Job Description: * ಭಾರತ ಸರ್ಕಾರವು ಪ್ರತಿ ವರ್ಷವು ಜನವರಿ. 25 ರಂದು ದೇಶದ ಆರ್ಥಿಕತೆಗೆ ಪ್ರವಾಸೋದ್ಯಮದ ಬಗ್ಗೆ ಜಾಗೃತಿ ಮೂಡಿಸಲು 'ರಾಷ್ಟ್ರೀಯ ಪ್ರವಾಸೋದ್ಯಮ ದಿನ'ವನ್ನು ಆಚರಣೆ ಮಾಡುತ್ತದೆ. ಈ ದಿನದಂದು ಪ್ರವಾಸೋದ್ಯಮಕ್ಕೆ ಉತ್ತಜನ ನೀಡುವ ನಿಟ್ಟಿನಲ್ಲಿ ಆರ್ಥಿಕ ಮತ್ತು ಸಾಂಸ್ಕೃತಿಕ ಮೌಲ್ಯದ ಬಗ್ಗೆ ಜಾಗತಿಕ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಈ ದಿನವನ್ನು ಆಚರಣೆ ಮಾಡಲಾಗುತ್ತದೆ. * ಈ ರಾಷ್ಟ್ರೀಯ ಪ್ರವಾಸೋದ್ಯಮ ದಿನವು ನಿಖರವಾಗಿ ಯಾವ ದಿನದಂದು ಬಂದಿದೆ ಎಂದು ತಿಳಿದಿಲ್ಲ, ಆದರೆ 1948 ರಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರವಾಸಿ ಸಂಚಾರ ಸಮಿತಿಯನ್ನು ರಚಿಸಲಾಗಿದೆ. ಅದೇ ವರ್ಷದಲ್ಲಿ ಪ್ರವಾಸೋದ್ಯಮದ ಪ್ರಾದೇಶಿಕ ಕಚೇರಿಗಳನ್ನು ದೆಹಲಿ ಮತ್ತು ಮುಂಬೈ ನಗರಗಳಲ್ಲಿ ಸ್ಥಾಪನೆ ಮಾಡಲಾಯಿತು. ಮತ್ತೇ 1951 ರಲ್ಲಿ ಕೋಲ್ಕತ್ತಾ ಮತ್ತು ಚೆನ್ನೈ ನಗರಗಳಲ್ಲಿ ಮತ್ತೇ ಎರಡು ಕಚೇರಿಗಳನ್ನು ಸ್ಥಾಪನೆ ಮಾಡಲಾಯಿತು. * ಈ ಹಿಂದೆ 1958 ರಲ್ಲಿ ಪ್ರವಾಸೋದ್ಯಮ ಮತ್ತು ಸಂವಹನ ಸಚಿವಾಲಯದ ಅಡಿಯಲ್ಲಿ ಪ್ರವಾಸೋದ್ಯಮಕ್ಕಾಗಿ ಇಲಾಖೆಯನ್ನು ರೂಪಿಸಲಾಯಿತು. ಈ ಇಲಾಖೆಯ ಜಂಟಿ ಕಾರ್ಯದರ್ಶಿ ಶ್ರೇಣಿಯಲ್ಲಿನ ಡೆಪ್ಯೂಟಿ ಜನರಲ್ ಅವರ ನೇತೃತ್ವದಲ್ಲಿರಲಿದೆ ಎಂದಿದ್ದಾರೆ. * ರಾಷ್ಟ್ರೀಯ ಪ್ರವಾಸೋದ್ಯಮ ದಿನವು ಭಾರತದ ಆರ್ಥಿಕ ಭವಿಷ್ಯದ ಮೇಲೆ ಪ್ರಭಾವ ಬೀರಲಿದೆ. ಹಾಗೂ ದೇಶದ ಪ್ರತಿಯೊಂದು ಪ್ರದೇಶವು ಶ್ರೀಮಂತ ಇತಿಹಾಸವನ್ನು ಹೊಂದಿವೆ, ಹಾಗೂ ವಿವಿಧ ರೀತಿಯಲ್ಲಿ ಈ ಪ್ರದೇಶಗಳನ್ನು ಸ್ಮರಿಸಲಾಗುತ್ತದೆ. ಈ ಎಲ್ಲ ಪ್ರದೇಶಗಳ ಇತಿಹಾಸವನ್ನು ತಿಳಿಯಲು ಭಾರತದ ಪ್ರವಾಸೋದ್ಯಮ ಒಂದು ಉತ್ತಮ ಮಾರ್ಗವಾಗಿದೆ. * ಈ ಹಿಂದೆ 2018 ರಲ್ಲಿ ರಾಷ್ಟ್ರೀಯ ಪ್ರವಾಸೋದ್ಯಮ ಉದ್ಯಮವು 247.3 ಶತಕೋಟಿ ಡಾಲರ್‌ ಆದಾಯ ಪಡೆದುಕೊಂಡಿದೆ. ಮತ್ತೇ 2019 ರ FICCI-YES ಬ್ಯಾಂಕ್ ನೀಡಿರುವ ಮಾಹಿತಿಯ ಪ್ರಕಾರ, ಈ ಪ್ರವಾಸೋದ್ಯಮ ದೇಶದ GDP ಯ 9.2 ಪ್ರತಿಶತಕ್ಕೆ ಮಹತ್ವದ ಕೊಡುಗೆ ನೀಡಿದೆ. * ಪ್ರಸ್ತುತ 'ಆಜಾದಿ ಕಾ ಅಮೃತ್ ಮಹೋತ್ಸವ' ಎಂಬ ಥೀಮ್ ನ ಅಡಿಯಲ್ಲಿ 2022 ರ ರಾಷ್ಟ್ರೀಯ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗಿದೆ. * 2021 ರಲ್ಲಿ 'ದೇಖೋ ಅಪ್ನಾ ದೇಶ್' ಎಂಬ ಥೀಮ್'ನ ಅಡಿಯಲ್ಲಿ ರಾಷ್ಟ್ರೀಯ ಪ್ರವಾಸೋದ್ಯಮ ದಿನವನ್ನು ಆಚರಣೆ ಮಾಡಲಾಗಿದೆ. ಈ ವರ್ಷದಲ್ಲಿ ಕೊರೊನಾ ರೋಗದ ಕಾರಣದಿಂದ ಜನರು ಪ್ರವಾಸವನ್ನು ಕೈಗೊಂಡಿಲ್ಲ ಆ ಸಂಧರ್ಭದಲ್ಲಿ ಪ್ರವಾಸೋದ್ಯಮಕ್ಕೆ ದೊಡ್ಡ ಮಟ್ಟದಲ್ಲಿ ಆರ್ಥಿಕ ನಷ್ಟ ಉಂಟಾಗಿದೆ.