Job Description: * ಇತ್ತೀಚಿಗೆ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಭಾರತದ ಹಾಕಿ ತಂಡದ ನಾಯಕ ಚರಣ್‌ಜಿತ್‌ ಅವರು ಹಿಮಾಚಲ ಪ್ರದೇಶದ ಉನಾ ಪ್ರದೇಶದಲ್ಲಿ ನಿಧನರಾಗಿದ್ದಾರೆ, ಈ ಹಿಂದೆ 1964 ರಲ್ಲಿ ಜಪಾನ್‌ನ ಟೋಕಿಯೊದಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಭಾರತೀಯ ಹಾಕಿ ತಂಡದ ನಾಯಕ ಇವರಾಗಿದ್ದಾರೆ. * ಭಾರತೀಯ ಹಾಕಿ ತಂಡವು 1964 ರ ಒಲಿಂಪಿಕ್ಸ್‌ನಲ್ಲಿ ಚರಣ್‌ಜಿತ್‌ ಸಿಂಗ್‌ ನಾಯಕತ್ವದಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿ ಚಿನ್ನದ ಪದಕವನ್ನು ಜಯಸಿತ್ತು. ಅದಕ್ಕೂ ಮೊದಲು 1960 ರ ಒಲಿಂಪಿಕ್ಸ್‌ ನಲ್ಲಿ ಬೆಳ್ಳಿ ಪದಕ ಜಯಿಸಿರುವ ಭಾರತ ತಂಡದ ಸದಸ್ಯರಾಗಿದ್ದರು. * ಭಾರತೀಯ ಹಾಕಿ ತಂಡವು 1962 ರ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕವನ್ನು ಜಯಿಸಿತ್ತು ಆಗಲು ಚರಣ್‌ಜಿತ್‌ ಸಿಂಗ್‌ ಅವರು ಭಾರತ ಹಾಕಿ ತಂಡದ ಸದಸ್ಯರಾಗಿದ್ದರು. * ಭಾರತ ಪುರುಷರ ರಾಷ್ಟ್ರೀಯ ಹಾಕಿ ತಂಡವು ಅಂತರಾಷ್ಟ್ರೀಯ ಫೀಲ್ಡ್ ಹಾಕಿ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸುತ್ತದೆ. ಹಾಕಿ ಕ್ರೀಡೆಯು ಭಾರತದಿಂದ ನಿಯಂತ್ರಿಸಲ್ಪಡುತ್ತದೆ. ಈ ಮೊದಲು ಹಾಕಿ ತಂಡವು ಹಿಂದೆ ಭಾರತೀಯ ಹಾಕಿ ಫೆಡರೇಶನ್‌ನ ನಿಯಂತ್ರಣದಲ್ಲಿತ್ತು. ಭಾರತ ಹಾಕಿ ತಂಡವು 1928 ರಲ್ಲಿ ಮೊದಲ ಬಾರಿ ಒಲಿಂಪಿಕ್ ನಲ್ಲಿ ಚಿನ್ನದ ಪದಕವನ್ನು ಜಯಿಸಿದೆ. ಭಾರತೀಯ ಪುರುಷರ ತಂಡವು ಒಲಿಂಪಿಕ್ಸ್‌ನಲ್ಲಿ ಸತತ '6' ಚಿನ್ನದಗಳನ್ನೂ ಜಯಿಸಿಕೊಂಡಿದೆ. * ಭಾರತದ ಹಾಕಿ ತಂಡವು ಒಲಿಂಪಿಕ್ಸ್‌ನಲ್ಲಿ ಇಲ್ಲಿಯವರೆಗೂ ಅತ್ಯಂತ ಯಶಸ್ವಿ ತಂಡವಾಗಿದೆ, 1928, 1932, 1936, 1948, 1952, 1956, 1964, ಹಾಗೂ 1980 ರಲ್ಲಿ ಒಟ್ಟಾರೆ '8' ಚಿನ್ನದ ಪದಕಗಳನ್ನು ಜಯಿಸಿದೆ. ಭಾರತೀಯ ಹಾಕಿ ತಂಡವು ಈ ಹಿಂದೆ 1928 ಹಾಗೂ 1956 ರಲ್ಲಿ ಒಂದೇ ಒಂದು ಗೋಲುನ್ನು ಎದುರಾಳಿ ತಂಡಕ್ಕೆ ಬಿಟ್ಟುಕೊಡದೆ ಒಲಿಂಪಿಕ್ಸ್ ನಲ್ಲಿ ಗೆದ್ದ ಏಕೈಕ ತಂಡವಾಗಿ ಹೊರ ಹೊಮ್ಮಿದ ಇತಿಹಾಸವಿದೆ. * ಭಾರತೀಯ ಪುರುಷರು ಹಾಕಿತಂಡವು 1966, 1998 ಹಾಗೂ 2014 ರಲ್ಲಿ ಒಟ್ಟು '3' ಬಾರಿ ಏಷ್ಯನ್ ಗೇಮ್ಸ್'ನಲ್ಲಿ ಜಯಗಳಿಸಿದೆ. ಏಷ್ಯಾದ ಅತ್ಯಂತ ಯಶಸ್ವಿ ತಂಡಗಳಲ್ಲಿ ಭಾರತವು ಕೂಡ ಒಂದಾಗಿದೆ. ಭಾರತವು ಇಲ್ಲಿಯವರೆಗೆ 27 ಅಧಿಕೃತ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಜಯಿಸಿದೆ.