Job Description: * ಇತ್ತೀಚಿಗೆ ಆಸ್ಟ್ರೇಲಿಯ ಸರ್ಕಾರವು ಮೂಲನಿವಾಸಿಗಳ ಧ್ವಜದ ಹಕ್ಕುಸ್ವಾಮ್ಯದ ಗುರುತಿನ ಚಿಹ್ನೆಯನ್ನು ಯಾರು ಬಳಸಬಹುದು ಎಂಬ ಜಗಳದಿಂದ ಮುಕ್ತಗೊಳಿಸಲು ಖರೀದಿಸಿದೆ. * ಆಸ್ಟ್ರೇಲಿಯಾದ ಸ್ಥಳೀಯ ಕಲಾವಿದ ಹೆರಾಲ್ಡ್ ಥಾಮಸ್ 1971 ರಲ್ಲಿ ಈ ಮೂಲನಿವಾಸಿಗಳ ಧ್ವಜವನ್ನು ಪ್ರತಿಭಟನೆಯ ಚಿತ್ರವಾಗಿ ರಚಿಸಿದರು. ಇದೀಗ ಇದು ಅಲ್ಲಿನ ಅಧಿಕೃತ ರಾಷ್ಟ್ರೀಯ ಧ್ವಜ ಹಾಗೂ ಪ್ರಬಲವಾದ ಮೂಲನಿವಾಸಿಗಳ ಲಾಂಛನವಾಗಿದೆ. ಅನೇಕ ಮೂಲನಿವಾಸಿಗಳು ಧ್ವಜವನ್ನು ಅದರ ಪ್ರದರ್ಶನವನ್ನು ಮಿತಿಗೊಳಿಸುವ ಹಕ್ಕುಸ್ವಾಮ್ಯ ವ್ಯವಹಾರಗಳಿಂದ 'ಒತ್ತೆಯಾಳು' ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಆದರೆ ಈ ಧ್ವಜವನ್ನು ಇದೀಗ ಯಾವುದೇ ಕಾನೂನು ಬೆದರಿಕೆಗಳನ್ನು ಅನುಸರಿಸದೆ ಯಾರಾದರೂ ಪುನರುತ್ಪಾದಿಸಬಹುದು ಎಂದು ಆಸ್ಟ್ರೇಲಿಯಾ ತಿಳಿಸಿದೆ. * ಪ್ರಸ್ತುತ ಆಸ್ಟ್ರೇಲಿಯಾ ಸರ್ಕಾರವು ಈ ಧ್ವಜದ ಹಕ್ಕುಸ್ವಾಮ್ಯವನ್ನು ಪಡೆದುಕೊಳ್ಳಲು ಹಾಗೂ ಗುತ್ತಿಗೆ ಒಪ್ಪಂದಗಳಿಂದ ಮುಕ್ತಾಯಗೊಳಿಸಲು ಸುಮಾರು 20m USD ಗಿಂತಲೂ ಅಧಿಕ ಮೊತ್ತವನ್ನು ಪಾವತಿಸಿದೆ. * ಈ ಧ್ವಜವು ಮೂಲನಿವಾಸಿ ಆಸ್ಟ್ರೇಲಿಯನ್ನರನ್ನು ಪ್ರತಿನಿಧಿಸುತ್ತದೆ. ಈ ಧ್ವಜವು ಆಸ್ಟ್ರೇಲಿಯಾದ ಅಧಿಕೃತವಾಗಿ ಘೋಷಿಸಲಾಗಿದೆ. ಅಷ್ಟೇ ಅಲ್ಲದೇ ಈ ಧ್ವಜವು ರಾಷ್ಟ್ರೀಯ ಧ್ವಜ ಹಾಗೂ ಟೊರೆಸ್ ಸ್ಟ್ರೈಟ್ ಐಲ್ಯಾಂಡರ್ ಧ್ವಜದೊಂದಿಗೆ ವಿಶೇಷ ಕಾನೂನು ಮತ್ತು ರಾಜಕೀಯ ಸ್ಥಾನಮಾನವನ್ನು ಪಡೆದಿದೆ. * ಪ್ರಸ್ತುತ ಆಸ್ಟ್ರೇಲಿಯಾದ ಲುರಿಟ್ಜಾ ಜನರ ಮೂಲನಿವಾಸಿ ಕಲಾವಿದರಾಗಿದ್ದ ಹೆರಾಲ್ಡ್ ಥಾಮಸ್ ಅವರು ವಿನ್ಯಾಸಗೊಳಿಸಿರುವ ಈ ಧ್ವಜವು 2022 ರ ಜನವರಿವರೆಗೆ ಧ್ವಜದ ವಿನ್ಯಾಸದ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಅವರು ಹೊಂದಿದ್ದರು. ಇದೀಗ ಅವರು ಕಾಮನ್‌ವೆಲ್ತ್ ಸರ್ಕಾರಕ್ಕೆ ಹಕ್ಕುಸ್ವಾಮ್ಯವನ್ನು ವರ್ಗಾವಣೆ ಮಾಡಿದ್ದಾರೆ. * ಹೆರಾಲ್ಡ್ ಥಾಮಸ್ ಅವರು ಭೂಮಿ ಹಕ್ಕುಗಳ ಚಳುವಳಿಗಾಗಿ ಈ ಧ್ವಜವನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದ್ದರು ಅಷ್ಟೇ ಅಲ್ಲದೇ ಈ ಧ್ವಜವು ಆಸ್ಟ್ರೇಲಿಯಾದ ಮೂಲನಿವಾಸಿಗಳ ಸಂಕೇತವಾಗಿದೆ. * ಪ್ರಸ್ತುತ ಮೂಲನಿವಾಸಿ ಆಸ್ಟ್ರೇಲಿಯನ್ನರು ಆಸ್ಟ್ರೇಲಿಯನ್ ಮುಖ್ಯಭೂಮಿಯ ಸ್ಥಳೀಯ ಜನರು ಹಾಗೂ ಫ್ರೇಸರ್ ದ್ವೀಪ, ಟ್ಯಾಸ್ಮೇನಿಯಾ, ಟಿವಿ ದ್ವೀಪಗಳು, ಹಿಂಚಿನ್‌ಬ್ರೂಕ್ ದ್ವೀಪ ಹಾಗೂ ಗ್ರೂಟ್ ಐಲ್ಯಾಂಡ್‌ನಂತಹ ದ್ವೀಪಗಳಲ್ಲಿನ ಸ್ಥಳೀಯ ಆಸ್ಟ್ರೇಲಿಯನ್ನರಾಗಿದ್ದಾರೆ, ಈ ಪದವು ಒಟ್ಟಾರೆಯಾಗಿ ಮೂಲನಿವಾಸಿ ಆಸ್ಟ್ರೇಲಿಯನ್ನರು ಮತ್ತು ಟೊರೆಸ್ ಸ್ಟ್ರೈಟ್ ದ್ವೀಪವಾಸಿಗಳನ್ನು ಹೆಸರಿಸುತ್ತದೆ. ಇಲ್ಲಿರುವ ಅಧಿಕ ಮೂಲನಿವಾಸಿಗಳು ಇಂಗ್ಲಿಷ್ ಭಾಷೆಯನ್ನು ಮಾತನಾಡುತ್ತಾರೆ.