Job Description: * ಭಾರತದಲ್ಲಿ ಪ್ರತಿ ವರ್ಷವು ಜನವರಿ. 24 ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಣೆ ಮಾಡಲಾಗುತ್ತದೆ. ಈ ದಿನವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಮತ್ತು ಭಾರತ ಸರ್ಕಾರವು ಭಾರತೀಯ ಸಮಾಜದಲ್ಲಿ ಹುಡುಗಿಯರು ಎದುರಿಸುತ್ತಿರುವ ಅಸಮಾನತೆಗಳ ಬಗ್ಗೆ ಸಾರ್ವಜನಿಕ ಜಾಗೃತಿಯನ್ನು ಮೂಡಿಸಲು ಈ ಹಿಂದೆ 2008 ರಲ್ಲಿ ರಾಷ್ಟ್ರೀಯ ಹೆಣ್ಣುಮಕ್ಕಳ ದಿನವನ್ನು ಆರಂಭಿಸಿದೆ. * ಈ ದಿನದಂದು ಹೆಣ್ಣು ಮಗುವನ್ನು ಉಳಿಸಿ, ಮಕ್ಕಳ ಲಿಂಗ ಅನುಪಾತಗಳು ಹಾಗೂ ಹೆಣ್ಣುಮಕ್ಕಳಿಗೆ ಆರೋಗ್ಯಕರ ಮತ್ತು ಸುರಕ್ಷಿತ ವಾತಾವರಣವನ್ನು ನಿರ್ಮಿಸುವ ಕುರಿತು ಜಾಗೃತಿ ಅಭಿಯಾನಗಳ ಅಡಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಈ ಹಿಂದೆ 2019 ರಲ್ಲಿ, ಉಜ್ವಲವಾದ ನಾಳೆಗಾಗಿ ಹೆಣ್ಣುಮಕ್ಕಳ ಸಬಲೀಕರಣ ಎಂಬ ವಿಷಯದ ಅಡಿಯಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಣೆ ಮಾಡಲಾಗಿದೆ. * ಪ್ರಸ್ತುತ ಹೆಣ್ಣು ಮಗುವನ್ನು ಸಬಲೀಕರಣಗೊಳಿಸಲು ಹಾಗೂ ನಮ್ಮ ನಾರಿ ಶಕ್ತಿಯನ್ನು ಬಲಪಡಿಸಲು ಹೆಚ್ಚಿನ ಆದ್ಯತೆಗಳನ್ನೂ ನೀಡಲಾಗುತ್ತದೆ. ಹಾಗೂ ಹೆಣ್ಣು ಮಗುವಿಗೆ ಘನತೆ ಹಾಗೂ ಅವಕಾಶಗಳನ್ನು ಒದಗಿಸಲಾಗುತ್ತದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಹಾಗೂ ಭಾರತದ ಪ್ರತಿಯೊಬ್ಬ ಹೆಣ್ಣು ಮಗಳಿಗೂ ಈ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಶುಭಾಶಯಗಳನ್ನು ತಿಳಿಸುತಿದ್ದೇನೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮೂಲಕ ತಿಳಿಸಿದ್ದಾರೆ. * ಭಾರತ ಸರ್ಕಾರವು 2015 ರ ಜನವರಿ 22 ರಂದು ಭಾರತದಲ್ಲಿ ಸ್ತ್ರೀ ಸಬಲೀಕರಣಕ್ಕೆ ಸಂಬಂಧಿಸಿದ ಪ್ರಮುಖ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು "ಬೇಟಿ ಬಚಾವೋ, ಬೇಟಿ ಪಢಾವೋ" (BBBP) ಯೋಜನೆಯನ್ನು ಆರಂಭಿಸಿದೆ. ಇಂತಹ ಯೋಜನೆಗಳ ಅಡಿಯಲ್ಲಿ ಹೆಣ್ಣು ಮಗುವಿಗೆ ಆರೋಗ್ಯಕರ ಹಾಗೂ ಸುರಕ್ಷಿತ ವಾತಾವರಣವನ್ನು ಕಲ್ಪಿಸಲು ಅನೇಕ ಕಾರ್ಯಕ್ರಮಗಳನ್ನೂ ಈ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದಂದು ಆಚರಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. * ಪ್ರಸ್ತುತ "ಬೇಟಿ ಬಚಾವೋ, ಬೇಟಿ ಪಢಾವೋ": ಇದೊಂದು ಭಾರತ ಸರ್ಕಾರದ ಅಭಿಯಾನವಾಗಿದೆ, ಇದನ್ನು ಭಾರತದಲ್ಲಿ ಹೆಣ್ಣುಮಕ್ಕಳಿಗಾಗಿ ಉದ್ದೇಶಿಸಲಾಗಿರುವ ಕಲ್ಯಾಣ ಸೇವೆಗಳ ಜಾಗೃತಿ ಮತ್ತು ದಕ್ಷತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಅಭಿಯಾನವಾಗಿದೆ. * ಈ ಯೋಜನೆಯನ್ನು 2015 ರಲ್ಲಿ ಹರಿಯಾಣದ ಪಾಣಿಪತ್‌ನಲ್ಲಿ 100 ಕೋಟಿ ರೂ. ಆರಂಭಿಕ ನಿಧಿಯೊಂದಿಗೆ ಆರಂಭಿಸಲಾಗಿದೆ. ಈ ಯೋಜನೆಯು ಪ್ರಮುಖ್ಯವಾಗಿ ಉತ್ತರ ಪ್ರದೇಶ, ಹರಿಯಾಣ, ಉತ್ತರಾಖಂಡ, ಪಂಜಾಬ್, ಬಿಹಾರ ಮತ್ತು ದೆಹಲಿಯ ಸಮೂಹಗಳನ್ನು ಗುರಿಯಾಗಿಸಿಕೊಂಡು ಆರಂಭಿಸಲಾಗಿದೆ.