Job Description: * ಪ್ರಸ್ತುತ 'ಮಿಷನ್ ಪಾನಿ ಜಲ ಶಕ್ತಿ' ಜಲ ಸಂರಕ್ಷಣೆ ಅಭಿಯಾನದ ರಾಷ್ಟ್ರವ್ಯಾಪಿ ರಾಯಭಾರಿಯಾಗಿ ನಟಿ ಊರ್ವಶಿ ರೌಟೇಲಾ ಅವರನ್ನು ಆಯ್ಕೆ ಮಾಡಲಾಗಿದೆ. ನಟಿ ಊರ್ವಶಿ ರೌಟೇಲಾ ಅವರು ತಮ್ಮ ಫೌಂಡೇಶನ್ ವತಿಯಿಂದ ನೀರಿನ ಸಮಸ್ಯೆಯ ಪರಿಹಾರಕ್ಕಾಗಿ ಹೋರಾಡಿದ್ದಾರೆ, ಇವರು ತಮ್ಮ ಫೌಂಡೇಶನ್ ವತಿಯಿಂದ ಉತ್ತರಾಖಂಡ, ಪೌರಿ, ಗರ್ವಾಲ್ ಹಾಗೂ ಹರಿದ್ವಾರದ ನೂರಾರು ಸಮುದಾಯಗಳಿಗೆ ಶುದ್ಧ ಹಾಗೂ ಸುರಕ್ಷಿತ ನೀರು ಲಭ್ಯವಾಗುವಂತೆ ಮಾಡಿದ್ದಾರೆ. * ನ್ಯೂಸ್ 18 ಮಿಷನ್ ಪಾನಿ ಉಡಾವಣಾ ಕಾರ್ಯಕ್ರಮವು ಸರಣಿ ಚರ್ಚೆ ಹಾಗೂ ಸಂದರ್ಶನಗಳ ಮೂಲಕ ಭಾರತದಲ್ಲಿ ನಡೆಯುತ್ತಿರುವ ಹಾಗೂ ಹದಗೆಡುತ್ತಿರುವ ನೀರಿನ ಬಿಕ್ಕಟ್ಟಿಗೆ ಒಂದು ಕಿಟಕಿಯಾಗಿ ಕಾರ್ಯನಿರ್ವಹಿಸುತ್ತದೆ. * ಮುಂಬೈನಗರದಲ್ಲಿ ಈ ಹಿಂದೆ 2019 ರ ಆಗಸ್ಟ್. 27 ರಂದು ಜುಹುವಿನ JW ಮ್ಯಾರಿಯೆಟ್‌ನಲ್ಲಿ 'ಮಿಷನ್ ಪಾನಿ' ಅಭಿಯಾನದ ಕ್ರಾಯಕ್ರಮದಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಾಗೂ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಪಾಲ್ಗೊಂಡಿದ್ದರು. ಆ ಕಾರ್ಯಕರಮದಲ್ಲಿ ಮಾತನಾಡಿದ ಬಚ್ಚನ್ ಅವರು ಇದೀಗ ನೀರಿನ ಕೊರತೆಯು ಒಂದು ದೊಡ್ಡ ಸಮಸ್ಯೆಯಾಗಿದೆ ಮತ್ತು ಅದರ ಸಂರಕ್ಷಣೆಯತ್ತ ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದರು. ಆಗ ಬಚ್ಚನ್ ಅವರು ಮಿಷನ್ ಪಾನಿ ಎಂಬ ಜಲಸಂರಕ್ಷಣಾ ಜಾಗೃತಿ ಅಭಿಯಾನದ ರಾಯಭಾರಿಯಾಗಿದ್ದರು. * * ಊರ್ವಶಿ ರೌಟೇಲಾ : ಇವರು ಭಾರತೀಯ ನಟಿ ಮತ್ತು ಬಾಲಿವುಡ್ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುವ ರೂಪದರ್ಶಿಯಾಗಿದ್ದಾರೆ. ಇವರು ಈ ಹಿಂದೆ 2015 ರ ಮಿಸ್ ದಿವಾ ಯೂನಿವರ್ಸ್ ಕಿರೀಟವನ್ನು ಪಡೆದುಕೊಂಡಿದ್ದಾರೆ ಹಾಗೂ 2015 ರ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. * ಊರ್ವಶಿ ರೌಟೇಲಾ ಅವರು 2013 ರಲ್ಲಿ ಸಿಂಗ್ ಸಾಬ್ ದಿ ಗ್ರೇಟ್ ಚಿತ್ರದ ಮೂಲಕ ಬಾಲಿವುಡ್‌ ಚಿತರಂಗಕ್ಕೆ ಸೇರಿಕೊಂಡರು. ಮತ್ತೇ 2016 ರಲ್ಲಿ ಸನಮ್ ರೇ, ಗ್ರೇಟ್ ಗ್ರ್ಯಾಂಡ್ ಮಸ್ತಿ, 2018 ರಲ್ಲಿ ಹೇಟ್ ಸ್ಟೋರಿ 4 ಇನ್ನು ಅನೇಕ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ, ಕನ್ನಡ ಚಿತ್ರರಂಗದ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ.