Job Description: * ಪ್ರಸ್ತುತ ಎಲೆಕ್ಟ್ರಾನಿಕ್ಸ್ ಮತ್ತು IT ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಮಾನ್ಯ ಸೇವಾ ಕೇಂದ್ರವು(CSC) ಇತ್ತೀಚೆಗೆ ಯೋಗ್ಯತಾ ಮೊಬೈಲ್ ಅಪ್ಲಿಕೇಶನ್ ನ್ನು ಪ್ರಾರಂಭಿಸಿದೆ. ಈ ಯೋಗ್ಯತಾ ಮೊಬೈಲ್ ಅಪ್ಲಿಕೇಶನ್ ಗ್ರಾಮೀಣ ಭಾಗದ ಯುವಕರಿಗೆ ಕೌಶಲ್ಯ ಅಭಿವೃದ್ಧಿ ಅವಕಾಶಗಳನ್ನು ಕಲ್ಪಿಸಲು ಸಹಾಯಕಾರಿಯಾಗಲಿದೆ ಎಂದಿದ್ದಾರೆ. * ಈ ಅಪ್ಲಿಕೇಶನ್ 3D ಮುದ್ರಣ, CAD, ಸೈಬರ್ ಭದ್ರತೆ ಹಾಗೂ ಅನೇಕ IT ಪರಿಕರಗಳಲ್ಲಿ ಕೋರ್ಸ್‌ಗಳನ್ನು ಒದಗಿಸುತ್ತದೆ. ಹಾಗೂ ಇದು ಕೈಗಾರಿಕಾ ಆಧಾರಿತ ತರಬೇತಿಯನ್ನು ಕೂಡ ಒದಗಿಸುತ್ತದೆ ಈ ಅಪ್ಲಿಕೇಶನ್'ನಲ್ಲಿ ನೀಡಲಾಗುವ ಕೋರ್ಸ್‌ಗಳು ದೇಶದ ಪ್ರಸ್ತುತ ಮಾರುಕಟ್ಟೆ ಅಗತ್ಯಗಳಿಗೆ ಅನುಗುಣವಾಗಿರುತ್ತವೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆಯ ವರದಿ ಮಾಡಿರುವ ಮಾಹಿತಿಯ ಪ್ರಕಾರ, ಗ್ರಾಮೀಣ ಯುವಕರು ನಗರ ಯುವಕರಿಗಿಂತ ಶೇ. 40 ಕ್ಕೂ ಅಧಿಕವಾಗಿ ಬಳಲುತ್ತಿದ್ದಾರೆ. ಸದ್ಯ ದೇಶದಲ್ಲಿ ಒದಗಿಸಲಾಗಿಟ್ಟಿರುವ ವೃತ್ತಿಪರ ತರಬೇತಿಗಳು ಸಾಂದರ್ಭಿಕ ಕಾರ್ಮಿಕರ ಅಗತ್ಯಗಳಿಗೆ ಹೊಂದಿಕೆಯಾಗುತ್ತಿಲ್ಲ. ಇದೀಗ ಈ ಸಾಂದರ್ಭಿಕ ಕೆಲಸಗಾರರು ದೇಶದ ಒಟ್ಟು ಉದ್ಯೋಗಿಗಳ ಶೇ. 90 ರಷ್ಟು ಕೊಡುಗೆ ನೀಡುತ್ತಾರೆ. * ಈ CSC ಗಳು ಶಾಸನಬದ್ಧ ಸಂಸ್ಥೆಗಳಾಗಿವೆ, ಇವುಗಳನ್ನು ಕಂಪನಿಗಳ ಕಾಯಿದೆಯಡಿ ಸ್ಥಾಪಿಸಲಾಗಿದೆ. ಈ CSC ಕೇಂದ್ರಗಳು ಸ್ಥಳೀಯ ಜನರನ್ನು ಸರ್ಕಾರಿ ಉದ್ಯಮಗಳು, ಬ್ಯಾಂಕುಗಳು, ವಿಮಾ ಕಂಪನಿಗಳು, ಖಾಸಗಿ ಸಂಸ್ಥೆಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳೊಂದಿಗೆ ಸಂಪರ್ಕಿಸುವ ಕಾರ್ಯವನ್ನು ಮಾಡುತ್ತವೆ. * ಸದ್ಯ ನಗರ ಪ್ರದೇಶಗಲ್ಲಿರುವ ಅಧಿಕ ಸಂಖ್ಯೆಯ ಕಟ್ಟಡ ಕಾರ್ಮಿಕರು ದೇಶದ ಗ್ರಾಮೀಣ ಪ್ರದೇಶಗಳಿಂದ ಬಂದವರಾಗಿದ್ದಾರೆ. ಈ ನಿರ್ಮಾಣ ಕ್ಷೇತ್ರವು ಸದ್ಯ ಐಟಿ ವಲಯದ '6' ಪಟ್ಟು ಉದ್ಯೋಗಗಳನ್ನು ನೀಡುತ್ತದೆ. * ಪ್ರಸ್ತುತ ನ್ಯಾಷನಲ್ ಸ್ಕಿಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾದ ನೀಡಿರುವ ಮಾಹಿತಿಯ ಪ್ರಕಾರ, ಭಾರತದಲ್ಲಿ 12 ಕೋಟಿಗೂ ಅಧಿಕ ಕೌಶಲ್ಯಪೂರ್ಣ ಮಾನವ ಶಕ್ತಿಯ ಅಗತ್ಯವಿದೆ ಎಂದು ತಿಳಿಸಿದೆ.