Job Description: * ಕರ್ನಾಟಕ ಸರ್ಕಾರವು ಸುಮಾರು 180 ಕೋಟಿ ರೂ.ಗಳ ವೆಚ್ಚದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಹೆಸರಿನಲ್ಲಿ ಮಿಲಿಟರಿ ಶಾಲೆಯನ್ನು ಆರಂಭಿಸುವದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಣೆ ಮಾಡಿದ್ದಾರೆ. * ಇತ್ತೀಚಿಗೆ ನಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ 191 ನೇ ಸ್ಮರಣೋತ್ಸವದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಅವರು ತಿಳಿಸಿದ್ದಾರೆ. ಇದೀಗ ರಾಜ್ಯ ಸರ್ಕಾರವು 55 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಹಾಗು ಇದೇ ವರ್ಷದಲ್ಲಿ ರಾಯಣ್ಣ ಶಾಲೆಯ ಕಾಮಗಾರಿ ಪೂರ್ಣಗೊಳ್ಳಲಿದೆ. ಈ ಶಾಲೆಯ ಉಸ್ತುವಾರಿಯನ್ನು ವಹಿಸಿಕೊಳ್ಳಲು ರಕ್ಷಣಾ ಇಲಾಖೆಯು ಮಾತುಕತೆಯನ್ನು ನಡೆಸಿದೆ. ತದನಂತರ ರಕ್ಷಣಾ ಇಲಾಖೆ ರಾಯಣ್ಣ ಶಾಲೆಯನ್ನು ಮಿಲಿಟರಿ ಶಾಲೆಯಾಗಿ ಪರಿವರ್ತನೆ ಮಾಡಲಿದೆ. ಈ ಶಾಲೆಗೆ ಹಾಸ್ಟೆಲ್ ವ್ಯವಸ್ಥೆ, ಹಾಗೂ ಅಗತ್ಯ ವ್ಯವಸ್ಥೆಗಳನ್ನು ಸುಮಾರು 100 ಎಕರೆ ಪ್ರದೇಶದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. * ಸಂಗೊಳ್ಳಿ ರಾಯಣ್ಣ 1796 ರ ಆಗಸ್ಟ್. 15 ರಂದು ಜನಿಸಿದ್ದರು, ಹಾಗೂ 1831 ರ ಜನವರಿ. 26 ರಂದು ಅವರನ್ನು ಗಲ್ಲಿಗೇರಿಸಲಾಯಿತು. ಇವರೊಬ್ಬ ಭಾರತೀಯ ಸೇನಾ ಮುಖ್ಯಸ್ಥ ಹಾಗೂ ಇಂದಿನ ಭಾರತದ ಕರ್ನಾಟಕ ರಾಜ್ಯದಲ್ಲಿರುವ ಕಿತ್ತೂರು ರಾಜಪ್ರಭುತ್ವದ ಯೋಧನಾಗಿದ್ದಾರೆ. ಈ ಹಿಂದೆ ರಾಣಿ ಚನ್ನಮ್ಮ ಆಳ್ವಿಕೆ ನಡೆಸಿದ ಕಿತ್ತೂರು ಸಾಮ್ರಾಜ್ಯದ ಸೇನಾ ಮುಖ್ಯಸ್ಥನಾಗಿದ್ದ. ಆ ಸಂಧರ್ಭದಲ್ಲಿ ರಾಯಣ್ಣನವರು ಸಾಯುವವರೆಗೂ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಹೋರಾಡಿದರು. * 2012 ರಲ್ಲಿ ಕನ್ನಡ ಚಿತ್ರರಂಗವು ಸಂಗೊಳ್ಳಿ ರಾಯಣ್ಣನ ಜೀವನ ಚರಿತ್ರೆಯನ್ನು ಸಿನಿಮಾ ಮಾಡಿತ್ತು. ಅವರಿಗಿರುವ ದೇಶಾಭಿಮಾನವನ್ನು ಜನರಿಗೆ ತೋರಿಸಿತ್ತು. * ಈ ಹಿಂದೆ 1824 ರ ದಂಗೆಯಲ್ಲಿ ಸಂಗೊಳ್ಳಿ ರಾಯಣ್ಣನವರು ಭಾಗವಹಿಸಿದ್ದರು, ಆಗ ಅವರು ಬ್ರಿಟಿಷರಿಂದ ಬಂಧಿಸಲ್ಪಟ್ಟರು, ಕೆಲ ದಿನಗಳ ನಂತರ ಅವರನ್ನು ಬಿಡುಗಡೆ ಮಾಡಲಾಯಿತು. ಇದಾದ ಬಳಿಕ ರಾಯಣ್ಣನವರು ಬ್ರಿಟಿಷರ ವಿರುದ್ಧ ಹೋರಾಡುವುದನ್ನು ಮುಂದುವರೆಸಿದರು, ಅದೇ ಸಂಧರ್ಭದಲ್ಲಿ ರಾಣಿ ಚೆನ್ನಮ್ಮನ ದತ್ತುಪುತ್ರನಾದ ಶಿವಲಿಂಗಪ್ಪನನ್ನು ಕಿತ್ತೂರಿನ ರಾಜನಾಗಿ ಪ್ರತಿಷ್ಠಾಪಿಸಲು ಬಯಸಿ ಸ್ಥಳೀಯ ಜನರನ್ನು ಒಟ್ಟುಗೂಡಿಸಿದರು, ಹಾಗೂ ಬ್ರಿಟಿಷರ ವಿರುದ್ಧ ಗೆರಿಲ್ಲಾ ಮಾದರಿಯ ಯುದ್ಧವನ್ನು ಆರಂಭಿಸಿದರು. ರಾಯಣ್ಣನ ಗೆರಿಲ್ಲಾ ಸೈನ್ಯವು ಸ್ಥಳದಿಂದ ಸ್ಥಳಕ್ಕೆ ಸ್ಥಳಾಂತರಗೊಂಡಿತು, ಮತ್ತು ಬ್ರಿಟಿಷ್ ಸೈನ್ಯದ ದಾರಿಯನ್ನು ತಪ್ಪಿಸಿತಿತ್ತು, ಆದರೆ ಬ್ರಿಟಿಷ್ ಪಡೆಗಳು ರಾಯಣ್ಣನನ್ನು ಬಹಿರಂಗ ಯುದ್ಧದಲ್ಲಿ ಸೋಲಿಸಲು ಸಾಧ್ಯವಾಗಲಿಲ್ಲ, ಆಗ ಬ್ರಿಟಿಷ್ ಪಡೆಗಳು ಮೋಸಮಾಡುವ ಮೂಲಕ ಅವನನ್ನು1830 ರ ಏಪ್ರಿಲ್ ನಲ್ಲಿ ಬಂಧಿಸಿದರು, ಹಾಗೂ ಅದೇ ಸಂಧರ್ಭದಲ್ಲಿ ರಾಯಣ್ಣನನಿಗೆ ಮರಣದಂಡನೆ ವಿಧಿಸಿದರು. * ರಾಯಣ್ಣನನ್ನು 1831 ರ ಜನವರಿ. 26 ರಂದು ಬೆಳಗಾವಿ ಜಿಲ್ಲೆಯ ನಂದಗಡದ ಸಮೀಪವಿರುವ ಆಲದ ಮರಕ್ಕೆ ನೇಣು ಹಾಕಿ ಗಲ್ಲಿಗೇರಿಸಲಾಯಿತು. * ನಂದಗಡ ಬಳಿ ರಾಯಣ್ಣನ ಸಮಾಧಿಯನ್ನು ನಿರ್ಮಿಸಲಾಗಿದೆ. ಇದೀಗ ಸಂಗೊಳ್ಳಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣನ ಹೆಸರಿನಲ್ಲಿ ಒಂದು ಸಣ್ಣ ದೇವಾಲಯವನ್ನು ನಿರ್ಮಿಸಲಾಗಿದೆ. ಇತ್ತೀಚಿಗೆ ಕರ್ನಾಟಕ ಸರ್ಕಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಾಧಿಕಾರವನ್ನು ಸ್ಥಾಪಿಸಿದೆ. ಈ ಪ್ರಾಧಿಕಾರದ ಅಡಿಯಲ್ಲಿ ರಾಯಣ್ಣ ಸೈನಿಕ ಶಾಲೆ, 'ಶೌರ್ಯಭೂಮಿ' ರಾಯಣ್ಣ ರಾಕ್ ಗಾರ್ಡನ್, ಹಾಗೂ ಸಂಗೊಳ್ಳಿ ರಾಯಣ್ಣ ವಸ್ತು ಸಂಗ್ರಹಾಲಯ ನಿರ್ಮಿಸಲಾಗುವದು ಎಂದು ರಾಜ್ಯ ಸರ್ಕಾರ ತಿಳಿಸಿದೆ.