Job Description: * ಪ್ರಸ್ತುತ ತಮಿಳುನಾಡು ರಾಜ್ಯದಲ್ಲಿನ ಪುರಾತತ್ವ ಇಲಾಖೆಯ ಮೊದಲ ನಿರ್ದೇಶಕರಾಗಿದ್ದ ಖ್ಯಾತ ಪುರಾತತ್ವಶಾಸ್ತ್ರಜ್ಞ ಹಾಗೂ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಆರ್. ನಾಗಸ್ವಾಮಿ ಅವರು ತಮ್ಮ 91ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. * ರಾಮಚಂದ್ರನ್ ನಾಗಸ್ವಾಮಿ ಅವರು 1930 ರ ಆಗಸ್ಟ್. 10 ರಂದು ಜನಿಸಿದ್ದರು. ಇವರು ಇತ್ತೀಚಿಗೆ 2022 ರ ಜನವರಿ. 23 ರಂದು ನಿಧನರಾಗಿದ್ದಾರೆ. ಇವರೊಬ್ಬ ಭಾರತೀಯ ಇತಿಹಾಸಕಾರ, ಪುರಾತತ್ವಶಾಸ್ತ್ರಜ್ಞ ಮತ್ತು ಶಾಸನಶಾಸ್ತ್ರಜ್ಞರಾಗಿದ್ದರು, ಇವರು ತಮಿಳುನಾಡು ರಾಜ್ಯದಲ್ಲಿನ ದೇವಾಲಯದ ಶಾಸನಗಳು ಮತ್ತು ಕಲಾ ಇತಿಹಾಸದ ಕೆಲಸಕ್ಕಾಗಿ ಒಳ್ಳೆಯ ಹೆಸರು ಮಾಡಿದ್ದರು. * ಆರ್. ನಾಗಸ್ವಾಮಿ ಅವರು ಈ ಹಿಂದೆ 1959 ರಿಂದ ಮದ್ರಾಸ್ ಮ್ಯೂಸಿಯಂನಲ್ಲಿ ಕಲೆ ಹಾಗೂ ಪುರಾತತ್ತ್ವ ಶಾಸ್ತ್ರದ ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ನಂತರ ದಿನಗಳಲ್ಲಿ ಅಂದರೆ 1963 ರಲ್ಲಿ ತಮಿಳುನಾಡು ರಾಜ್ಯ ಪುರಾತತ್ವ ಇಲಾಖೆಗೆ ಸಹಾಯಕ ವಿಶೇಷ ಅಧಿಕಾರಿಯಾಗಿ ನೇಮಕಗೊಂಡರು. ಮತ್ತೇ 1966 ರಲ್ಲಿ ತಮಿಳುನಾಡು ರಾಜ್ಯದ ಮೊದಲ ಪುರಾತತ್ತ್ವ ಶಾಸ್ತ್ರದ ನಿರ್ದೇಶಕರಾಗಿ ನೇಮಕಗೊಂಡರು. ಮತ್ತೇ ಇವರು 1988 ರಲ್ಲಿ ಆ ಹುದ್ದೆಯಿಂದ ನಿವೃತ್ತಿಯನ್ನು ಹೊಂದಿದರು. ಹಾಗೂ 1980 ರಲ್ಲಿ ವಾರ್ಷಿಕ ಚಿದಂಬರ ನಾಟ್ಯಾಂಜಲಿ ಉತ್ಸವವನ್ನು ಆರಂಭಿಸುವಲ್ಲಿ ಪ್ರಮುಖರಾಗಿದ್ದರು. * ಆರ್. ನಾಗಸ್ವಾಮಿ ಅವರಿಗೆ 2018 ರಲ್ಲಿ ಭಾರತದ 3ನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದುಕೊಂಡರು. * ಆರ್. ನಾಗಸ್ವಾಮಿ ಅವರು ಕಲೈಮಾಮಣಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು, ನೃತ್ಯ ಹಾಗೂ ಸಂಗೀತ ಕಾರ್ಯಕ್ರಮಗಳ ಸಹಾಯದಿಂದ ಐತಿಹಾಸಿಕ ಸ್ಥಳಗಳನ್ನು ಜನಪ್ರಿಯಗೊಳಿಸಲು ತೊಡಗಿದ್ದರು. ಅಷ್ಟೇ ಅಲ್ಲದೇ ರಾಜರಾಜ ಚೋಳ, ರಾಜೇಂದ್ರ ಚೋಳ, ಮಣಿಮೇಖಲೈ, ಅರುಣಗಿರಿನಾಥರ್ ಜೀವನದಂತಹ ಐತಿಹಾಸಿಕ ವಿಷಯಗಳ ಮೇಲೆ ಅನೇಕ ನೃತ್ಯ ನಾಟಕಗಳನ್ನು ರಚಿಸಿದ್ದಾರೆ. * ಆರ್. ನಾಗಸ್ವಾಮಿ ಅವರು ತಮಿಳುನಾಡಿನಲ್ಲಿ ವಿಶೇಷವಾಗಿ ಪಾಕೆಟ್ ಬುಕ್ ಗೈಡ್‌ಗಳ ಪ್ರಕಟಣೆಯ ಮೂಲಕ ಮಕ್ಕಳಲ್ಲಿ ಹತ್ತಿರದ ಐತಿಹಾಸಿಕ ಸ್ಥಳಗಳು ಹಾಗೂ ಸ್ಮಾರಕಗಳನ್ನು ಸ್ವಚ್ಛಗೊಳಿಸುವ ಮತ್ತು ಸಂರಕ್ಷಿಸುವಲ್ಲಿ ಅನೇಕ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುತ್ತಿದ್ದರು. ತಮಿಳುನಾಡಿನ ಪುಗಳೂರಿನ 1ನೇ ಶತಮಾನದ ಚೇರ ಶಾಸನಗಳು, ಗಂಗೈಕೊಂಡ ಚೋಳಪುರಂನಲ್ಲಿರುವ ಸಾಮ್ರಾಜ್ಯಶಾಹಿ ಚೋಳರ ಅರಮನೆ ಸ್ಥಳ, ಮತ್ತು ಮಧುರೈನಲ್ಲಿನ 17ನೇ ಶತಮಾನದ ಪ್ರಸಿದ್ಧ ತಿರುಮಲೈ ನಾಯಕ್ ಅರಮನೆ, ಹಾಗೂ ಟ್ರಾಂಕ್ವಿಬಾರ್‌ನಲ್ಲಿರುವ 17ನೇ ಶತಮಾನದ ಡ್ಯಾನಿಶ್ ಕೋಟೆ ಮತ್ತು ಹಲವಾರು ಐತಿಹಾಸಿಕ ಸ್ಮಾರಕಗಳನ್ನು ರಕ್ಷಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.