Job Description: * ಪಶ್ಚಿಮ ಆಫ್ರಿಕಾದ ಬುರ್ಕಿನಾ ಪಾಸೊ ದೇಶದಲ್ಲಿ ಕ್ರಿಪ್ರ ಕ್ರಾಂತಿಯ ಮೂಲಕ ಅಲ್ಲಿನ ಅಧ್ಯಕ್ಷ ರೋಚ್ ಕಬೋರ್ ಅವರನ್ನು ಪದಚ್ಯುತಗೊಳಿಸಿ ಇದೀಗ ಆ ದೇಶವನ್ನು ಮಿಲಿಟರಿ ಪಡೆಯು ತನ್ನ ನಿಯಂತ್ರಣಕ್ಕೆ ಪಡೆದುಕೊಂಡಿರುವದಾಗಿ ಘೋಷಣೆ ಮಾಡಿದೆ. * ಇತ್ತೀಚಿಗೆ ಅಧ್ಯಕ್ಷ ರೋಚ್ ಅವರು ಹತ್ಯೆಯ ಯತ್ನದಿಂದ ಪಾರಾಗಿದ್ದಾರೆ, ಹಾಗೂ ಕ್ರಿಪ್ರ ಕ್ರಾಂತಿಯಲ್ಲಿ ಅಲ್ಲಿನ ಸೇನೆಯು ದೇಶವನ್ನು ತನ್ನ ವಶಕ್ಕೆ ಪಡೆದುಕೊಂಡಿರುವದಾಗಿ ಬರ್ಕಿನಾ ಪಾಸೊ ರಾಷ್ಟ್ರದ ಆಡಳಿತಾರೂಢ ಪಕ್ಷವು ಈ ಮಾಹಿತಿಯನ್ನು ತಿಳಿಸಿದೆ. * ಪ್ರಸ್ತುತ ಬರ್ಕಿನಾ ಪಾಸೊದಲ್ಲಿರುವ ಇಸ್ಲಾಮಿಸ್ಟ್ ಬಂಡುಕೋರರ ಬಂಡಾಯವನ್ನು ಮಟ್ಟಹಾಕುವಲ್ಲಿ ಆ ದೇಶದ ಅಧ್ಯಕ್ಷ ರೋಚ್ ವಿಫಲರಾಗಿದ್ದಾರೆ ಎಂದು ಆಡಳಿತಾರೂಢ ಪಕ್ಷವು ಆರೋಪವನ್ನು ಮಾಡಿದೆ. * ಸದ್ಯ ಬರ್ಕಿನಾ ಪಾಸೊ ದೇಶದ ಸಂವಿಧಾನವನ್ನು ಅಮಾನತುಗೊಳಿಸಲಾಗಿದೆ, ಸಂಸತ್ ಮತ್ತು ಸರ್ಕಾರವನ್ನು ವಿಸರ್ಜಿಸಲಾಗಿದೆ. ಇದೇ ಸೋಮವಾರ ಮಧ್ಯರಾತ್ರಿಯಿಂದಲೇ ದೇಶದ ಗಡಿಭಾಗಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಕಿರಿಯ ಅಧಿಕಾರಿಯೊಬ್ಬರು ಲೆಫ್ಟಿನೆಂಟ್ ಕರ್ನಲ್ ಪೌಲ್ ಹೆನ್ಸಿ ಸಹಿ ಹಾಕಿರುವ ಪತ್ರದಲ್ಲಿ ಈ ಮಾಹಿತಿ ಲಭ್ಯವಾಗಿದೆ. * ಇದೀಗ ಮಿಲಿಟರಿ ಪಡೆಯು ಪಶ್ಚಿಮ ಆಫ್ರಿಕಾದ ಬುರ್ಕಿನಾ ಪಾಸೊ ದೇಶದಲ್ಲಿನ ಗಲಭೆ, ಹಿಂಸಾಚಾರ ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಶಾಂತಿಯನ್ನು ಕಾಪಾಡಲು ದೇಶಾದ್ಯಂತ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ ಎಂದು ತಿಳಿಸಿದೆ. ಹಾಗೂ ಹೊಸ ಆಡಳಿತದ ಬಗ್ಗೆ ಶೀಘ್ರವೇ ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ ಎಂದು ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ. * ಬುರ್ಕಿನಾ ಫಾಸೊ: ಪಶ್ಚಿಮ ಆಫ್ರಿಕಾದಲ್ಲಿನ ಭೂಕುಸಿತ ದೇಶವಾಗಿದೆ, ಈ ದೇಶವು ವಾಯುವ್ಯಕ್ಕೆ ಮಾಲಿ, ಈಶಾನ್ಯಕ್ಕೆ ನೈಜರ್, ಆಗ್ನೇಯಕ್ಕೆ ಬೆನಿನ್, ದಕ್ಷಿಣಕ್ಕೆ ಟೋಗೊ ಹಾಗೂ ಘಾನಾ, ನೈಋತ್ಯಕ್ಕೆ ಐವರಿ ಕೋಸ್ಟ್‌ ದೇಶಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಈ ದೇಶವನ್ನು 1958 ರಿಂದ 1984 ನಡುವೆ ರಿಪಬ್ಲಿಕ್ ಆಫ್ ಅಪ್ಪರ್ ವೋಲ್ಟಾ ಎಂದು ಕರೆಯುತ್ತಿದ್ದರು. ಈ ದೇಶಕ್ಕೆ 1984 ರ ಆಗಸ್ಟ್. 04 ರಂದು ಅಧ್ಯಕ್ಷ ಥಾಮಸ್ ಶಂಕರ ಅವರು 'ಬುರ್ಕಿನಾ ಫಾಸೊ' ಎಂದು ಮರುನಾಮಕರಣ ಮಾಡಿದರು. * ಸದ್ಯ ಔಗಾಡೌಗೌ ನಗರವು ಬುರ್ಕಿನಾ ಫಾಸೊ ದೇಶದ ರಾಜಧಾನಿಯಾಗಿದೆ. * ಬುರ್ಕಿನಾ ಫಾಸೊ ದೇಶವು 16.226 ಶತಕೋಟಿ ರೂ. GDP ಯೊಂದಿಗೆ ಕಡಿಮೆ ಅಭಿವೃದ್ಧಿ ಹೊಂದಿರುವ ದೇಶವಾಗಿದೆ. ಇಲ್ಲಿನ ಜನಸಂಖ್ಯೆಯ 63% ಇಸ್ಲಾಂ ಧರ್ಮ ಹಾಗೂ 22% ಕ್ರಿಶ್ಚಿಯನ್ ಧರ್ಮವನ್ನು ಆಚರಿಸುತ್ತಾರೆ. ಈ ಪ್ರದೇಶದಲ್ಲಿನ ಫ್ರೆಂಚ್ ವಸಾಹತುಶಾಹಿಯ ಕಾರಣದಿಂದಾಗಿ ಈ ದೇಶದ ಆಡಳಿತ ಮತ್ತು ವ್ಯವಹಾರದ ಅಧಿಕೃತ ಭಾಷೆ ಫ್ರೆಂಚ್ ಆಗಿದೆ. ಈ ಬುರ್ಕಿನಾ ಫಾಸೊ ದೇಶವು ಯುನೈಟೆಡ್ ನೇಷನ್ಸ್, ECOWAS, ಆಫ್ರಿಕನ್ ಯೂನಿಯನ್, ಲಾ ಫ್ರಾಂಕೋಫೋನಿ ಹಾಗೂ ಇಸ್ಲಾಮಿಕ್ ಸಹಕಾರ ಸಂಘಟನೆಯ ಸದಸ್ಯ ರಾಷ್ಟ್ರವಾಗಿದೆ.