Job Description: * ಇಲ್ಲಿಯವರೆಗೆ ಉಚಿತವಾಗಿ ಸರ್ಕಾರದಿಂದ ಸಾರ್ವಜನಿಕರಿಗೆ ಕೊರೋನಾ ಲಸಿಕೆ ನೀಡೋದಕ್ಕೆ ಡಿಸಿಜಿಐ ಪರವಾನಿಗೆಯನ್ನು ನೀಡಿತ್ತು. ಇದೀಗ ಕೋವಿಡ್-19 ಲಸಿಕೆಗಳನ್ನು ಮಾರುಕಟ್ಟೆಗಳ ಮೂಲಕ ಸಾರ್ವಜನಿಕವಾಗಿ ಮಾರಾಟಕ್ಕೆ ಅನುಮತಿಯನ್ನು ನೀಡಿದೆ. ಶೀಘ್ರದಲ್ಲಿಯೇ 'ಕೋವಿಶೀಲ್ಡ್, ಕೋವ್ಯಾಕ್ಸಿನ್' ಲಸಿಕೆಗಳು ಮಾರುಕಟ್ಟೆಗಳಲ್ಲಿ ಸಾಮಾನ್ಯ ಜನರ ಬಳಕೆಗೆ ಲಭ್ಯವಾಗಲಿವೆ ಎಂದು DCGI ಹೇಳಿದೆ. * ಇದೀಗ ಭಾರತದ ಔಷಧ ನಿಯಂತ್ರಕ ಮಂಡಳಿಯು ಕೆಲವು ಷರತ್ತುಗಳ ಆಧಾರದ ಮೇಲೆ ವಯಸ್ಕ ಜನಸಂಖ್ಯೆಗೆ ಈ ಕೋವಿಡ್-19 ಲಸಿಕೆಗಳಾದ ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ನನ್ನು ನಿಯಮಿತ ಮಾರುಕಟ್ಟೆಗೆ ಅನುಮೋದನೆ ನೀಡಿದೆ. ಇದೀಗ ಭಾರತದ ಔಷಧ ನಿಯಂತ್ರಕ ಮಂಡಳಿಯು ಹೊಸ ಔಷಧಗಳು ಹಾಗೂ ವೈದ್ಯಕೀಯ ಪ್ರಯೋಗಗಳ ನಿಯಮಗಳು, 2019 ರ ಅಡಿಯಲ್ಲಿ ಲಸಿಕೆಗಳನ್ನು ಮಾರುಕಟ್ಟೆಗೆ ನೀಡಲು ಅನುಮೋದನೆ ನೀಡಿದೆ. * ಪ್ರಸ್ತುತ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ (SII) ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ನ ಕೊವಾಕ್ಸಿನ್ ಗೆ ಕೆಲವು ಷರತ್ತುಗಳ ಮೇಲೆ ವಯಸ್ಕರ ಜನಸಂಖ್ಯೆಯ ಬಳಸಲು ನಿಯಮಿತ ಮಾರುಕಟ್ಟೆ ಅನುಮೋದನೆ ನೀಡಲು ಕೇಂದ್ರೀಯ ಔಷಧ ಪ್ರಮಾಣಿತ ನಿಯಂತ್ರಣ ಸಂಸ್ಥೆಯ ಕೋವಿಡ್-19 ರ ವಿಷಯ ತಜ್ಞರ ಸಮಿತಿಯು ಜನವರಿ. 19 ರಂದು ಶಿಫಾರಸು ಮಾಡಿದ ನಂತರ ಭಾರತದ ಔಷಧ ನಿಯಂತ್ರಕ ಜನರಲ್ (DCGI) ಅನುಮೋದನೆ ನೀಡಿದೆ. * ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಸರ್ಕಾರಿ ಮತ್ತು ನಿಯಂತ್ರಣ ವ್ಯವಹಾರಗಳ ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್ ಅವರು ಕೋವಿಶೀಲ್ಡ್ ಗೆ ನಿಯಮಿತ ಮಾರುಕಟ್ಟೆ ದೃಢೀಕರಣ ಕೋರಿ ಈ ಹಿಂದೆ ಅಕ್ಟೋಬರ್. 25 ರಂದು DCGI ಗೆ ಅರ್ಜಿ ಸಲ್ಲಿಸಿದ್ದರು. ಇದೀಗ DCGI "ಕೋವಿಶೀಲ್ಡ್, ಕೋವ್ಯಾಕ್ಸಿನ್" ಲಸಿಕೆಗಳನ್ನು ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಅನುಮತಿ ನೀಡಿದೆ. * * ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) : ಇದೊಂದು ಭಾರತ ಸರ್ಕಾರದ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್‌ನ ವಿಭಾಗದ ಮುಖ್ಯಸ್ಥರಾಗಿದ್ದು, ಇದು ರಕ್ತ ಹಾಗೂ ರಕ್ತ ಉತ್ಪನ್ನಗಳು, ದ್ರವಗಳು, ಲಸಿಕೆಗಳು ಹಾಗೂ ನಿರ್ದಿಷ್ಟ ವರ್ಗಗಳ ಔಷಧಿಗಳ ಪರವಾನಗಿಗಳ ಅನುಮೋದನೆಗೆ ಈ ಸಂಸ್ಥೆ ಜವಾಬ್ದಾರಿಯನ್ನು ಹೊಂದಿರುತ್ತದೆ. * ಈ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಬರುತ್ತದೆ. ಈ DCGI ಭಾರತದಲ್ಲಿ ಔಷಧಗಳ ತಯಾರಿಕೆ, ಮಾರಾಟ, ಆಮದು ಹಾಗೂ ವಿತರಣೆಗೆ ಮಾನದಂಡಗಳನ್ನು ನಿಗದಿಪಡಿಸುತ್ತದೆ. * ಕೇಂದ್ರ ಸರ್ಕಾರವು 2019 ರ ಆಗಸ್ಟ್. 14 ರಂದು Dr. VG ಸೋಮಾನಿ ಅವರನ್ನು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಆಗಿ ನೇಮಿಸಿತು. DCGI ಭಾರತೀಯ ಔಷಧ ನಿಯಂತ್ರಣ ಸಂಸ್ಥೆಯಾಗಿರುವ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO)ನ ಮುಖ್ಯಸ್ಥರಾಗಿರುತ್ತಾರೆ. * * ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO)ನ '6' ವಲಯದ ಕಛೇರಿಗಳು : ಮುಂಬೈ, ಕೋಲ್ಕತ್ತಾ, ಚೆನ್ನೈ, ಹಾಗೂ ಗಾಜಿಯಾಬಾದ್, ಹೈದರಾಬಾದ್, ಅಹಮದಾಬಾದ್ ನಗರಗಳಲ್ಲಿವೆ.