Job Description: * ಪ್ರಸ್ತುತ ಭಾರತದ ಗ್ರ್ಯಾಂಡ್‌ ಮಾಸ್ಟರ್‌ ಎಂ.ಆರ್‌. ಲಲಿತ್ ಬಾಬು ಅವರು ಜೆಕ್‌ ಗಣರಾಜ್ಯ ಮರಿನಾಸ್ಕ್ ಲಾಜ್ನೆ ನಲ್ಲಿ ನಡೆದ ಮರಿಯನ್‌ಬಾದ್‌ ಓಪನ್ ಚೆಸ್‌ ಟೂರ್ನಿಯಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. * ಈ ಟೂರ್ನಿಯಲ್ಲಿ ಎಂ.ಆರ್‌. ಲಲಿತ್ ಬಾಬು ಅವರು, 6.5 ಪಾಯಿಂಟ್ಸ್ ಗಳಿಸಿಕೊಂಡು ಪ್ರಶಸ್ತಿಯನ್ನು ಜಯಿಸಿದ್ದಾರೆ. ಹಾಗೂ ಐಲ್ಯಾಂಡ್‌ ಗ್ರ್ಯಾಂಡ್‌ಮಾಸ್ಟರ್‌ ಹ್ಯಾನೆಸ್‌ ಸ್ಟೆಫಾನ್ಸನ್‌ ಅವರು '6' ಪಾಯಿಂಟ್ಸ್ ಕಲೆಹಾಕಿ ರನ್ನರ್ ಅಪ್ ಸ್ಥಾನ ಪಡೆದಕೊಂಡಿದ್ದಾರೆ. * ಲಲಿತ್ ಅವರು ಒಟ್ಟಾರೆ '9' ಪಂದ್ಯಗಳಲ್ಲಿ ಆಡಿದ್ದಾರೆ, ಅವುಗಳಲ್ಲಿ '4' ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಇತರೆ '5' ಪಂದ್ಯಗಳನ್ನು ಡ್ರಾ ಮಾಡಿಕೊಂಡು ಅಗ್ರಸ್ಥಾನ ಪಡೆದರು. * ಎಂ.ಆರ್‌. ಲಲಿತ್ ಬಾಬು ಅವರಿಗೆ ಸತತವಾಗಿ ಲಭಿಸಿರುವ 3ನೇ ಪ್ರಶಸ್ತಿ ಇದಾಗಿದೆ. ಈ ಹಿಂದೆ ಲಲಿತ್ ಬಾಬು ಅವರು ಥಾಯ್ಲೆಂಡ್‌ ಹಾಗೂ ಇಟಲಿ ಟೂರ್ನಿಗಳಲ್ಲಿ ಪ್ರಶಸ್ತಿಗಳನ್ನು ಜಯಿಸಿಕೊಂಡಿದ್ದರು. * ಮುಸುನೂರಿ ರೋಹಿತ್ ಲಲಿತ್ ಬಾಬು: ಇವರೊಬ್ಬ ಭಾರತೀಯ ಚೆಸ್ ಆಟಗಾರ. ಈ ಹಿಂದೆ 2012 ರಲ್ಲಿ ಇವರು FIDE ನಿಂದ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. * ಲಲಿತ್ ಬಾಬು ಅವರು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ವಿಜಯವಾಡದಲ್ಲಿ ಜನಿಸಿದ್ದಾರೆ. ಇವರು 2008 ರಲ್ಲಿ ಏಷ್ಯನ್ ಜೂನಿಯರ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕವನ್ನು ಜಯಿಸಿಕೊಂಡಿದ್ದರು, ಈ ಕಾರಣದಿಂದಾಗಿ ಇವರಿಗೆ ಅಂತರರಾಷ್ಟ್ರೀಯ ಮಾಸ್ಟರ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಮತ್ತೇ 2008 ರ ಅಕ್ಟೋಬರ್'ನಲ್ಲಿ ಬಲಗುರ್, ಹಾಗೂ 2010 ರಲ್ಲಿ ಚೆನ್ನೈ ಓಪನ್ ಮತ್ತು 2012 ರಲ್ಲಿ ಹೇಸ್ಟಿಂಗ್ಸ್ ಮಾಸ್ಟರ್ಸ್‌ನಲ್ಲಿ ಮಾನದಂಡಗಳನ್ನು ಗಳಿಸಿದ ನಂತರ ಗ್ರ್ಯಾಂಡ್‌ಮಾಸ್ಟರ್ ಪ್ರಶಸ್ತಿಯನ್ನು ಜಯಿಸಿದ್ದರು. * ಲಲಿತ್ ಬಾಬು ಅವರು 2009 ರಲ್ಲಿ ನೆದರ್ಲ್ಯಾಂಡ್'ನಲ್ಲಿ ನಡೆದ ಲೈಡೆನ್ ಚೆಸ್ ಪಂದ್ಯಾವಳಿಯನ್ನು ಗೆದ್ದರು. ಮರು ವರ್ಷವೇ ಲಲಿತ್ ಬಾಬು ಅವರು ನವದೆಹಲಿಯಲ್ಲಿ ಜರುಗಿದ ಪಾರ್ಶ್ವನಾಥ್ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕವನ್ನು ಜಯಿಸಿಕೊಂಡರು. ಇವರು 2013 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಇಂಟರ್ನ್ಯಾಷನಲ್ ಗ್ರ್ಯಾಂಡ್‌ಮಾಸ್ಟರ್ ಪಂದ್ಯಾವಳಿಯನ್ನು ಲು ಶಾಂಗ್ಲೆಯ್ ವಿರುದ್ಧ ಟೈಬ್ರೇಕ್‌ನಲ್ಲಿ ಜಯ ಗಳಿಸಿದರು. * ಲಲಿತ ಬಾಬು ಅವರು 2014 ರಲ್ಲಿ ನಾರ್ವೆಯ ಟ್ರೋಮ್ಸೋದಲ್ಲಿ ಜರುಗಿದ 41 ನೇ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತೀಯ ರಾಷ್ಟ್ರೀಯ ತಂಡದಲ್ಲಿ ತಂಡದಲ್ಲಿ ಕಂಚಿನ ಪದಕವನ್ನು ಜಯಿಸಿಕೊಡಿದ್ದರು. ಮತ್ತೇ 2017 ರಲ್ಲಿ ಪಾಟ್ನಾದಲ್ಲಿ ನಡೆದಿರುವ ಭಾರತದ 55 ನೇ ರಾಷ್ಟ್ರೀಯ ಪ್ರೀಮಿಯರ್ ಚೆಸ್ ಚಾಂಪಿಯನ್‌ಶಿಪ್'ನಲ್ಲಿಯೂ ಕೂಡ ಜಯಿಸಿದ್ದಾರೆ. ಹಾಗೂ ರಾಷ್ಟ್ರೀಯ ಕ್ಷಿಪ್ರ 2018 ಚಾಂಪಿಯನ್‌ಶಿಪ್'ನ್ನು ಗೆದ್ದುಕೊಂಡರು ಮತ್ತು ರಾಷ್ಟ್ರೀಯ ಬ್ಲಿಟ್ಜ್‌ನಲ್ಲಿ 2 ನೇ ಸ್ಥಾನ ಪಡೆದುಕೊಂಡರು. * ಲಲಿತ್ ಬಾಬು ಅವರು ಈ ಹಿಂದೆ 2018 ರ ಅಕ್ಟೋಬರ್ 14 ರಿಂದ 22 ವರೆಗೆ ಚೀನಾದ ಹೆಬೆಯ ಕ್ಸಿಂಗ್ಟಾಯ್ ಪಟ್ಟಣದಲ್ಲಿ ನಡೆದಿರುವ SCO ಓಪನ್ ನನ್ನು ಕೂಡ ಜಯಿಸಿದ್ದರು.