Job Description: * ಪ್ರಸ್ತುತ ಕೇಂದ್ರ ಸರ್ಕಾರವು ಮಾನವ ಕೂದಲಿನ ರಪ್ತಿನ ಮೇಲೆ ನಿರ್ಬಂಧಗಳನ್ನು ಹೇರಿದೆ. ಇದೀಗ ದೇಶದ ಕೂದಲು ಉದ್ಯಮವು ಕೇಂದ್ರ ಸರ್ಕಾರದ ಈ ಕ್ರಮಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದೆ. ಈ ಕ್ರಮವು ಭಾರತ ದೇಶದಿಂದಾಗುವ ಕಳ್ಳಸಾಗಣೆಯನ್ನು ತಡೆಯಲು ಸಹಾಯಕಾರಿಯಾಗಲಿದೆ ಎಂದಿದ್ದಾರೆ. * ಇಲ್ಲಿಯವರೆಗೆ ಕೇಂದ್ರ ಸರ್ಕಾರದ ಯಾವುದೇ ನಿರ್ಬಂಧವಿಲ್ಲದೆ ಕೂದಲನ್ನು ರಫ್ತು ಮಾಡಲಾಗುತ್ತಿತ್ತು. ಆದರೆ ಇದೀಗ ಕೂದಲನ್ನು ರಫ್ತು ಮಾಡಬೇಕಾದರೆ ರಫ್ತುದಾರರು ವಾಣಿಜ್ಯ ಸಚಿವಾಲಯದ ವಿದೇಶಿ ವ್ಯಾಪಾರದ ಮಹಾನಿರ್ದೇಶಕರಿಂದ ಅನುಮತಿಯನ್ನು ಪಡೆದು ರಫ್ತು ಮಾಡಬೇಕಾಗುತ್ತದೆ ಎಂದು ಸರ್ಕಾರವು ತಿಳಿಸಿದೆ. * ಇದೀಗ ಕೇಂದ್ರ ಸರ್ಕಾರವು ಮಾನವನ ಕೂದಲಿನ ರಫ್ತು ನೀತಿಯನ್ನು ತಕ್ಷಣದಿಂದಲೇ ಜಾರಿಗೆ ತರಲಾಗುವದು ಎಂದು ವಾಣಿಜ್ಯ ಸಚಿವಾಲಯದ ವಿದೇಶಿ ವ್ಯಾಪಾರದ ಮಹಾನಿರ್ದೇಶಕರಾಗಿರುವ ಸಂತೋಷ್ ಕುಮಾರ್ ಸಾರಂಗಿ ಅವರು ಹೇಳಿಕೆ ನೀಡಿದ್ದಾರೆ. * ಪ್ರಸ್ತುತ ಭಾರತದ ನೆರೆಯೆ ದೇಶಗಳಾದ ಚೀನಾ ಹಾಗೂ ಮ್ಯಾನ್ಮಾರ್‌ಗೆ ಕೂದಲು ಕಳ್ಳಸಾಗಣೆಯಾಗುತ್ತಿದೆ. ಅಷ್ಟೇ ಅಲ್ಲದೇ ಸ್ಥಳೀಯ ಕೈಗಾರಿಕೆಗಳು ಮತ್ತು ರಫ್ತಿಗೆ ತೊಂದರೆಯಾಗುತಿತ್ತು. ಸರ್ಕಾರದ ಈ ಕ್ರಮದಿಂದ ಅದು ಸುಧಾರಿಸಲಿದೆ ಎಂದಿದ್ದಾರೆ. ಹಾಗೂ ಈ ಕ್ರಮದ ನಿರ್ಬಂಧದಿಂದ ನಿಜವಾದ ರಫ್ತುದಾರರು ಮಾತ್ರ ಉತ್ಪನ್ನವನ್ನು ರಫ್ತು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. * ಭಾರತದಲ್ಲಿನ ಕೂದಲು ಉದ್ಯಮದ ಪ್ರಮುಖ ಕೇಂದ್ರಗಳು: ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಪಶ್ಚಿಮ ಬಂಗಾಳ ರಾಜ್ಯಗಳು. ಈ ಪ್ರದೇಶಗಳಲ್ಲಿ ಕೂದಲನ್ನು ಮುಖ್ಯವಾಗಿ ದೇವಾಲಯಗಳು ಹಾಗೂ ಮನೆಗಳಿಂದ ಸಂಗ್ರಹಿಸಲಾಗುತ್ತದೆ. ಹಾಗೂ ಇಲ್ಲಿ ಸಂಗ್ರಹವಾಗುವ ಕೂದಲನ್ನು ಭಾರತದ ಜಾಗತಿಕ ಸೌಂದರ್ಯವರ್ಧಕ ಮಾರುಕಟ್ಟೆಗೆ ಪೂರೈಸಲಾಗುತ್ತದೆ. ಪ್ರಸ್ತುತ ಭಾರತದಲ್ಲಿ ರೆಮಿ ಹಾಗೂ ನಾನ್-ರೆಮಿ ಎಂಬ ಎರಡು ಬಗೆಯ ಕೂದಲನ್ನು ಸಂಗ್ರಹ ಮಾಡಲಾಗುತ್ತದೆ, * 'ರೆಮಿ' ಕೂದಲನ್ನು ಹೆಚ್ಚಾಗಿ ಧಾರ್ಮಿಕ ಸ್ಥಳಗಳಲ್ಲಿ ಯಾತ್ರಿಕರು ತಮ್ಮ ಕೂದಲನ್ನು ಅರ್ಪಿಸುತ್ತಾರೆ ಅಲ್ಲಿಂದ ಆ ಕೂದಲನ್ನು ಪಡೆಯಲಾಗುತ್ತದೆ. ಆ ಕೂದಲು ಉತ್ತಮ ದರ್ಜೆಯ ಕೂಡಲಾಗಿರುತ್ತದೆ. ಈ ಕೂದಲನ್ನು ಮುಖ್ಯವಾಗಿ ಹೇರ್‌ಪೀಸ್ ಹಾಗೂ ವಿಗ್‌ಗಳನ್ನು ತಯಾರಿಸಲು ಬಳಕೆ ಮಾಡಲಾಗುತ್ತದೆ. * * ನಾನ್‌ ರೆಮಿ ಕೂದಲು : ಇದನ್ನು ಸಾಮಾನ್ಯವಾಗಿ ಹಳ್ಳಿಗಳು ಮತ್ತು ನಗರಗಳಲ್ಲಿನ ಸಣ್ಣ ಗುಂಪುಗಳಿಂದ, ತ್ಯಾಜ್ಯದಿಂದ ಸಂಗ್ರಹಿಸಲಾಗುವ ಕೂದಲನ್ನು ನಾನ್‌ ರೆಮಿ ಕೂದಲು ಎನ್ನುತ್ತಾರೆ. * ಪ್ರಸ್ತುತ ಆರ್ಥಿಕ ವರ್ಷದಲ್ಲಿ ಏಪ್ರಿಲ್-ನವೆಂಬರ್ ಅವಧಿಯಲ್ಲಿ ಸುಮಾರು 10,78 ಕೋಟಿ ರೂ. ಮೌಲ್ಯದ ಕೂದಲಿನ ವಹಿವಾಟನ್ನು ನಡೆದಿದೆ ಎಂದು ತಿಳಿದು ಬಂದಿದೆ. * ಕೂದಲು ಉದ್ಯಮದಲ್ಲಿ ಭಾರತದ ಪ್ರಮುಖ ಸ್ಪರ್ಧಿಯ ದೇಶಗಳು : ಚೀನಾ, ಕಾಂಬೋಡಿಯಾ, ವಿಯೆಟ್ನಾಂ ಹಾಗೂ ಮ್ಯಾನ್ಮಾರ್ ದೇಶಗಳು.