Job Description: * ಪ್ರಸ್ತುತ ಭಾರತ ಹಾಗೂ ಇಸ್ರೇಲ್ ದೇಶಗಳು ಇತ್ತೀಚೆಗೆ 30 ವರ್ಷಗಳ ರಾಜತಾಂತ್ರಿಕ ಸಂಬಂಧಗಳನ್ನು ಗುರುತಿಸಲು ಲೋಗೋವನ್ನು ಬಿಡುಗಡೆ ಮಾಡಿವೆ. ಈ ಲೋಗೋದಲ್ಲಿ ಅಶೋಕ ಚಕ್ರ ಮತ್ತು ಸ್ಟಾರ್ ಆಫ್ ಡೇವಿಡ್ ಇದೆ. ಅಷ್ಟೇ ಅಲ್ಲದೇ ಈ ಲೋಗೋದಲ್ಲಿ ಉಭಯ ದೇಶಗಳ 30 ನೇ ವಾರ್ಷಿಕೋತ್ಸವವನ್ನು ಒಳಗೊಂಡಿರುವ 30 ಸಂಖ್ಯೆಯ ಇದೆ. * ಭಾರತವು ಈ ಹಿಂದೆ 1950 ರಲ್ಲಿ ಅಧಿಕೃತವಾಗಿ ಇಸ್ರೇಲ್ ದೇಶವನ್ನು ಗುರುತಿಸಿತು, ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳನ್ನು 1992 ರಲ್ಲಿ ಮಾತ್ರ ಸ್ಥಾಪಿಸಿದೆ. ಸದ್ಯ ಇಸ್ರೇಲ್ ದೇಶದೊಂದಿಗೆ 164 ದೇಶಗಳು ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿವೆ, ಅದರಲ್ಲಿ ಭಾರತವು ಕೂಡ ಒಂದಾಗಿದೆ. * ಭಾರತದ ರಾಯಭಾರ ಕಚೇರಿಯು ಇಸ್ರೇಲ್'ನ ಟೆಲ್ ಅವಿವ್‌ನಲ್ಲಿದೆ, ಹಾಗೂ ಇಸ್ರೇಲ್‌ನ ರಾಯಭಾರ ಕಚೇರಿಯು ಭಾರತದ ದೆಹಲಿಯಲ್ಲಿದೆ. ಈ ಹಿಂದೆ 2000 ರಲ್ಲಿ L. K. ಅಡ್ವಾಣಿ ಇಸ್ರೇಲ್ ಗೆ ಭೇಟಿ ನೀಡಿದ ಮೊದಲ ಭಾರತೀಯ ಸಚಿವರಾಗಿದ್ದಾರೆ, ಹಾಗೂ ಜಶ್ವಂತ್ ಸಿಂಗ್ ಅವರು ಇಸ್ರೇಲ್ ಗೆ ಭೇಟಿ ನೀಡಿದ ಮೊದಲ ಭಾರತೀಯ ವಿದೇಶಾಂಗ ಸಚಿವರಾಗಿದ್ದಾರೆ. ಹಾಗೂ 2003 ರಲ್ಲಿ ಭಾರತಕ್ಕೆ ಭೇಟಿ ನೀಡಿದ ಮೊದಲ ಇಸ್ರೇಲ್ ಪ್ರಧಾನಿ ಏರಿಯಲ್ ಶರೋನ್. * ಪ್ರಸ್ತುತ ಭಾರತ ದೇಶವು ಅತಿ ಹೆಚ್ಚಾಗಿ ಇಸ್ರೇಲ್ ಮಿಲಿಟರಿ ಉಪಕರಣಗಳನ್ನು ಖರೀದಿಸುವ ದೇಶವಾಗಿದೆ. ಭಾರತ ದೇಶವು ಇಸ್ರೇಲ್‌ನ 2 ನೇ ಅತಿದೊಡ್ಡ ರಕ್ಷಣಾ ಪೂರೈಕೆದಾರ ದೇಶವಾಗಿದೆ. ರಷ್ಯಾ ಭಾರತದ ಮೊದಲ ಅತಿದೊಡ್ಡ ರಕ್ಷಣಾ ಪೂರೈಕೆದಾರ ದೇಶವಾಗಿದೆ. ಭಾರತ ದೇಶವು ಇಸ್ರೇಲ್‌ನ 10 ನೇ ಅತಿದೊಡ್ಡ ವ್ಯಾಪಾರ ಪಾಲುದಾರ ದೇಶವಾಗಿದೆ. * * ಭಾರತ ಮತ್ತು ಇಸ್ರೇಲ್ ದೇಶಗಳ ಕೃಷಿ ಸಹಕಾರ : ಉಭಯ ದೇಶಗಳು ಇಂಡೋ-ಇಸ್ರೇಲಿ ಕೃಷಿ ಸಹಕಾರ ಯೋಜನೆಯನ್ನು ಆರಂಭಿಸದವು. ಅವುಗಳು ಸೂಕ್ಷ್ಮ ನೀರಾವರಿ, ಕೃಷಿ ತಂತ್ರಜ್ಞಾನಗಳು ಹಾಗೂ ಹೈನುಗಾರಿಕೆಯ ಮೇಲೆ ಕೇಂದ್ರೀಕರಿಸಿವೆ. 2014 ರ ವೇಳೆಗೆ ಈ ಕಾರ್ಯಕ್ರಮವು ಹತ್ತು ಶ್ರೇಷ್ಠತೆಯ ಕೇಂದ್ರಗಳನ್ನು ರೂಪಿಸಿವೆ. ಈ ಕೇಂದ್ರಗಳು ರೈತರಿಗೆ ಕೃಷಿ ಬಗ್ಗೆ ತರಬೇತಿ ನೀಡುತ್ತವೆ. * ಇಸ್ರೇಲ್ ದೇಶವು ಭಾರತದ ಪೋಖ್ರಾನ್ ಪರಮಾಣು ಪರೀಕ್ಷೆಯನ್ನು ಖಂಡಿಸದ ವಿಶ್ವದ ಕೆಲ ದೇಶಗಳಲ್ಲಿ ಇಸ್ರೇಲ್ ಕೂಡ ಒಂದಾಗಿತ್ತು. ಇಸ್ರೇಲ್ 1965 ರಲ್ಲಿ ಭಾರತ ಮತ್ತು ಪಾಕಿಸ್ತಾನದ ಯುದ್ಧದ ಸಮಯದಲ್ಲಿ ಭಾರತಕ್ಕೆ M - 58 ಮಾರ್ಟರ್ ಮದ್ದುಗುಂಡುಗಳನ್ನು ಪುರಕೆ ಮಾಡಿತ್ತು.