್ಲಿ ನಾರ್ವೆಗೆ ಲಭಿಸಿದ ಪ್ರಥಮ ಚಿನ್ನದ ಪಾದಕವಾಗಿದೆ. * ಈ ಚಳಿಗಾಲದ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಜ್ಯೋತಿ ಬೆಳಗಿದ 20 ವರ್ಷದ ದಿನಿಗ್ಯರ್ ಯಿಲಾಮುಜಿಯಾನ ಸ್ಕಿಯಾಥ್ಲಾನ್ ರೇಸ್‌ನಲ್ಲಿ 43 ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. * ಪ್ರಸ್ತುತ ಜರ್ಮನಿಯ ಕ್ಲಾಡಿಯಾ ಪೆಚ್‌ಸ್ಟೀನ್ ಅವರು ಈ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಅತಿ ಹಿರಿಯ ಮಹಿಳಾ ಕ್ರೀಡಾಪಟು ಆಗಿದ್ದಾರೆ. ಪ್ರಸ್ತುತ ಸ್ಪೀಡ್‌ ಸ್ಕೇಟಿಂಗ್ ಸ್ಪರ್ಧೆಯಲ್ಲಿ 49 ವರ್ಷದ ಕ್ಲಾಡಿಯಾ ಅವರ ಭಾಗವಹಿಸಿದ್ದರು. ಇವರು ಜರ್ಮನಿಯಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಒಟ್ಟಾರೆ '8' ಒಲಿಂಪಿಕ್ಸ್‌ಗಳಲ್ಲಿ ಭಾಗವಹಿಸಿದ ಮೊದಲ ಮಹಿಳೆಯಾಗಿದ್ದಾರೆ. * ಈ ಹಿಂದೆ 1992 ರಲ್ಲಿ ಇವರು ಮೊದಲ ಬಾರಿ ಚಳಿಗಾಲದ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ್ದರು. ಇವರು ಇಲ್ಲಿಯವರೆಗೆ ಒಟ್ಟು '5' ಚಿನ್ನದ ಪದಕವನ್ನು ಜಯಿಸಿದ್ದಾರೆ. ಇವರು ಅಲ್ಲಿ ನಡೆದ 3000 ಮೀ. ಸ್ಪರ್ಧೆಯಲ್ಲಿ ಕೊನೆಯ ಸ್ಥಾನವನ್ನು ಪಡೆದುಕೊಂಡರು. ಇವರ ಈ ಮೊದಲಿನ ದಾಖಲೆಯನ್ನು ನೆದರ್ಲೆಂಡ್ಸ್‌ನ ಐರಿನ್ ಶಾಟೆನ್‌ ಅವರು ಮುರಿದಿದ್ದಾರೆ. * ಈ ಮೊದಲು ಅಮೆರಿಕಾದ ಒಲಿಂಪಿಕ್ಸ್ ಕ್ರೀಡಾ ಪಟು ಆಯನಿ ಅಬೆರ್ನತಿ ಅವರು ಒಲಿಂಪಿಕ್ಸ್ ಗೇಮ್ಸ್‌ನಲ್ಲಿ ಭಾಗವಹಿಸಿದ ಅತಿ ಹಿರಿಯ ಮಹಿಳಾ ಕ್ರೀಡಾ ಪಟುವಾಗಿದ್ದರು, ಇದೀವ ಇವರ ದಾಖಲೆಯನ್ನು ಜರ್ಮನಿಯ ಕ್ಲಾಡಿಯಾ ಪೆಚ್‌ಸ್ಟೀನ್ ಅವರು ಅಳಿಸಿಹಾಕಿದ್ದಾರೆ. ಅಮೆರಿಕಾದ ಒಲಿಂಪಿಕ್ಸ್ ಕ್ರೀಡಾ ಪಟು ಆಯನಿ ಅಬೆರ್ನತಿ ಅವರು ತಮ್ಮ 48 ವರ್ಷ ವಯಸ್ಸಿನಲ್ಲಿ 2002 ರ ಒಲಿಂಪಿಕ್ಸ್‌ನಲ್ಲಿ ಭಾಗಿಯಾಗಿದ್ದರು.