Job Description: * ಇದೀಗ DCGI ಭಾರತದಲ್ಲಿ ಸಿಂಗಲ್-ಡೋಸ್ ಸ್ಪುಟ್ನಿಕ್ ಲೈಟ್(Single-dose Sputnik Light) ಕೋವಿಡ್-19 ಲಸಿಕೆಯನ್ನು ತುರ್ತು ಬಳಕೆ ಮಾಡಲು ಅನುಮತಿಯನ್ನು ನೀಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯ ಅವರು ತಿಳಿಸಿದ್ದಾರೆ. * ಪ್ರಸ್ತುತ ದೇಶದಲ್ಲಿ ಕೋವಿಡ್-19 ಲಸಿಕೆಯನ್ನು ತುರ್ತು ಬಳಕೆ ಮಾಡಲು ಅನುಮೋದನೆ ಪಡೆದಿರುವ 9 ನೇ ಕೋವಿಡ್-19 ಲಸಿಕೆ ಇದಾಗಿದೆ. * ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಇದೊಂದು ಭಾರತ ಸರ್ಕಾರದ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್‌ನ ವಿಭಾಗದ ಮುಖ್ಯ ಸಂಸ್ಥೆಯಾಗಿದೆ, ರಕ್ತ ಹಾಗೂ ರಕ್ತ ಉತ್ಪನ್ನಗಳು, IV ದ್ರವಗಳು, ಲಸಿಕೆಗಳು ಹಾಗೂ ಸೆರಾಗಳಂತಹ ನಿರ್ದಿಷ್ಟ ವರ್ಗಗಳ ಔಷಧಿಗಳ ಪರವಾನಗಿಗಳ ಅನುಮೋದನೆ ನೀಡುವ ಜವಾಬ್ದಾರಿಯನ್ನು ಹೊಂದಿದೆ. ಈ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ, ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. * ಪ್ರಸ್ತುತ DCGI ಭಾರತದಲ್ಲಿ ಔಷಧಗಳ ತಯಾರಿಕೆ, ಹಾಗೂ ಮಾರಾಟ, ಆಮದು, ವಿತರಣೆಗೆ ಮಾನದಂಡಗಳನ್ನು ನಿಗದಿಪಡಿಸುವ ಜವಾಬ್ದಾರಿಯನ್ನು ಹೊಂದಿದೆ. - ರಾಷ್ಟ್ರೀಯ ಉಲ್ಲೇಖ ಮಾನದಂಡದ ತಯಾರಿಕೆ ಹಾಗೂ ನಿರ್ವಹಣೆ. - ಡ್ರಗ್ಸ್ ಹಾಗೂ ಕಾಸ್ಮೆಟಿಕ್ಸ್ ಕಾಯ್ದೆಯ ಜಾರಿಯಲ್ಲಿ ಏಕರೂಪತೆಯನ್ನು ತರಲಿದೆ. - ರಾಜ್ಯ ಔಷಧ ನಿಯಂತ್ರಣ ಪ್ರಯೋಗಾಲಯಗಳು ಹಾಗೂ ಇತರ ಸಂಸ್ಥೆಗಳಿಂದ ನಿಯೋಜಿಸಲಾದ ಔಷಧ ವಿಶ್ಲೇಷಕರ ತರಬೇತಿಯನ್ನು ನೀಡಲಿದೆ. - ಸೆಂಟ್ರಲ್ ಡ್ರಗ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್(CDSCO) ವತಿಯಿಂದ ಸಮೀಕ್ಷೆಯ ಮಾದರಿಗಳಾಗಿ ಸ್ವೀಕರಿಸಿದ ಸೌಂದರ್ಯವರ್ಧಕಗಳ ವಿಶ್ಲೇಷಣೆ ಮಾಡಲಿದೆ. * ಭಾರತ ಸರ್ಕಾರವು ವೈದ್ಯಕೀಯ ಸಾಧನ ನಿಯಮಗಳು 2017 ರ ಅಧಿಸೂಚನೆ ಜೊತೆಗೆ DCGI ಈ ನಿಯಮಗಳ ವ್ಯಾಪ್ತಿಯಲ್ಲಿ ಬರುವ ವೈದ್ಯಕೀಯ ಸಾಧನಗಳಿಗೆ ಕೇಂದ್ರೀಯ ಪರವಾನಗಿ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸುತ್ತದೆ. ವೈದ್ಯಕೀಯ ವರ್ಗ A ನಿಂದ ವರ್ಗ D ವರೆಗಿನ ಎಲ್ಲ '4' ವರ್ಗದ ವೈದ್ಯಕೀಯ ಸಾಧನಗಳಲ್ಲಿ, DCGI ವರ್ಗ C ಮತ್ತು ವರ್ಗ D ಸಾಧನಗಳಿಗೆ ನೇರ ಪರವಾನಗಿಯ ಪ್ರಾಧಿಕಾರವಾಗಿರಲಿದೆ. ಆದರೆ ಈ DCGI ರಾಜ್ಯ ಔಷಧ ನಿಯಂತ್ರಕಗಳ ಮೂಲಕ ವರ್ಗ A ಮತ್ತು B ಸಾಧನಗಳಿಗೆ ಪರವಾನಗಿಯನ್ನು ಸಂಘಟಿಸಲಿದೆ, ಹಾಗೂ ರಾಜ್ಯವಾಗಿ ಕಾರ್ಯ ನಿರ್ವಹಿಸುವ ಪರವಾನಗಿ ಪ್ರಾಧಿಕಾರವಾಗಿದೆ. * ಸರ್ಕಾರವು ಈ ಹಿಂದೆ 2019 ರ ಆಗಸ್ಟ್. 14 ರಂದು Dr. ವಿ. ಜಿ. ಸೋಮಾನಿ ಅವರನ್ನು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಆಗಿ ನೇಮಿಸಿತು. ಈ DCGI ಭಾರತೀಯ ಔಷಧ ನಿಯಂತ್ರಣ ಸಂಸ್ಥೆಯಾದ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್'ನ ಮುಖ್ಯಸ್ಥರಾಗಿದ್ದಾರೆ, ಹಾಗೂ ಇದು ದೇಶದಲ್ಲಿ ಮಾರಾಟವಾಗುವ ಔಷಧಗಳು ಹಾಗೂ ಸೌಂದರ್ಯವರ್ಧಕಗಳ ಗುಣಮಟ್ಟವನ್ನು ಖಚಿತಪಡಿಸುತ್ತದೆ. ಅಷ್ಟೇ ಅಲ್ಲದೇ ಹೊಸ ಔಷಧಿಗಳ ಅನುಮೋದನೆ ಹಾಗೂ ಕ್ಲಿನಿಕಲ್ ಪ್ರಯೋಗಗಳನ್ನು ನಿಯಂತ್ರಿಸುತ್ತದೆ. * * ಕೇಂದ್ರ ಸರ್ಕಾರವು ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ನ 6 ವಲಯ ಕಚೇರಿಗಳು : ಮುಂಬೈ, ಕೋಲ್ಕತ್ತಾ, ಚೆನ್ನೈ, ಹಾಗೂ ಗಾಜಿಯಾಬಾದ್, ಹೈದರಾಬಾದ್, ಅಹಮದಾಬಾದ್. ಹಾಗೂ ವಿವಿಧ ಉಪ-ವಲಯ ಕಚೇರಿಗಳು ಹಾಗೂ ಬಂದರು ಕಚೇರಿಗಳನ್ನು ಸ್ಥಾಪಿಸಿದೆ. ಹಾಗೂ ರಾಜ್ಯ ನಿಯಂತ್ರಣ ಆಡಳಿತ ಹಾಗೂ ಔಷಧ ಕಾಯಿದೆಯ ಏಕರೂಪದ ಜಾರಿಯನ್ನು ಭದ್ರಪಡಿಸುವಲ್ಲಿ CDSCO ಸಹಾಯ ಮಾಡುತ್ತದೆ.