Job Description: * ಲೋಕಸಭೆಯ ಸೆಕ್ರೆಟರಿಯೇಟ್ ಇತ್ತೀಚಿಗೆ 'ಡಿಜಿಟಲ್ ಸಂಸದ್' ಎಂಬ ಹೊಸ ಅಪ್ಲಿಕೇಶನ್ ನ್ನು ಆರಂಭಿಸಿದೆ. * ಜನರು ಸಂಸತ್ತಿನಲ್ಲಿನ ಅವರ ಶಾಸಕರನ್ನು ಅನುಸರಿಸಲು ಅನುಕೂಲವಾಗುವಂತೆ 'ಡಿಜಿಟಲ್ ಸಂಸದ್' ಅಪ್ಲಿಕೇಶನ್ ನ್ನು ಆರಂಭಿಸಲಾಗಿದೆ. ಈ ಅಪ್ಲಿಕೇಶನ್ Android ಹಾಗೂ IOS ಪ್ಲಾಟ್‌ಫಾರ್ಮ್ ಎರಡರಲ್ಲೂ ಲಭ್ಯವಿರಲಿದೆ ಎಂದು ತಿಳಿಸಿದ್ದಾರೆ. ಈ ಅಪ್ಲಿಕೇಶನ್ ಭಾರತೀಯ ಸಂಸತ್ತಿನ ಅಂತರ್ಸಂಪರ್ಕಿತ ಪೋರ್ಟಲ್‌ ನ ಎಲ್ಲಾ ಪ್ರಮುಖ ವಿಷಯವನ್ನು ಒಳಗೊಂಡಿರಲಿದೆ. * ಈ ಅಪ್ಲಿಕೇಶನ್ ಸದಸ್ಯರಿಗೆ ಶಾಸಕಾಂಗ ಚಟುವಟಿಕೆಗಳು ಹಾಗೂ ಸೇವೆಗಳ 360-ಡಿಗ್ರಿ ವೀಕ್ಷಣೆಯನ್ನು ಒದಗಿಸುತ್ತದೆ.ಹಾಗೂ ಎಲ್ಲಾ ಲೋಕಸಭೆಗಳಿಗೆ ಸಂಬಂಧಿಸಿದ ಆರ್ಕೈವಲ್ ಡೇಟಾವನ್ನು ಪಡೆಯಲು ಈ ಅಪ್ಲಿಕೇಶನ್ ಜನರಿಗೆ ಸಹಾಯ ಮಾಡಲಿದೆ. ಈ ಅಪ್ಲಿಕೇಶನ್ ಮೂಲಕ ಜನರು ಭಾಷಣಗಳು, ಚರ್ಚೆಗಳು ಇತ್ಯಾದಿಗಳನ್ನು ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೇ ಈ ಅಪ್ಲಿಕೇಶನ್ 1947 ರಿಂದ ಆರಂಭವಾಗಿರುವ ಬಜೆಟ್ ಭಾಷಣಗಳು, ಹಾಗೂ 12 ನೇ ಲೋಕಸಭೆಯಿಂದ 17 ನೇ ಲೋಕಸಭೆಯವರೆಗಿನ ಸದನದ ಚರ್ಚೆಗಳ ಮಾಹಿತಿಯನ್ನು ಹೊಂದಿರಲಿದೆ. * ಈ ಅಪ್ಲಿಕೇಶನ್‌ನಲ್ಲಿ ಪ್ರಸ್ತುತ ವರ್ಷದ ಅಂದರೆ 2022 ರ ಬಜೆಟ್ ಅಧಿವೇಶನವನ್ನು ಲೈವ್ ಆಗಿ ವೀಕ್ಷಿಸಬಹುದು. * ಈ 'ಡಿಜಿಟಲ್ ಸಂಸದ್' ಅಪ್ಲಿಕೇಶನ್ ಸಂಸತ್ತಿನಲ್ಲಿರುವ ಸದಸ್ಯರಿಗೆ ವೈಯಕ್ತಿಕ ನವೀಕರಣಗಳನ್ನು ಪರಿಶೀಲಿಸುವ ಸೇವೆಗಳನ್ನು ಪ್ರವೇಶಿಸಲು ಸಹಾಯಕಾರಿಯಾಗಲಿದೆ. ಇದೀಗ ಸಂಸದರು ಸದನದೊಳಗೆ ಲ್ಯಾಪ್‌ಟಾಪ್ ಬಳಕೆ ಮಾಡುವದನ್ನು ನಿಷೇಧಿಸಲಾಗಿದೆ. ಈ ಕಾರಣದಿಂದಾಗಿ ಸದನದಲ್ಲಿರುವ ಯಾವುದೇ ಚರ್ಚೆಯ ಸಮಯದಲ್ಲಿ ಸಂಸದರಿಗೆ ಸಂಸತ್ತಿನ ಮಾಹಿತಿಯನ್ನು ಪಡೆಯಲು ಈ ಅಪ್ಲಿಕೇಶನ್ ಸಹಾಯ ಮಾಡಲಿದೆ. * ಭವಿಷ್ಯದಲ್ಲಿ, ಈ ಅಪ್ಲಿಕೇಶನ್ ಸಂಸದರಿಗೆ ಹಾಜರಾತಿಗಾಗಿ ಲಾಗ್ ಇನ್ ಮಾಡಲು, ಪ್ರಶ್ನೋತ್ತರ ಅವಧಿಗೆ ಪ್ರಶ್ನೆಗಳನ್ನು ನೀಡಲು ಮತ್ತು ಚರ್ಚೆಗಳು ಅಥವಾ ಮುಂದೂಡಿಕೆಗೆ ಸೂಚನೆಗಳನ್ನು ಸಲ್ಲಿಸಲು ಸಹಾಯ ಮಾಡುತ್ತದೆ. * ಪ್ರಸ್ತುತ ಶಾಸಕಾಂಗವು ತನ್ನ ನಿತ್ಯದ ಕಾರ್ಯಗಳ ಬಗೆಗಿನ ಮಾಹಿತಿಯನ್ನು ತನ್ನ ಘಟಕಗಳಿಗೆ ತಿಳಿಸುವ ಅಗತ್ಯವಿದೆ. ಹಾಗೂ ತಾಂತ್ರಿಕ ಭೂದೃಶ್ಯದ ಜೊತೆಗೆ ಸಂವಹನ ಮಾರ್ಗಗಳನ್ನು ನವೀಕೃತವಾಗಿಸಲು ಸಂಸತ್ತಿನ ಅಗತ್ಯವಿದೆ. ಈ ಹಿನ್ನಲೆಯಿಂದಾಗಿ ಸಂಸತ್ತು ತನ್ನ ಡಿಜಿಟಲ್ ವ್ಯಾಪ್ತಿಯನ್ನು ವಿಸ್ತರಣೆ ಮಾಡಲು ಆರಂಭಿಸಿದೆ. * ಪ್ರಸ್ತುತ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ತಿಳಿಸಿರುವ ಪ್ರಕಾರ ಈ 'ಡಿಜಿಟಲ್ ಸಂಸದ್' ಅಪ್ಲಿಕೇಶನ್ ಮೆದುಳಿನ ಕೂಸಾಗಿದೆ. ಜನರು ಈ ಅಪ್ಲಿಕೇಶನ್ ಮೂಲಕ ಸಂಸತ್ತಿನ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ. * ಸದ್ಯ ಈ ಅಪ್ಲಿಕೇಶನ್ ಭಾರತ ಹಾಗೂ US ಮತ್ತು ಸೌದಿ ಅರೇಬಿಯಾ ದೇಶಗಳಲ್ಲಿ 8000 ಕ್ಕೂ ಅಧಿಕ ಬಳಕೆದಾರರನ್ನು ಹೊಂದಿದೆ.