Job Description: * ಪ್ರಸ್ತತ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ 125 ನೇ ಜನ್ಮ ದಿನಾಚರಣೆಯ ಅಂಗವಾಗಿ ರಾಜ್ಯದಲ್ಲಿನ 75 ಸರಕಾರಿ ಶಾಲೆಗಳನ್ನು "ನೇತಾಜಿ ಅಮೃತ ಶಾಲೆ"ಗಳೆಂದು ಘೋಷಣೆ ಮಾಡಿ ರಾಜ್ಯ ಸರ್ಕಾರವು ಅಧಿಕೃತ ಆದೇಶವನ್ನು ಹೊರಡಿಸಿದೆ. * ಪ್ರತಿ ಶಾಲೆಯಲ್ಲಿನ ತಲಾ 100 ವಿದ್ಯಾರ್ಥಿಗಳಂತೆ ಒಟ್ಟಾರೆ 7,500 ವಿದ್ಯಾರ್ಥಿಗಳಿಗೆ NCC (National Cadet Corps)ತರಬೇತಿಯನ್ನು ನೀಡಲಾಗುತ್ತದೆ. * ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ 44 ಸಾವಿರ NCC ಶಾಲೆಗಳು, ಹಾಗೂ 34 ಸಾವಿರ NCC ಕಾಲೇಜುಗಳಿವೆ, ಒಟ್ಟಾರೆ ರಾಜ್ಯದಲ್ಲಿ 78 ಸಾವಿರ NCC ಘಟಕಗಳಿವೆ. * ಇತ್ತೀಚಿಗೆ ಜನವರಿ. 23 ರಂದು ರಾಜ್ಯ ಸರ್ಕಾರವು ರಾಜ್ಯದಲ್ಲಿ ಪ್ರತಿ ಜಿಲ್ಲೆಗೆ ಕನಿಷ್ಠ 2 ರಂತೆ ಸುಮಾರು 75 ಶಾಲೆಗಳಲ್ಲಿ NCC ಘಟಕಗಳನ್ನು ಸ್ಥಾಪಿಸಿ ಅವುಗಳನ್ನು 'ನೇತಾಜಿ ಅಮೃತ ಶಾಲೆ'ಗಳು ಎಂದು ಘೋಷಣೆ ಮಾಡಿ ರಾಜ್ಯ ಸರ್ಕಾರದಿಂದ ಆರ್ಥಿಕ ಸಹಾಯ ನೀಡಲು ನಿರ್ಧರಿಸಿದೆ ಹಾಗೂ ಆ ಶಾಲೆಗಳನ್ನು ಶಿಕ್ಷಣ ಇಲಾಖೆಯ ಮೂಲಕ ಅನುಷ್ಠಾನಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ. * ರಾಜ್ಯದ 75 'ನೇತಾಜಿ ಅಮೃತ ಶಾಲೆ' ಗಳಲ್ಲಿನ ಪ್ರತಿ ವಿದ್ಯಾರ್ಥಿಗೆ 12 ಸಾವಿರ ರೂ.ಗಳಂತೆ ಸುಮಾರು 9 ಕೋಟಿ ರೂ. ಅನುದಾನವನ್ನು ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಅಪರ ಕಾರ್ಯದರ್ಶಿಯಾಗಿರುವ ಚಂದ್ರಶೇಖರ್‌ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. * * ನ್ಯಾಷನಲ್ ಕೆಡೆಟ್ ಕಾರ್ಪ್ಸ್ (NCC) : ಇದೊಂದು ಭಾರತದ ಸಶಸ್ತ್ರ ಪಡೆಗಳ ಯುವ ವಿಭಾಗವಾಗಿದೆ. ಇದು ಭಾರತದ ನವದೆಹಲಿಯಲ್ಲಿ ತನ್ನ ಪ್ರಧಾನ ಕಛೇರಿಯನ್ನು ಹೊಂದಿದೆ. ಈ NCC ಯು ಸೇನೆ, ನೌಕಾಪಡೆ ಹಾಗೂ ಏರ್ ವಿಂಗ್ ನ್ನು ಒಳಗೊಂಡಿರುವ ತ್ರಿ-ಸೇವಾ ಸಂಸ್ಥೆಯಾಗಿದೆ. ಈ NCC ಸಂಸ್ಥೆಯು ಭಾರತದಾದ್ಯಂತ ಹೈಸ್ಕೂಲ್‌ಗಳು, ಹೈಯರ್ ಸೆಕೆಂಡರಿ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯದಿಂದ ಕೆಡೆಟ್‌ಗಳನ್ನು ನೇಮಿಸಿಕೊಳ್ಳುತ್ತದೆ. ಈ ಕೆಡೆಟ್‌ಗಳು ಸಣ್ಣ ಶಸ್ತ್ರಾಸ್ತ್ರಗಳು ಜೊತೆಗೆ ಮೂಲಭೂತ ಮಿಲಿಟರಿ ತರಬೇತಿಯಲ್ಲಿ ಡ್ರಿಲ್ ಮಾಡುತ್ತಾರೆ. * ಪ್ರಸ್ತುತ ಭಾರತದಲ್ಲಿ NCC ನ್ನು 1950 ರ ಕಾಯಿದೆಯಾಗಿ ರಚಿಸಲಾಗಿದೆ. ಇದನ್ನು ಭಾರತೀಯ ಸೇನೆಯಲ್ಲಿನ ಕೊರತೆಯನ್ನು ಸರಿಪಡಿಸುವ ಉದ್ದೇಶದಿಂದ ಭಾರತೀಯ ರಕ್ಷಣಾ ಕಾಯಿದೆ 1917 ರ ಅಡಿಯಲ್ಲಿ ರಚಿಸಲಾಗಿರುವ "ಯೂನಿವರ್ಸಿಟಿ ಕಾರ್ಪ್ಸ್"ಗೆ ಇದನ್ನು ಗುರುತಿಸಲಾಗುತ್ತದೆ. ಭಾರತೀಯ ಪ್ರಾದೇಶಿಕ ಕಾಯಿದೆಯನ್ನು ಈ ಹಿಂದೆ 1920 ರಲ್ಲಿ ಅಂಗೀಕರಿಸಿದ ಸಂಧರ್ಭದಲ್ಲಿ 'ಯೂನಿವರ್ಸಿಟಿ ಕಾರ್ಪ್ಸ್' ನ್ನು ವಿಶ್ವವಿದ್ಯಾಲಯದ ತರಬೇತಿ ಕಾರ್ಪ್ಸ್ ಆಗಿ ಬದಲಾವಣೆ ಮಾಡಲಾಯಿತು. ಮತ್ತೇ ಇದನ್ನು UOTC ಎಂದು ಮರುನಾಮಕರಣ ಮಾಡಲಾಯಿತು. * ಭಾರತ-ಪಾಕಿಸ್ತಾನ 1965 ರ ಯುದ್ಧ, ಹಾಗೂ ಬಾಂಗ್ಲಾದೇಶ-ಪಾಕಿಸ್ತಾನ 1971 ರ ಯುದ್ಧದ ಸಂಧರ್ಭದಲ್ಲಿ ಈ NCC ಕೆಡೆಟ್‌ಗಳು ರಕ್ಷಣೆಯ 2 ನೇ ಸಾಲಿನವರಾಗಿದ್ದರು. ಇವರು ಮುಂಭಾಗಕ್ಕೆ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ಪೂರೈಸಿದರು. ಈ ಎರಡು ಯುದ್ಧಗಳ ನಂತರ NCC ಯ ಪಠ್ಯಕ್ರಮವನ್ನು ಪರಿಷ್ಕರಿಸಲಾಯಿತು.