Job Description: * ಪ್ರಸ್ತುತ ICC ಯು ಇದೀಗ 2021 ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪಡೆದ ಕ್ರಿಕೆಟಿಗರ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಭಾರತೀಯ ಮಹಿಳಾ ತಂಡದ ಎಡಗೈ ಓಪನರ್‌ ಸ್ಮತಿ ಮಂಧನಾ ಅವರು ವರ್ಷದ ಆಟಗಾರ್ತಿಯಾಗಿ ಆಯ್ಕೆಯಾದ ಭಾರತದ ಏಕೈಕ ಕ್ರಿಕೆಟರ್‌ ಆಗಿದ್ದಾರೆ. * ಈ 2021 ನೇ ವರ್ಷದಲ್ಲಿ ಭಾರತದ ಪುರುಷ ಕ್ರಿಕೆಟಿಗರಿಗೆ ಯಾವ ಪ್ರಶಸ್ತಿಯು ಲಭಿಸಿಲ್ಲ. * ಸ್ಮತಿ ಮಂಧನಾ ಅವರಿಗೆ 2 ನೇ ಬಾರಿ ಈ ಪ್ರಶಸ್ತಿ ಲಭಿಸಿದೆ. ಈ ಮೊದಲು 2018 ರಲ್ಲಿ 'ವರ್ಷದ ಆಟಗಾರ್ತಿ' ಗೌರವ ಪ್ರಶಸ್ತಿಗೆ ಭಾಜನರಾಗಿದ್ದರು ಇದೀಗ ಮತ್ತೆ 2021 ನೇ 'ವರ್ಷದ ಆಟಗಾರ್ತಿ' ಎಂಬ ಗೌರವಕ್ಕೆ ಭಾಜನರಾಗಿದ್ದಾರೆ. ಈ ವರ್ಷದ ಆಟಗಾರ್ತಿ ಪ್ರಶಸ್ತಿಗೆ ಆಯ್ಕೆಯಾಗಿರುವ ಭಾರತದ ಕೇವಲ 2 ನೇ ಆಟಗಾರ್ತಿ ಮಂಧನಾ ಅವರಾಗಿದ್ದಾರೆ. ಈ ಹಿಂದೆ 2007 ರಲ್ಲಿ ಜೂಲನ್‌ ಗೋಸ್ವಾಮಿಗೆ ಈ ಪ್ರಶಸ್ತಿ ಲಭಿಸಿತ್ತು. * * ಸ್ಮೃತಿ ಶ್ರೀನಿವಾಸ್ ಮಂಧಾನ : ಭಾರತೀಯ ಮಹಿಳಾ ರಾಷ್ಟ್ರೀಯ ತಂಡದ ಕ್ರಿಕೆಟಿಗ. BCCI ಇವರನ್ನು 2018 ರ ಜೂನ್ ನಲ್ಲಿ ಅತ್ಯುತ್ತಮ ಮಹಿಳಾ ಅಂತರಾಷ್ಟ್ರೀಯ ಕ್ರಿಕೆಟಿಗ ಎಂದು ಹೆಸರಿಸಿದೆ. ಹಾಗೂ 2018 ರ ಡಿಸೆಂಬರ್ ನಲ್ಲಿ ICC ಇವರಿಗೆ ವರ್ಷದ ಅತ್ಯುತ್ತಮ ಮಹಿಳಾ ಕ್ರಿಕೆಟಿಗರಿಗಾಗಿ ರಾಚೆಲ್ ಹೇಹೋ-ಫ್ಲಿಂಟ್ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಪ್ರಸ್ತುತ 2022 ರ ಜನವರಿಯಲ್ಲಿ ICC ವರ್ಷದ ಐಸಿಸಿ ಮಹಿಳಾ ಕ್ರಿಕೆಟಿಗರಿಗೆ ರಾಚೆಲ್ ಹೇಹೋ-ಫ್ಲಿಂಟ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. * * ICC ಪ್ರಶಸ್ತಿ ಪುರಸ್ಕೃತರು : - ಪಾಕಿಸ್ಥಾನದ ಶಾಹೀನ್‌ ಶಾ ಅಫ್ರಿದಿ ಗೆ ವರ್ಷದ ಕ್ರಿಕೆಟಿಗ ಪ್ರಶಸ್ತಿ. - ಇಂಗ್ಲೆಂಡ್‌ ನ ಜೋ ರೂಟ್‌ ಗೆ ವರ್ಷದ ಟೆಸ್ಟ್‌ ಆಟಗಾರ ಪ್ರಶಸ್ತಿ. - ಪಾಕಿಸ್ಥಾನದ ಬಾಬರ್‌ ಆಜಂ ಗೆ ವರ್ಷದ ಏಕದಿನ ಆಟಗಾರ ಪ್ರಶಸ್ತಿ. - ಪಾಕಿಸ್ಥಾನದ ಮೊಹಮ್ಮದ್‌ ರಿಜ್ವಾನ್‌ ಗೆ ವರ್ಷದ ಟಿ20 ಆಟಗಾರ ಪ್ರಶಸ್ತಿ. - ದಕ್ಷಿಣ ಆಫ್ರಿಕಾದ ಜಾನೆಮನ್‌ ಮಲಾನ್‌ ಗೆ ವರ್ಷದ ಉದಯೋನ್ಮುಖ ಆಟಗಾರ ಪ್ರಶಸ್ತಿ. - ಒಮಾನ್‌ ನ ಜೀಶನ್‌ ಮಕ್ಸೂದ್‌ ಗೆ ವರ್ಷದ ಅಸೋಸಿಯೇಟ್‌ ದೇಶದ ಆಟಗಾರ ಪ್ರಶಸ್ತಿ. - ದಕ್ಷಿಣ ಆಫ್ರಿಕಾದ ಎರಾಸ್ಮಸ್ ಗೆ ವರ್ಷದ ಅಂಪಾಯರ್‌ ಪ್ರಶಸ್ತಿ. - ಭಾರತದ ಸ್ಮತಿ ಮಂಧನಾ ಗೆ ವರ್ಷದ ಆಟಗಾರ್ತಿ ಪ್ರಶಸ್ತಿ. - ದಕ್ಷಿಣ ಆಫ್ರಿಕಾದ ಲಿಜೆಲ್‌ ಲೀ ಗೆ ವರ್ಷದ ಏಕದಿನ ಆಟಗಾರ್ತಿ ಪ್ರಶಸ್ತಿ. - ಇಂಗ್ಲೆಂಡ್‌ ನ ಟಾಮಿ ಬ್ಯೂಮಂಟ್‌ ಗೆ ವರ್ಷದ ಟಿ20 ಆಟಗಾರ್ತಿ ಪ್ರಶಸ್ತಿ. - ಪಾಕಿಸ್ಥಾನದ ಫಾತಿಮಾ ಸನಾಗೆ ವರ್ಷದ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿ. - ಆಸ್ಟ್ರಿಯಾದ ಮೇ ಝೆಪೆಡಾಗೆ ವರ್ಷದ ಅಸೋಸಿಯೇಟ್‌ ದೇಶದ ಆಟಗಾರ್ತಿ ಪ್ರಶಸ್ತಿಗಳು ಲಭಿಸಿವೆ. * ಪ್ರಸ್ತುತ ಈ ICC ಪ್ರಶಸ್ತಿಗಳು ಅಂತರಾಷ್ಟ್ರೀಯ ಕ್ರಿಕೆಟ್‌ಗಾಗಿ ವಾರ್ಷಿಕ ಕ್ರೀಡಾ ಪ್ರಶಸ್ತಿಗಳಾಗಿವೆ. ಈ ಪ್ರಶಸ್ತಿಯನ್ನು ಹಿಂದಿನ 12 ತಿಂಗಳ ಅತ್ಯುತ್ತಮ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರನ್ನು ಗುರುತಿಸಲು ನೀಡಲಾಗುತ್ತದೆ. * ಈ ಪ್ರಶಸ್ತಿಗಳನ್ನು ICC 2004 ರಲ್ಲಿ ಪರಿಚಯಿಸಿದೆ. ಈ ಹಿಂದೆ 2009 ಮತ್ತು 2014 ರ ನಡುವೆ ಪ್ರಾಯೋಜಕತ್ವದ ಹಿನ್ನಲೆಯಿಂದಾಗಿ ಈ ಪ್ರಶಸ್ತಿಗಳನ್ನು LG ICC ಪ್ರಶಸ್ತಿಗಳು ಎಂದು ಕರೆಯುತ್ತಿದ್ದರು.