Job Description: * ಇತ್ತೀಚಿಗೆ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಏಕದಿನ ಸರಣಿ ನಡೆದಿದೆ, ಈ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡವು ಭಾರತದ ವಿರುದ್ಧ ಜಯ ಸಾಧಿಸಿದೆ. * ಪ್ರಸ್ತುತ ನ್ಯೂಲ್ಯಾಂಡ್ಸ್ ಕೇಪ್ ಟೌನ್ ನ ಕ್ರೀಡಾಂಗಣದಲ್ಲಿ ಜರುಗಿದ 3 ನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು 288 ರನ್ ಗಳ ಗುರಿಯನ್ನು ನೀಡಿತ್ತು ಆದರೆ ಭಾರತ ತಂಡವು ಈ ಗುರಿಯನ್ನು ತಲುಪುವಲ್ಲಿ ವಿಪವಾಗಿ 49.2 ಓವರ್ ನಲ್ಲಿ 283 ರನ್ ಗಳಿಗೆ ಆಲೌಟ್ ಆಗಿ ಸೋಲ ಅನುಭವಿಸಿದೆ. ಈ ಮೂಲಕ ದಕ್ಷಿಣ ಆಫ್ರಿಕಾ ತಂಡವು 3 ಪಂದ್ಯಗಳ ಏಕದಿನ ಸರಣಿಯಲ್ಲಿ 3-0 ಅಂತರದಲ್ಲಿ ಭಾರತವನ್ನು ಸೋಲಿಸಿದೆ. * ಪ್ರಸ್ತುತ ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಪ್ರೋಟೀಸ್ ಎಂದೂ ಕರೆಯುತ್ತಾರೆ. ದಕ್ಷಿಣ ಆಫ್ರಿಕಾವು ಟೆಸ್ಟ್, ಏಕದಿನ ಅಂತರಾಷ್ಟ್ರೀಯ (ODI) ಮತ್ತು ಟ್ವೆಂಟಿ20 ಅಂತರಾಷ್ಟ್ರೀಯ (T20I) ಸ್ಥಾನಮಾನದೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಯ ಪೂರ್ಣ ಸದಸ್ಯವಾಗಿದೆ. ಇದನ್ನು ಸಾಮಾನ್ಯವಾಗಿ 'ಕಿಂಗ್ ಪ್ರೋಟಿಯಾ' ಎನ್ನಲಾಗುತ್ತದೆ. * ದಕ್ಷಿಣ ಆಫ್ರಿಕಾ ತಂಡವು 1888-89 ನೇ ವರ್ಷದಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡವನ್ನು ಆತಿಥ್ಯ ವಹಿಸಿದಾಗ ಪ್ರಥಮ ದರ್ಜೆ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪ್ರವೇಶವನ್ನು ಪಡೆದುಕೊಂಡಿತು. ಈ ತಂಡವು 1960 ರ ದಶಕದವರೆಗೆ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ವಿರುದ್ಧ ನಿಯಮಿತವಾಗಿ ಆಡಿತು, ಆ ಸಂಧರ್ಭಗಳಲ್ಲಿ ದೇಶದ ವರ್ಣಭೇದ ನೀತಿಗೆ ವಿರೋಧವಿತ್ತು. ಆಗ ICC ತಂಡದ ಮೇಲೆ ಅಂತರರಾಷ್ಟ್ರೀಯ ನಿಷೇಧವನ್ನು ಹೇರಿತು. ಹಾಗೂ ಈ ನಿಷೇಧವು 1991 ರವರೆಗೆ ಜಾರಿಯಲ್ಲಿತ್ತು. * ನಂತರದ ದಿನಗಳಲ್ಲಿ ದಕ್ಷಿಣ ಆಫ್ರಿಕಾ ಮೊದಲ ಬಾರಿಗೆ ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳ ವಿರುದ್ಧ ಆಡಿತು. ಪ್ರಸ್ತುತ ದಕ್ಷಿಣ ಆಫ್ರಿಕಾ ODI ಕ್ರಿಕೆಟ್‌ನಲ್ಲಿ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿದೆ. ಈ ತಂಡವು 1998 ರಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ದಕ್ಷಿಣ ಆಫ್ರಿಕಾ ಚಿನ್ನದ ಪದಕವನ್ನು ಜಯಿಸಿತ್ತು. * ಪ್ರಸ್ತುತ ದಕ್ಷಿಣ ಆಫ್ರಿಕಾ ತಂಡವು ಟೆಸ್ಟ್ ಹಾಗೂ ODI ನಲ್ಲಿ 5 ನೇ ಸ್ಥಾನದಲ್ಲಿದೆ. ಹಾಗೂ T20I ಗಳಲ್ಲಿ 6 ನೇ ಸ್ಥಾನದಲ್ಲಿದೆ.