Job Description: * ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮ ದಿನಾಚರಣೆಯ ಹಿನ್ನಲೆಯಿಂದಾಗಿ ನವದೆಹಲಿಯ ಇಂಡಿಯಾ ಗೇಟ್ ನಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ರವರ ಹೊಲೊಗ್ರಾಮ್ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ. * ಈ ಇಂಡಿಯಾ ಗೇಟ್ ಸ್ಥಳದಲ್ಲಿ ಗ್ರಾನೈಟ್ ಪ್ರತಿಮೆಯನ್ನು ಸ್ಥಾಪಿಸುವವರೆಗೆ ಹೊಲೊಗ್ರಾಮ್ ಪ್ರತಿಮೆಯು ಇರಲಿದೆ ಎಂದು ತಿಳಿಸಿದ್ದಾರೆ. ಇಂಡಿಯಾ ಗೇಟ್ ನಲ್ಲಿರುವ ಈ ಹೊಲೊಗ್ರಾಮ್ ಪ್ರತಿಮೆಯು 30,000 ಲ್ಯೂಮೆನ್ಸ್ 4 ಸಾವಿರ ಪ್ರೊಜೆಕ್ಟರ್ʼನಿಂದ ಚಾಲಿತವಾಗಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಹೊಲೊಗ್ರಾಮ್ ಪ್ರತಿಮೆಯ ಗಾತ್ರವು 28 ಅಡಿ ಎತ್ತರ ಮತ್ತು 6 ಅಡಿ ಅಗಲವಿದೆ. * ಈ ಕಾರ್ಯಕ್ರಮದ ಸಂಧರಭದಲ್ಲಿ ಪ್ರಧಾನಿ ಮೋದಿ ಅವರು 2019, 2020, 2021 ಹಾಗೂ 2022 ರ ಸುಭಾಷ್ ಚಂದ್ರ ಬೋಸ್ ಆಪ್ತ ಪ್ರಬಂಧನ್ ಪುರಸ್ಕಾರವನ್ನು ನೀಡಿದರು. * ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನವನ್ನ ಅಳವಡಿಸಲು ದೇಶದಲ್ಲಿ ಪ್ರತಿ ವರ್ಷ ಜನವರಿ. 23 ರಂದು ಗಣರಾಜ್ಯೋತ್ಸವವನ್ನು ಆರಂಭಿಸಲಾಗುವದು ಎಂದು ಸರ್ಕಾರ ಘೋಷಣೆ ಮಾಡಿತ್ತು. ಇವರ ಈ ಜನ್ಮ ದಿನವನ್ನು ಪ್ರತಿ ವರ್ಷವು ಪರಾಕ್ರಮ್ ದಿವಸ್ ಎಂದು ಆಚರಣೆ ಮಾಡಲಾಗುತ್ತದೆ. * ನೇತಾಜಿ ಸುಭಾಸ್ ಚಂದ್ರ ಬೋಸ್ ಜಯಂತಿಯನ್ನು ಅಧಿಕೃತವಾಗಿ ಪರಾಕ್ರಮ್ ದಿವಸ್ (ಲಿಟ್. 'ಶೌರ್ಯ ದಿನ') ಎಂದು ಕರೆಯಲಾಗುತ್ತದೆ. ಈ ದಿನವನ್ನು ಪ್ರಮುಖವಾಗಿ ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಸ್ ಚಂದ್ರ ಅವರ ಜನ್ಮದಿನ ದಂದು ಭಾರತದಲ್ಲಿ ಆಚರಿಸಲಾಗುತ್ತದೆ. ಈ ದಿನವನ್ನು ಪ್ರತಿ ವರ್ಷವು ಜನವರಿ. 23 ರಂದು ಆಚರಿಸಲಾಗುತ್ತದೆ. * ನೇತಾಜಿ ಸುಭಾಸ್ ಚಂದ್ರ ಅವರು ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ಹಾಗೂ ಇವರು ಭಾರತೀಯ ರಾಷ್ಟ್ರೀಯ ಸೇನೆಯ (ಆಜಾದ್ ಹಿಂದ್ ಫೌಜ್) ಮುಖ್ಯಸ್ಥರಾಗಿದ್ದರು. ಹಾಗೂ ಆಜಾದ್ ಹಿಂದ್ ಸರ್ಕಾರದ ಸ್ಥಾಪಕ ಮುಖ್ಯಸ್ಥರಾಗಿದ್ದರು. * ಪ್ರಸ್ತುತ ನೇತಾಜಿ ಜಯಂತಿಯನ್ನು ರಂಗೂನ್‌ನಲ್ಲಿ ಆಚರಿಸಲಾಯಿತು. ಈ ದಿನವನ್ನು ಪಶ್ಚಿಮ ಬಂಗಾಳ, ಜಾರ್ಖಂಡ್, ತ್ರಿಪುರ ಹಾಗೂ ಅಸ್ಸಾಂ ರಾಜ್ಯಗಳಲ್ಲಿ ಅಧಿಕೃತ ರಜಾದಿನವಾಗಿ ಆಚರಿಸಲಾಗುತ್ತದೆ. * 2021 ರಲ್ಲಿ ನೇತಾಜಿ ಜಯಂತಿಯನ್ನು ಅವರ 124 ನೇ ಜನ್ಮದಿನದಂದು ಮೊದಲ ಬಾರಿಗೆ ಪರಾಕ್ರಮ್ ದಿವಸ್ ಎಂದು ಆಚರಣೆ ಮಾಡಲಾಗಿದೆ.