Job Description: * ವಿಶ್ವದ ಅತ್ಯಂತ ಪ್ರಭಾವಶಾಲಿ ಬೌದ್ಧ ಸನ್ಯಾಸಿಗಳಲ್ಲಿ ಒಬ್ಬರಾಗಿದ್ದ ಥಿಚ್ ನಾತ್ ಹಾನ್ ಅವರು ತಮ್ಮ 95 ನೇ ವರ್ಷ ವಯಸ್ಸಿನಲ್ಲಿ ವಿಯೆಟ್ನಾಮ್‌ನಲ್ಲಿ ನಿಧನರಾಗಿದ್ದಾರೆ ಎಂದು ಅವರು ಸ್ಥಾಪಿಸಿರುವ ಝೆನ್ ಶಿಕ್ಷಣ ಸಂಸ್ಥೆಯು ಮಾಹಿತಿಯನ್ನು ನೀಡಿದೆ. ಬೌದ್ಧ ಸನ್ಯಾಸಿ ಥಿಚ್ ನಾತ್ ಹಾನ್ ಅವರು ಲೇಖಕ ಮತ್ತು ಶಿಕ್ಷಕರಾಗಿ ವಿಶ್ವಾದ್ಯಂತ ಅಪಾರವಾದ ಮೆಚ್ಚುಗೆ ಗಳಿಸಿದ್ದಾರೆ. * ಬೌದ್ಧ ಸನ್ಯಾಸಿ ಥಿಚ್ ನಾತ್ ಹಾನ್ ಅವರು ಅನುಯಾಯಿಗಳು ಇವರನ್ನು 'ಥೇ' ಅಥವಾ ಶಿಕ್ಷಕ ಎಂದು ಕರೆಯುತ್ತಾರೆ. ಈ ಹಿಂದೆ 1926 ರಲ್ಲಿ ನ್ಗುಯೇನ್ ಕ್ಸುವಾನ್ ಬಾವೊದಲ್ಲಿ ಜನಿಸಿದ್ದರು, ಇದೊಂದು ವಿಯೆಟ್ನಾಂ ರಾಷ್ಟ್ರದ ಸಣ್ಣ ಹಳ್ಳಿಯಾಗಿದೆ. * ಸನ್ಯಾಸಿ ಥಿಚ್ ನಾತ್ ಹಾನ್ ಅವರು ಸಮಾಜಮುಖಿ ಸೇವೆಗಳಿಗಾಗಿ ಯೂತ್ ಸ್ಕೂಲ್ ನ್ನು ಸ್ಥಾಪಿಸಿದರು. ಹಾಗೂ 1960 ರಲ್ಲಿ ಪ್ರಿನ್ಟನ್ ವಿಶ್ವವಿದ್ಯಾನಿಲಯದಲ್ಲಿ ತುಲನಾತ್ಮಕ ಧರ್ಮವನ್ನು ಅಧ್ಯಯನ ಮಾಡಲು ಹಾಗೂ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಬೌದ್ಧ ಧರ್ಮದ ವಿಷಯಗಳ ಬಗ್ಗೆ ಉಪನ್ಯಾಸ ಮಾಡಲು ಅಮೆರಿಕ ದೇಶಕ್ಕೆ ಪ್ರಯಾಣ ಬೆಳೆಸಿದ್ದರು. ನಂತರ 1963 ರಲ್ಲಿ ದಕ್ಷಿಣ ವಿಯೆಟ್ನಾಂಗೆ ವಾಪಸಾದರು ಆಗಿನಿಂದ ಅಲ್ಲಿನ ಖಾಸಗಿ ಬೌದ್ಧ ಕಾಲೇಜಿನಲ್ಲಿ ಉಪನ್ಯಾಸವನ್ನು ಮಾಡುತ್ತಿದ್ದರು. * ವಿಯೆಟ್ನಾಂ 2 ನೇ ಇಂಡೋ ಚೀನಾ ಯುದ್ಧದ ನಡುವೆ ಉತ್ತರ ಹಾಗೂ ದಕ್ಷಿಣ ವಿಯೆಟ್ನಾಂ ಮಧ್ಯೆ ಯುದ್ಧವು ಹೆಚ್ಚು ಬಾಷ್ಪಶೀಲವಾಯಿತು ಹಾಗೂ ಯು.ಎಸ್. ಅಧ್ಯಕ್ಷ ಲಿಂಡನ್ ಬಿ. ಜಾನ್ಸನ್ ಅವರು ಈ ಯುದ್ಧದ ನಡುವೆ ಪ್ರವೇಶಿಸಲು ನಿರ್ಧಾರವನ್ನು ಕೈಗೊಂಡರು. * ಈ ಹಿಂದೆ 1960 ರ ದಶಕದಲ್ಲಿ ವಿಯೆಟ್ನಾಂ ಯುದ್ಧದ ಸಂಧರ್ಭಗಳಲ್ಲಿ ಸನ್ಯಾಸಿ ಥಿಚ್ ನಾತ್ ಹಾನ್ ಅವರು US ನಾಗರಿಕ ಹಕ್ಕುಗಳ ನಾಯಕ ಮಾರ್ಟಿನ್ ಲೂಥರ್ ಕಿಂಗ್ ಅವರನ್ನು ಭೇಟಿಯಾಗಿ ಸಂಘರ್ಷದ ವಿರುದ್ಧ ಮಾತನಾಡಲು ಅವರ ಮನವೊಲಿಸಿದರು. * ಇದಾದ ಬಳಿಕ 1965 ರ ಮಾರ್ಚ್ ನಲ್ಲಿ ಅಮೇರಿಕ ವಿಯೆಟ್ನಾಂಗೆ ನೆಲದ ಸೈನ್ಯವನ್ನು ರವಾನಿಸಲು ಆರಂಭಿಸಿತ್ತು ಹಾಗೂ ಉತ್ತರ ವಿಯೆಟ್ನಾಂನ ಮೇಲೆ ಯುಎಸ್ ಬಾಂಬ್ ದಾಳಿಗಳು ನಡೆಸಲು ಆರಂಭಿಸಿತ್ತು. ಅದೇ ವರ್ಷ 1965 ರ ಏಪ್ರಿಲ್ ನಲ್ಲಿ ಥಿಚ್ ನಾತ್ ಅವರು ಉಪನ್ಯಾಸ ಮಾಡುತ್ತಿದ್ದ ಖಾಸಗಿ ಬೌದ್ಧ ಕಾಲೇಜಿನ ವಿದ್ಯಾರ್ಥಿಗಳು ಶಾಂತಿಗಾಗಿ ಕರೆ ನೀಡಿದರು. ಹಾಗೂ ಯುದ್ಧವನ್ನು ನಿಲ್ಲಿಸಲು ಹಾಗೂ ಎಲ್ಲಾ ವಿಯೆಟ್ನಾಂ ಜನತೆ ಶಾಂತಿಯುತವಾಗಿ ಜೀವಿಸಲು ಸಹಾಯ ಮಾಡುವ ಮಾರ್ಗವನ್ನು ಕಂಡುಹಿಡಿಯಲು ಉತ್ತರ ಹಾಗೂ ದಕ್ಷಿಣ ವಿಯೆಟ್ನಾಂಗೆ ಈಗ ಸಮಯ ಬಂದಿದೆ ಎಂದು ತಿಳಿಸಿದರು. * ಪ್ರಸ್ತುತ ಆಧುನಿಕ ವಿಯೆಟ್ನಾಮ್‌ನ ಸಂಸ್ಥಾಪಕ ಹಾಗೂ ಕ್ರಾಂತಿಕಾರಿ ಹೊ ಚಿನ್ ಮಿನ್ ವಿಯೆಟ್ನಾಮ್ ದೇಶವನ್ನು ಫ್ರಾನ್ಸ್‌ನ ವಸಾಹತುಶಾಹಿ ಆಡಳಿತದಿಂದ ಮುಕ್ತಗೊಳಿಸುವ ಪ್ರಯತ್ನದ ನೇತೃತ್ವವನ್ನು ವಹಿಸಿಕೊಂಡಿದ್ದರು, ನಂತರ ಥಿಚ್ ಹಾನ್ ಅವರನ್ನು ಬೌದ್ಧ ಸನ್ಯಾಸಿಯಾಗಿ ನೇಮಕಗೊಳಿಸಿದರು.