Job Description: * ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ಅವರು ನಿಧನರಾಗಿದ್ದಾರೆ. ಇವರು ಸೂಫಿ ಸಂತ, ಹಾಗೂ ತತ್ವಪದ ಗಾಯಕರಾಗಿದ್ದರು. ಇವರು ತಮ್ಮ ಪ್ರವಚನ ಹಾಗೂ ಸಂವಾದಗಳಿಂದ ಹಿಂದೂ-ಮುಸ್ಲೀಮರ ನಡುವೆ ಭಾವೈಕ್ಯತೆಯನ್ನು ಮೂಡಿಸಿದ್ದರು. ಇವರು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ನಗರದ ನಿವಾಸಿಯಾಗಿದ್ದರು. * ಕಬೀರ ಸಂತ, ಪದ್ಮಶ್ರೀ ಇಬ್ರಾಹಿಂ ಸುತಾರ ಅವರ ನಿಧನಕ್ಕೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಅವರು ಸಂತಾಪವನ್ನು ಸೂಚಿಸಿದ್ದಾರೆ. * ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ನಗರದ ನಿವಾಸಿಯಾಗಿದ್ದ ಇಬ್ರಾಹಿಂ ಸುತಾರ ಅವರು, ಕುರಾನ್ ಅಧ್ಯಯನ ಮಾಡಿ. ಜೊತೆಗೆ ಬೇರೆ ಬೇರೆ ಧರ್ಮಗ್ರಂಥಗಳಲ್ಲಿ ಸಾರವನ್ನು ತಿಳಿದುಕೊಳ್ಳುಲು ಆರಂಭಿಸಿದರು. ಅಷ್ಟೇ ಅಲ್ಲದೇ ಇವರು ಸಾಮರಸ್ಯದ ಕೊಂಡಿಯಾಗಿದ್ದರು, ಸೌಹಾರ್ದ ಸಮಾಜದ ಪ್ರತಿಪಾದಕರಾಗಿದ್ದರು ಹಾಗೂ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. * ಇಬ್ರಾಹಿಂ ಸುತಾರ್ ಅವರು 1940 ರ ಮೇ 10 ರಂದು ಜನಿಸಿದ್ದರು. ಇವರು ಇತ್ತೀಚಿಗೆ 2022 ರ ಫೆಬ್ರವರಿ. 05 ರಂದು ನಿಧನರಾಗಿದ್ದಾರೆ. ಇವರೊಬ್ಬ ಭಾರತೀಯ ಸಮಾಜ ಸೇವಕ ಹಾಗೂ ಕವಿ, ಮತ್ತು ಭಾರತದ 4 ನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿರುವ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇಬ್ರಾಹಿಂ ಸುತಾರ್ ಅವರಿಗೆ 'ಕನ್ನಡದ ಕಬೀರ' ಎಂಬ ಅಡ್ಡಹೆಸರನ್ನು ನೀಡಲಾಗಿದೆ. * ಇಬ್ರಾಹಿಂ ಸುತಾರ್ ಅವರು ಈ ಹಿಂದೆ 1970 ರಲ್ಲಿ, ಹಾರ್ಮನಿ ಜಾನಪದ ಸಂಗೀತ ಮೇಳವನ್ನು ಸ್ಥಾಪಿಸಿದ್ದರು ಹಾಗೂ ಕರ್ನಾಟಕ ಮತ್ತು ನೆರೆಯ ರಾಜ್ಯಗಳಾದ್ಯಂತ ಭಕ್ತಿ ಗಾಯನ, ಆಧ್ಯಾತ್ಮಿಕ ಪ್ರವಚನಗಳನ್ನು ಜನರಿಗೆ ತಿಳಿಸಲು ಆರಂಭಿಸಿದ್ದರು. * * ಇಬ್ರಾಹಿಂ ಸುತಾರ್ ಅವರು ಪಡೆದಿರುವ ಪ್ರಶಸ್ತಿಗಳು : - 2018 ರಲ್ಲಿ ಪದ್ಮಶ್ರೀ ಪ್ರಶಸ್ತಿ. - 1995 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ.