Job Description: * ಅಸ್ಸಾಂ ಸರ್ಕಾರವು 2022 ರ ಜನವರಿ. 24 ರಂದು ತನ್ನ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿರುವ 'ಅಸ್ಸಾಂ ಬೈಭವ'ವನ್ನು ಉದ್ಯಮಿ ರತನ್ ಟಾಟಾ ಅವರಿಗೆ ನೀಡಿ ಗೌರವಿಸಿದೆ. * ರತನ್ ಟಾಟಾ ಅವರು ಅಸ್ಸಾಂ ಸರ್ಕಾರದ ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಕೋವಿಡ್ -19 ಹಿನ್ನಲೆಯಿಂದಾಗಿ ಪಾಲ್ಗೊಳ್ಳಲು ಆಗಿಲ್ಲ. ಅಸ್ಸಾಂ ಗುವಾಹಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರ ಪ್ರತಿನಿಧಿಯ ಅವರ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. * ಈ ಅಸ್ಸಾಂ ಬೈಭವ್, ಅಸ್ಸಾಂ ಸೌರವ್ ಮತ್ತು ಅಸ್ಸಾಂ ಗೌರವ್ ಪ್ರಶಸ್ತಿಗಳನ್ನು ನೀಡುವುದಾಗಿ ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಘೋಷಣೆ ಮಾಡಿದ್ದರು. * * ಅಸ್ಸಾಂ ಸೌರವ್ ಪ್ರಶಸ್ತಿ : ಈ ಪ್ರಶಸ್ತಿಯನ್ನು ಪ್ರೊಫೆಸರ್ ದೀಪಕ್ ಚಂದ್ ಜೈನ್, ಲೊವ್ಲಿನಾ ಬೊರ್ಗೊಹೈನ್, ಪ್ರೊಫೆಸರ್ ಕಮಲೆಂದು ದೇಬ್ ಕ್ರೋರಿ, ಡಾ ಲಕ್ಷ್ಮಣನ್ ಎಸ್ ಹಾಗೂ ನೀಲ್ ಪವನ್ ಬರುವಾ ಅವರಿಗೆ ನೀಡಿ ಗೌರವಿಸಲಾಗಿದೆ. * * ಅಸ್ಸಾಂ ಗೌರವ್ ಪ್ರಶಸ್ತಿ : ಈ ಪ್ರಶಸ್ತಿಯನ್ನು ಮನೋಜ್ ಕುಮಾರ್ ಬಸುಮತರಿ, ಮುನೀಂದ್ರ ನಾಥ್ ನ್ಗೇಟಿ, ಧರಣೀಧರ್ ಬೋರೊ, ಹೇಮೋಪ್ರಭ ಚುಟಿಯಾ, ಡಾ ಬಸಂತ ಹಜಾರಿಕಾ, ಕೌಶಿಕ್ ಬರುವಾ, ಖೋರ್ಸಿಂಗ್ ತೆರಾಂಗ್, ಆಕಾಶ್ ಜ್ಯೋತಿ ಗೊಗೊಯ್, ನಮಿತಾ ಕಲಿತಾ, ಡಾ ಆಸಿಫ್ ಇಕ್ಬಾಲ್, ಕಲ್ಪನಾ ಮೊರಿಕಾ, ಬೋಬಿ ಹಝಾ ಮೊರಿಕಾ, ಹಾಗೂ ಬೋಬಿ ಹಜಾ ಮೊರಿಕಾ ಅವರಿಗೆ ನೀಡಿ ಗೌರವಿಸಲಾಗಿದೆ. * * ಅಸ್ಸಾಂ ಬೈಭವ : ಈ ಪ್ರಶಸ್ತಿಯು ಅಸ್ಸಾಂ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. ಪ್ರಸ್ತುತ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು 'ಅಸ್ಸಾಂ ಬೈಭವ' ಪ್ರಶಸ್ತಿಯನ್ನು 2021 ರ ಡಿಸೆಂಬರ್. 02 ರಂದು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಈ ಪ್ರಶಸ್ತಿಯನ್ನು ಅಸ್ಸಾಂ ರಾಜ್ಯದ 'ಅಸೋಮ್ ದಿವಾಸ್' (ಅಸ್ಸಾಂ ದಿನ) ಸಂದರ್ಭದಲ್ಲಿ ಘೋಷಣೆ ಮಾಡಿದ್ದಾರೆ. * ಈ 'ಅಸ್ಸಾಂ ಬೈಭವ' ಪ್ರಶಸ್ತಿಯು 5 ಲಕ್ಷ ರೂ. ನಗದು ಬಹುಮಾನ ಹೊಂದಿರಲಿದೆ. ಈ ಪ್ರಶಸ್ತಿಯನ್ನು ಪಡೆದವರು ತಮ್ಮ ಜೀವನದುದ್ದಕ್ಕೂ ಸರ್ಕಾರಿ ವೆಚ್ಚದಲ್ಲಿಯೇ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಬಹುದು ಎಂದು ತಿಳಿಸಿದ್ದಾರೆ. * ರತನ್ ಟಾಟಾ ಅವರು ಭಾರತೀಯ ಕೈಗಾರಿಕೋದ್ಯಮಿ ಮತ್ತು ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷರಾಗಿದ್ದಾರೆ. ರತನ್ ಟಾಟಾ ಅವರು 1990 ರಿಂದ 2012 ರವರೆಗೆ, ಹಾಗೂ 2016 ರ ಅಕ್ಟೋಬರ್ ರಿಂದ 2017 ರ ಫೆಬ್ರವರಿ ರವರೆಗೆ ಟಾಟಾ ಗ್ರೂಪ್‌ನ ಅಧ್ಯಕ್ಷರು ಹಾಗೂ ಹಂಗಾಮಿ ಅಧ್ಯಕ್ಷರಾಗಿದ್ದರು. ಇವರಿಗೆ ಭಾರತ ಸರ್ಕಾರವು 2000 ರಲ್ಲಿ ಪದ್ಮಭೂಷಣ ಪ್ರಶಸ್ತಿ, ಹಾಗೂ 2008 ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.