Job Description: * ಈ ಹಿಂದೆ 1950 ರಲ್ಲಿ ಭಾರತದ ಚುನಾವಣಾ ಆಯೋಗದ ಸಂಸ್ಥಾಪನಾ ದಿನವನ್ನು ಗುರುತಿಸಲು ಪ್ರತಿ ವರ್ಷ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಅಷ್ಟೇ ಅಲ್ಲದೆ ಈ ದಿನದಂದು ಹೊಸ ಮತದಾರರನ್ನು ಪ್ರೋತ್ಸಾಹಿಸಲಾಗುತ್ತದೆ. * ಪ್ರಸ್ತುತ ಭಾರತವು 1951 ರಲ್ಲಿ ತನ್ನ ಮೊದಲ ಸಾರ್ವತ್ರಿಕ ಚುನಾವಣೆಯ ನಂತರ ಮತದಾನಕ್ಕೆ ನಿಗದಿತ ವಯೋಮಾನದ ತತ್ವವನ್ನು ಅಳವಡಿಸಿಕೊಂಡಿದೆ. * ಇತ್ತೀಚಿಗೆ 2019 ರ ಲೋಕಸಭೆ ಚುನಾವಣೆಯಲ್ಲಿ ಸುಮಾರು 900 ಮಿಲಿಯನ್ ನೋಂದಾಯಿತ ಮತದಾರರಲ್ಲಿ ಶೇಕಡ 67.11ರಷ್ಟು ದಾಖಲೆಯ ಮತದಾನವಾಗಿದೆ. * 2011 ರಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಆಚರಣೆ ಮಾಡಲು ಆರಂಭಿಸಲಾಗಿದೆ. 2011 ರಲ್ಲಿ ಅಂದಿನ ರಾಷ್ಟ್ರಪತಿ ಪ್ರತಿಭಾ ದೇವಿ ಪಾಟೀಲ್ ಅವರು ಭಾರತದ ಚುನಾವಣಾ ಆಯೋಗದ 61 ನೇ ಸಂಸ್ಥಾಪನಾ ದಿನದಂದು ಈ ದಿನವನ್ನು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಣೆ ಮಾಡಲು ಆರಂಭಿಸಿದರು. * 1950 ರ ಜನವರಿ 25 ರಂದು ಭಾರತದ ಚುನಾವಣಾ ಆಯೋಗ, ಅಥವಾ ಇಸಿಐ ನ್ನು ಸ್ಥಾಪನೆ ಮಾಡಲಾಗಿದೆ. * ಪ್ರಸ್ತುತ ಚುನಾವಣಾ ಆಯೋಗವು 18 ವರ್ಷ ವಯಸ್ಸಿನ ಎಲ್ಲಾ ಅರ್ಹ ಮತದಾರರನ್ನು ಗುರುತಿಸಲು ತೀವ್ರ ಕಸರತ್ತು ಮಾಡಲು ನಿರ್ಧರಿಸಿದೆ. ಎಲ್ಲ ಅರ್ಹ ಮತದಾರರನ್ನು ಸಮಯಕ್ಕೆ ಸರಿಯಾಗಿ ನೋಂದಾಯಿಸಲಾಗುತ್ತದೆ ಹಾಗೂ ಪ್ರತಿ ವರ್ಷ ಜನವರಿ 25 ರಂದು ಅವರ ಚುನಾವಣಾ ಫೋಟೋ ಗುರುತಿನ ಚೀಟಿ ಹಸ್ತಾಂತರಿಸಲಾಗುವುದು ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಂಬಿಕಾ ಸೋನಿ ಅವರು ತಿಳಿಸಿದ್ದಾರೆ. * ಚುನಾವಣೆ ಆಯೋಗವು ಹೊಸ ಮತದಾರರಿಗೆ ಬ್ಯಾಡ್ಜ್ ಹಾಗೂ ಅದರ ಲಾಂಛನವನ್ನು ನೀಡಲಾಗುತ್ತದೆ ಹಾಗೂ 'ಮತದಾರನಾಗಲು ಹೆಮ್ಮೆ - ಮತ ಚಲಾಯಿಸಲು ಸಿದ್ಧ' ಎಂದು ಅವರು ತಿಳಿಸಿದರು. ರಾಷ್ಟ್ರೀಯ ಪ್ರಶಸ್ತಿಗಳನ್ನು ಚುನಾವಣಾ ಪ್ರಕ್ರಿಯೆಗಳು ಹಾಗೂ ಕಾರ್ಯವಿಧಾನಗಳಲ್ಲಿ ಶ್ರೇಷ್ಠತೆ, ಪ್ರಾವೀಣ್ಯತೆ ನೀಡಲಾಗುತ್ತದೆ. ಈ ಪ್ರಶಸ್ತಿಗಳನ್ನು ಚುನಾವಣಾ ಯಂತ್ರಗಳು, ಸರ್ಕಾರಿ ಇಲಾಖೆ / ಸಂಸ್ಥೆ / PSU, CSO ಮತ್ತು ಮಾಧ್ಯಮಗಳು ಗುರುತಿಸಿವೆ. * * ರಾಷ್ಟ್ರೀಯ ಮತದಾರರ ದಿನದ ಬಗ್ಗೆ ಅನೇಕ ಗಣ್ಯರ ಮಾತುಗಳು : - ಬುಲೆಟ್‌ಗಿಂತ ಮತಪತ್ರ ಬಲಿಷ್ಠವಾಗಿದೆ, ಎಂದು ತಿಳಿಸಿದವರು ಅಬ್ರಹಾಂ ಲಿಂಕನ್ . - ಬದಲಾವಣೆಯನ್ನು ಬಯಸುವುದು ಮಾತ್ರವಲ್ಲ, ನೀವು ಹೋಗಿ ಮತ ಚಲಾಯಿಸುವ ಮೂಲಕ ಬದಲಾವಣೆಯನ್ನು ಮಾಡಬೇಕು ಎಂದು ಹೇಳಿದವರು ಟೇಲರ್ ಸ್ವಿಫ್ಟ್. - ನಿಮ್ಮ ಮತದಾನದ ಹಕ್ಕಿಗಾಗಿ ಯಾರೋ ಹೋರಾಟ ನಡೆಸಿದ್ದಾರೆ. ಇದೀಗ ಅದನ್ನು ಬಳಸಿ, ಎಂದು ಸುಸಾನ್ ಬಿ. ಆಂಥೋನಿ ಅವರು ಹೇಳಿದ್ದಾರೆ. - ಮುಖ್ಯವಲ್ಲದ ಮತ ಎಂಬುದೇ ಇಲ್ಲ, ಎಲ್ಲಾ ಮತಗಳು ಮುಖ್ಯವೇ ಆಗಿದೆ, ಎಂದು ಬರಾಕ್‌ ಒಬಾಮಾ ಅವರು ತಿಳಿಸಿದ್ದಾರೆ.