Job Description: * ಪ್ರಸ್ತುತ ಪಾಕಿಸ್ತಾನ ದೇಶದಲ್ಲಿನ ಸುಪ್ರೀಂಕೋರ್ಟ್‌ನ ಮೊದಲ ಮಹಿಳಾ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ಆಯೇಷಾ ಮಲಿಕ್‌ ಪ್ರಮಾಣ ವಚನ ಸ್ವೀಕರಿಸಿದ್ದಾರೆ. * ನ್ಯಾಯಮೂರ್ತಿ ಆಯೇಷಾ ಮಲಿಕ್‌ ಅವರಿಗೆ ಸುಪ್ರೀಂಕೋರ್ಟ್‌ನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ನ್ಯಾಯಮೂರ್ತಿ ಗುಲ್ಜಾರ್‌ ಅಹ್ಮದ್‌ ಪ್ರಮಾಣವಚನ ಬೋಧಿಸಿದರು. * ಆಯೇಷಾ ಮಲಿಕ್‌ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಂಧರ್ಭದಲ್ಲಿ ಅಟಾರ್ನಿ ಜನರಲ್‌, ವಕೀಲರು ಹಾಗೂ ಕಾನೂನು ಮತ್ತು ನ್ಯಾಯ ಆಯೋಗದ ಅಧಿಕಾರಿಗಳು ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. * ಆಯೇಷಾ ಮಲಿಕ್ ಅವರು ಪಾಕಿಸ್ತಾನಿ ನ್ಯಾಯಾಧೀಶರಾಗಿದ್ದಾರೆ. ಇವರು ಪಾಕಿಸ್ತಾನದ ಇತಿಹಾಸದಲ್ಲಿ ಸುಪ್ರೀಂ ಕೋರ್ಟ್‌'ನ ಮೊದಲ ಮಹಿಳಾ ನ್ಯಾಯಾಧೀಶರಾಗಿದ್ದಾರೆ. ಇತ್ತೀಚಿಗೆ ಪಾಕಿಸ್ತಾನದ ನ್ಯಾಯಾಂಗ ಆಯೋಗವು 2022 ರ ಜನವರಿ. 06 ರಂದು ಪಾಕಿಸ್ತಾನದ ಸುಪ್ರೀಂ ಕೋರ್ಟ್‌ಗೆ ಆಯೇಷಾ ಮಲಿಕ್ ಅವರ ನೇಮಕಾತಿಯನ್ನು ಅನುಮೋದಿಸಿತು. ಈ ಹಿನ್ನಲೆಯಿಂದಾಗಿ ಆಯೇಷಾ ಮಲಿಕ್ ಅವರು 2022 ರ ಜನವರಿ. 24 ರಂದು ಅಧಿಕಾರವನು ವಹಿಸಿಕೊಂಡರು. ಈ ಮೊದಲು ಆಯೇಷಾ ಮಲಿಕ್ ಅವರು 2012 ರ ಮಾರ್ಚ್. 27 ರಿಂದ 2022 ಜನವರಿ. 05 ರವರೆಗೆ ಪಾಕಿಸ್ತಾನದ ಲಾಹೋರ್ ಹೈಕೋರ್ಟ್‌ನ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದಾರೆ. * ಪಾಕಿಸ್ತಾನದ ಸುಪ್ರೀಂ ಕೋರ್ಟ್: ಇದೊಂದು ಪಾಕಿಸ್ತಾನದ ನ್ಯಾಯಾಂಗ ಶ್ರೇಣಿಯಲ್ಲಿನ ಸರ್ವೋಚ್ಚ ನ್ಯಾಯಾಲಯವಾಗಿದೆ. ಇದು ಪಾಕಿಸ್ತಾನದ ಸಂವಿಧಾನದ ಭಾಗ VII ಗೆ ಅನುಗುಣವಾಗಿ ಸ್ಥಾಪಿತವಾಗಿದೆ, ಈ ಕೋರ್ಟ್ ಕಾನೂನುಗಳ ಸಮಸ್ಯೆಗಳನ್ನು ಒಳಗೊಂಡಿರುವ ಎಲ್ಲಾ ನ್ಯಾಯಾಲಯಗಳಲ್ಲಿ ಅಂತಿಮ ಹಾಗೂ ವ್ಯಾಪಕವಾದ ಮೇಲ್ಮನವಿ, ಮೂಲ ಮತ್ತು ಸಲಹಾ ನ್ಯಾಯವ್ಯಾಪ್ತಿಗಳನ್ನು ಹೊಂದಿದೆ. * ಈ ಸರ್ವೋಚ್ಚ ನ್ಯಾಯಾಲಯವು ಪಾಕಿಸ್ತಾನದ ಮುಖ್ಯ ನ್ಯಾಯಾಧೀಶರು, '16' ನ್ಯಾಯಮೂರ್ತಿಗಳು ಹಾಗೂ '2' ಅಡ್‌ಹಾಕ್‌ಗಳನ್ನು ಸಂಯೋಜಿಸಲಾಗಿದೆ. ನ್ಯಾಯಾಧೀಶರು ಒಮ್ಮೆ ನೇಮಕಗೊಂಡ ನಂತರ, ನ್ಯಾಯಮೂರ್ತಿಗಳು ಗೊತ್ತುಪಡಿಸಿರುವ ಅವಧಿಯನ್ನು ಪೂರ್ಣಗೊಳಿಸುತ್ತಾರೆ, ಹಾಗೂ 65 ವರ್ಷ ವಯಸ್ಸಿನಲ್ಲಿ ನಿವೃತ್ತಿಯನ್ನು ಹೊಂದುತ್ತಾರೆ. * ಸುಪ್ರೀಂ ಕೋರ್ಟ್ ಇಸ್ಲಾಮಾಬಾದ್‌ನಲ್ಲಿ ಶಾಶ್ವತ ಸ್ಥಾನವನ್ನು ಹೊಂದಿದೆ.