Job Description: * ಕಳೆದ ವರ್ಷ ಟೋಕಿಯೋದಲ್ಲಿ ನಡೆದ ಒಲಿಂಪಿಕ್ ನಲ್ಲಿ ಚಿನ್ನದ ಪದಕವನ್ನು ಜಯಿಸಿರುವ ನೀರಜ್ ಚೋಪ್ರಾ ಅವರ ಜೊತೆಗೆ ಇನ್ನು 18 ಜನರಿಗೆ ಪರಮ ವಿಶಿಷ್ಟ ಸೇವಾ ಪದಕ ನೀಡಿ ಗೌರವಿಸಲಾಗಿದೆ. ಪ್ರಸ್ತುತ ನೀರಜ್ ಚೋಪ್ರಾ ಅವರು ಚಿನ್ನದ ಪದಕವನ್ನು ಗೆದ್ದ ದೇಶದ ಮೊದಲ ಅಥ್ಲೆಟಿಕ್ ಆಗಿದ್ದಾರೆ, ಈ ಪದಕದ ಮೂಲಕ ಭಾರತಕ್ಕೆ ಕೀರ್ತಿ ತಂದು ಕೊಟ್ಟಿದ್ದಾರೆ. * ನೀರಜ್ ಚೋಪ್ರಾ ಅವರು ಜಪಾನ್ ನ ಟೋಕಿಯೊದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ನ್ನು 87.58 ಮೀ. ಎಸೆದು ಚಿನ್ನದ ಪದಕವನ್ನು ಜಯಿಸಿದ್ದಾರೆ. * ಈ ಹಿಂದೆ 2018 ರಲ್ಲಿ ನೀರಜ್ ಚೋಪ್ರಾ ಅವರಿಗೆ ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಇದೀಗ 2020 ರಲ್ಲಿ ಪರಮ ವಿಶಿಷ್ಟ ಸೇವಾ ಪದಕವನ್ನು ನೀಡಿ ಗೌರವಿಸಲಾಗಿದೆ. * ನೀರಜ್ ಚೋಪ್ರಾ ಅವರು 2016 ರಲ್ಲಿ ರಜಪೂತನ ರೈಫಲ್ಸ್‌ಗೆ ನೈಬ್ ಸುಬೇದಾರ್ ಆಗಿ ದಾಖಲಾಗಿದ್ದಾರೆ. ಚೋಪ್ರಾ ಅವರು ಪುಣೆಯಲ್ಲಿರುವ ಆರ್ಮಿ ಸ್ಪೋರ್ಟ್ಸ್ ಇನ್‌ಸ್ಟಿಟ್ಯೂಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಿಷನ್ ಒಲಿಂಪಿಕ್ಸ್ ವಿಂಗ್‌ನ ಭಾಗವಾಗಿದ್ದರು. ಮಿಷನ್ ಒಲಿಂಪಿಕ್ಸ್ ವಿಂಗ್ ಇದೊಂದು ಭಾರತೀಯ ಸೇನೆಯ ಉಪಕ್ರಮವಾಗಿದೆ. ಸೈನ್ಯವು ಈ ಉಪಕ್ರಮದ ಅಡಿಯಲ್ಲಿ ಸೈನ್ಯದಿಂದ ಅರ್ಹ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ವಿವಿಧ ಕ್ರೀಡಾ ವಿಭಾಗಗಳಲ್ಲಿ ತರಬೇತಿ ನೀಡಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿದೆ. * * ನಾಯಬ್(Naib) ಸುಬೇದಾರ್ : ಇದೊಂದು ಭಾರತೀಯ ಸೇನೆಯಲ್ಲಿನ ಒಂದು ಶ್ರೇಣಿಯಾಗಿದೆ. ಈ ಶ್ರೇಣಿಯು ಲೆಫ್ಟಿನೆಂಟ್‌ಗಳಿಗಿಂತ ಕಡಿಮೆಯಾಗಿರುತ್ತದೆ. * * ಪರಮ ವಿಶಿಷ್ಟ ಸೇವಾ ಪದಕ : ಈ ಪ್ರಶಸ್ತಿಯನ್ನು 1960 ರಲ್ಲಿ ಸ್ಥಾಪಿಸಲಾಗಿದೆ. ಈ ಪ್ರಶಸ್ತಿಯನ್ನು ಶಾಂತಿ ಸಮಯದ ಸೇವೆಗಳಿಗಾಗಿ ನೀಡಿ ಗೌರವಿಸಲಾಗುತ್ತದೆ. ಈ ಪ್ರಶಸ್ತಿಯು ಕಾನೂನುಬದ್ಧವಾಗಿ ರಚಿಸಲಾಗರುವ ಸಶಸ್ತ್ರ ಪಡೆಗಳು, ಪ್ರಾದೇಶಿಕ ಸೈನ್ಯ, ಮೀಸಲು ಪಡೆಗಳು, ಸಹಾಯಕ ಮತ್ತು ನರ್ಸಿಂಗ್ ಅಧಿಕಾರಿಗಳು ಪ್ರಶಸ್ತಿಗೆ ಅರ್ಹರಾಗಿರುತ್ತಾರೆ. ಸದ್ಯ ಈ ಪ್ರಶಸ್ತಿಯು ಸರ್ವೋತ್ತಮ ಯುದ್ಧ ಸೇವಾ ಪದಕಕ್ಕೆ ಸಮಾನವಾಗಿದೆ. ಹಾಗೂ ಪದ್ಮಭೂಷಣಕ್ಕಿಂತ ಕಡಿಮೆ ಹಾಗೂ ಮಹಾವೀರ ಚಕ್ರಕ್ಕಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದಿದೆ. * * ಭಾರತದಲ್ಲಿ ಮಿಲಿಟರಿ ಪ್ರಶಸ್ತಿಗಳು : - ಶಾಂತಿಕಾಲ : ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷಿ ಸೇವಾ ಪದಕ ಹಾಗೂ ವಿಶಿಷ್ಟ ಸೇವಾ ಪದಕ. - ಯುದ್ಧಕಾಲ : ಯುದ್ಧ ಸೇವಾ ಪದಕ, ಉತ್ತಮ ಯುದ್ಧ ಸೇವಾ ಪದಕ, ಸರ್ವೋತ್ತಮ ಯುದ್ಧ ಸೇವಾ ಪದಕ. - ಯುದ್ಧಕಾಲದ ಅಥವಾ ಶಾಂತಿಕಾಲದ ಸೇವಾ ಪ್ರಶಸ್ತಿಗಳು : ವಾಯು ಸೇನಾ ಪದಕ, ಸೇನಾ ಪದಕ, ಹಾಗೂ ನೌಕಾ ಸೇನಾ ಪದಕ.