Job Description: * ಭಾರತ ರತ್ನ ಪುರಸ್ಕೃತೆ, ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರು ನಿಧನರಾಗಿದ್ದಾರೆ. ಇವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಶಿವಾಜಿ ಪಾರ್ಕ್ ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗಿದೆ. * ಲತಾ ಮಂಗೇಶ್ಕರ್ ಅವರು ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ದವ್ ಠಾಕ್ರೆ, ಇನ್ನು ಅನೇಕರು ಸಂತಾಪವನ್ನು ಸೂಚಿಸಿದ್ದಾರೆ. * ಲತಾ ಮಂಗೇಶ್ಕರ್ ಅವರು 1929 ರ ಸೆಪ್ಟೆಂಬರ್. 28 ರಂದು ಜನಿಸಿದ್ದರು. ಇತ್ತೀಚಿಗೆ 2022 ರ ಫೆಬ್ರವರಿ. 06 ರಂದು ನಿಧನರಾಗಿದ್ದಾರೆ. ಇವರೊಬ್ಬ ಭಾರತೀಯ ಹಿನ್ನೆಲೆ ಗಾಯಕಿ ಹಾಗೂ ಸಾಂದರ್ಭಿಕ ಸಂಗೀತ ಸಂಯೋಜಕಿಯಾಗಿದ್ದರು. ಇವರು ಭಾರತದಲ್ಲಿನ ಶ್ರೇಷ್ಠ ಹಾಗೂ ಅತ್ಯಂತ ಪ್ರಭಾವಶಾಲಿ ಗಾಯಕರಾಗಿದ್ದರು. ಇವರು '7' ದಶಕಗಳ ಕಾಲದ ವೃತ್ತಿಜೀವನದಲ್ಲಿ ಭಾರತೀಯ ಸಂಗೀತ ವಿಭಾಗಕ್ಕೆ ಆಪಾರ ಕೊಡುಗೆ ನೀಡಿದ್ದಾರೆ, ಇವರು ನೈಟಿಂಗೇಲ್ ಆಫ್ ಇಂಡಿಯಾ, ವಾಯ್ಸ್ ಆಫ್ ದಿ ಮಿಲೇನಿಯಮ್ ಮತ್ತು ಕ್ವೀನ್ ಆಫ್ ಮೆಲೋಡಿ ಮುಂತಾದ ಗೌರವಾನ್ವಿತ ಬಿರುದುಗಳನ್ನು ಪಡೆದಿದ್ದಾರೆ. * ಲತಾ ಮಂಗೇಶ್ಕರ್ ಅವರು 36 ಭಾರತೀಯ ಭಾಷೆಗಳಲ್ಲಿ ಹಾಗೂ ಕೆಲವು ವಿದೇಶಿ ಭಾಷೆಗಳಲ್ಲಿ ಹಾಡುಗಳನ್ನು ಧ್ವನಿಮುದ್ರಿಸಿದ್ದಾರೆ. ಇವರು ಪ್ರಾಥಮಿಕವಾಗಿ ಹಿಂದಿ, ಬಂಗಾಳಿ ಹಾಗೂ ಮರಾಠಿಯಲ್ಲಿ ಹಾಡುಗಳನ್ನು ಧ್ವನಿಮುದ್ರಿಸಿದ್ದಾರೆ. ಇವರಿಗೆ ಈ ಹಿಂದೆ 1989 ರಲ್ಲಿ ಭಾರತ ಸರ್ಕಾರವು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಲಾಯಿತು. ಮತ್ತೇ ಇವರಿಗೆ 2001 ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನವನ್ನು ನೀಡಲಾಯಿತು. ಈ ಮೊದಲು M. S. ಸುಬ್ಬುಲಕ್ಷ್ಮಿ ಅವರು ಭಾರತ ರತ್ನ ಪ್ರಶಸ್ತಿ ಗೌರವವನ್ನು ಪಡೆದುಕೊಂಡಿದ್ದರು, ಅವರ ನಂತರ ಭಾರತ ರತ್ನ ಪ್ರಶಸ್ತಿ ಪಡೆದ 2 ನೇ ಮಹಿಳಾ ಗಾಯಕಿ ಲತಾ ಮಂಗೇಶ್ಕರ್ ಅವರಾಗಿದ್ದಾರೆ. * ಈ ಹಿಂದೆ 2007 ರಲ್ಲಿ ಫ್ರಾನ್ಸ್ ತನ್ನ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನ್ಯಾಷನಲ್ ಆರ್ಡರ್ ಆಫ್ ದಿ ಲೀಜನ್ ಆಫ್ ಆನರ್ ಅಧಿಕಾರಿಯಾಗಿ ನೀಡಲಾಗಿದೆ. ಇವರು '3' ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ಹಾಗೂ 15 ಬಂಗಾಳ ಚಲನಚಿತ್ರ ಪತ್ರಕರ್ತರ ಸಂಘದ ಪ್ರಶಸ್ತಿಗಳುನ್ನು, '4' ಫಿಲ್ಮ್‌ಫೇರ್ ಅತ್ಯುತ್ತಮ ಮಹಿಳಾ ಹಿನ್ನೆಲೆ ಪ್ರಶಸ್ತಿಗಳು, ಹಾಗೂ '2' ಫಿಲ್ಮ್‌ಫೇರ್ ವಿಶೇಷ ಪ್ರಶಸ್ತಿಗಳು, ಇದರ ಜೊತೆಗೆ ಫಿಲ್ಮ್‌ಫೇರ್ ಜೀವಮಾನ ಸಾಧನೆ ಪ್ರಶಸ್ತಿಗಳನ್ನು ಪಡೆದಿದ್ದಾರೆ. * ಈ ಹಿಂದೆ 1974 ರಲ್ಲಿ ಲಂಡನ್‌ನ ರಾಯಲ್ ಆಲ್ಬರ್ಟ್ ಹಾಲ್‌ನಲ್ಲಿ ಪ್ರದರ್ಶನ ನೀಡಿದ ಮೊದಲ ಭಾರತೀಯ ಹಿನ್ನೆಲೆ ಗಾಯಕರಲ್ಲಿ ಇವರು ಒಬ್ಬರಾಗಿದ್ದಾರೆ.