Job Description: * ಇತ್ತೀಚಿಗೆ ರೈಲ್ವೆ ನೇಮಕ ಮಂಡಳಿ(RRB) ನಡೆಸುವ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಬಿಹಾರ ರಾಜ್ಯದ ವಿವಿಧ ಸ್ಥಳಗಳಲ್ಲಿ ಪ್ರತಿಭಟನೆ ನಡೆಯುತ್ತಿದ್ದೆ, ಈ ಪ್ರತಿಭಟನೆಯಲ್ಲಿ ಬಿಹಾರದ ಗಾಯದಲ್ಲಿ ಶ್ರಮಜೀವಿ ಎಕ್ಸ್‌ಪ್ರೆಸ್‌ ರೈಲಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿದ್ದಾರೆ. * ಈ ಘಟನೆಯ ಕಾರಣಗಳಿಂದಾಗಿ ರೈಲ್ವೆ ಮಂಡಳಿಯು ಈ ಪರೀಕ್ಷೆಯನ್ನು ರದ್ದುಪಡಿಸಲು ನಿರ್ಧರಿಸದೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿ‌ನಿ ವೈಷ್ಣವ್‌ ಅವರು ತಿಳಿಸಿದ್ದಾರೆ. ಇದರ ಜೊತೆಗೆ ರೈಲ್ವೆ ಆಸ್ತಿಗೆ ಹಾನಿ ಉಂಟು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. * ಇತ್ತೀಚಿಗೆ ರೈಲ್ವೆ ನೇಮಕ ಮಂಡಳಿ (RRB)ಯು ತಾಂತ್ರಿಕೇತರ ಜನಪ್ರಿಯ ವಿಭಾಗಗಳ (NTPC) 35 ಸಾವಿರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು, ಈ ಹುದ್ದೆಗಳಿಗೆ ಕಂಪ್ಯೂಟರ್‌ ಆಧಾರಿತ ಪರೀಕ್ಷೆ (CBT) ನಡೆಸಲು ನಿರ್ಧರಿಸಿತ್ತು. ಈ ಪರೀಕ್ಷೆಯ 2 ನೇ ಹಂತದಲ್ಲಿ ವಂಚನೆ ನಡೆಸಲಾಗಿದೆ ಹಾಗೂ ಕಟ್‌ ಆಫ್ ಅಂಕಗಳ ನಿಗದಿ ಪ್ರಮಾಣ ಅತ್ಯಂತ ಹೆಚ್ಚಾಗಿದೆ ಎಂದು ಆರೋಪಿಸಿದ್ದಾರೆ. * RRB ಯ NTPC ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳಿದ್ದರೆ ಪರೀಕ್ಷಾರ್ಥಿಗಳಿಗೆ ಆರೋಪದ ಅರ್ಜಿಯನ್ನು ಸಲ್ಲಿಸಲು ಫೆಬ್ರುವರಿ.16 ರ ವರೆಗೆ ಅವಕಾಶ ಕಲ್ಪಿಸಲಾಗಿದೆ. ಆರೋಪದ ದೂರುನ್ನು ನೀಡಲು ರೈಲ್ವೆ ಮಂಡಳಿಯು rrbcommittee@railnet.gov.in. ಎಂಬ ಇ-ಮೇಲ್‌ ಕಳಿಹಿಸಲು ಅವಕಾಶ ಮಾಡಿಕೊಟ್ಟಿದೆ. * ಇದೀಗ ರೈಲ್ವೇ ನೇಮಕ ಮಂಡಳಿಯು ಅವ್ಯವಹಾರ ಆರೋಪಕ್ಕಾಗಿ ತನಿಖಾ ಸಮಿತಿ ರಚಿಸಿದೆ. ಇದೀಗ ಬಿಹಾರದಲ್ಲಿನ ಪ್ರತಿಭಟನೆಯಿಂದಾಗಿ ಪೂರ್ವ ಕೇಂದ್ರ ರೈಲ್ವೆ ವಲಯದ ವ್ಯಾಪ್ತಿಯಲ್ಲಿನ 25 ರೈಲುಗಳ ಸಂಚಾರ ರದ್ದುಪಡಿಸಲಾಗಿದೆ. * ಬಿಹಾರ್ ರಾಜ್ಯದಲ್ಲಿ ಅಷ್ಟೇ ಅಲ್ಲದೇ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ರೈಲು ನಿಲ್ದಾಣದಲ್ಲಿಯ ರೈಲ್ವೆ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪ ಖಂಡಿಸಿ ದಾಂಧಲೆ ನಡೆಸಲಾಗಿದೆ.