Job Description: * ಇತ್ತೀಚಿಗೆ ICC 2021 ನೇ ವರ್ಷದ ಟಿ 20 ಶ್ರೇಷ್ಠ ಆಟಗಾರರುನ್ನು ಆಯ್ಕೆಮಾಡಿದೆ. ಪ್ರಸ್ತುತ ಪಾಕಿಸ್ಥಾನದ ವಿಕೆಟ್‌ ಕೀಪರ್-ಬ್ಯಾಟ್ಸ್ ಮನ್ ಮೊಹಮ್ಮದ್ ರಿಜ್ವಾನ್ ಅವರನ್ನು 2021 ರ ಟಿ20 ವರ್ಷದ ಶ್ರೇಷ್ಠ ಆಟಗಾರ, ಹಾಗೂ ಇಂಗ್ಲೆಂಡ್‌ನ ಟಮ್ಮಿ ಬ್ಯೂಮಾಂಟ್ ಅವರನ್ನು ಟಿ20 ವರ್ಷದ ಶ್ರೇಷ್ಠ ಆಟಗಾರ್ತಿ ಎಂದು ICC ಆಯ್ಕೆಮಾಡಿದೆ. * ಪಾಕಿಸ್ತಾನದ ರಿಜ್ವಾನ್ ಅವರು ಪುರುಷರ ಟಿ20 ಯಲ್ಲಿ 2021 ರಲ್ಲಿ ಉತ್ತಮ ಆಟವನ್ನು ಪ್ರದರ್ಶಿಸಿದರು. ಇವರು ಕೇವಲ 29 ಪಂದ್ಯಗಳಲ್ಲಿ 1,326 ರನ್‌ಗಳನ್ನು ಕಲೆಹಾಕಿ, 73.66 ಸರಾಸರಿಯಲ್ಲಿ ಹಾಗೂ 134.89 ಸ್ಟ್ರೈಕ್ ರೇಟ್‌ನಲ್ಲಿ ಆಟವಾಡಿದ್ದಾರೆ. * ಬ್ಯೂಮಾಂಟ್ ಮಹಿಳಾ ಟಿ 20 ಗಳಲ್ಲಿ 3ನೇ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಹಾಗೂ ಟಿ 20 ಅಂತರ್ ರಾಷ್ಟ್ರೀಯ ಪಂದ್ಯಗಳಲ್ಲಿ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿದ್ದಾರೆ. ಇವರು ನ್ಯೂಜಿಲೆಂಡ್ ವಿರುದ್ಧ ಕಡಿಮೆ ಸ್ಕೋರಿಂಗ್ ರಬ್ಬರ್‌ನಲ್ಲಿ, ಅಗ್ರ ಸ್ಕೋರರ್ ಆಗಿದ್ದರು ಹಾಗೂ '3' ಪಂದ್ಯಗಳಲ್ಲಿ 102 ರನ್ ಗಳನ್ನೂ ಕಲೆಹಾಕಿದ್ದಕ್ಕಾಗಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. * * ಮೊಹಮ್ಮದ್ ರಿಜ್ವಾನ್ : ಇವರೊಬ್ಬ ಪಾಕಿಸ್ತಾನಿ ಅಂತರಾಷ್ಟ್ರೀಯ ಕ್ರಿಕೆಟಿಗರಾಗಿದ್ದಾರೆ, ಇವರು 2015 ರಿಂದ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ದೇಶವನ್ನು ಪ್ರತಿನಿಧಿಸಿದ್ದಾರೆ. ಇವರು ಬಲಗೈ ಬ್ಯಾಟ್ಸ್‌ಮನ್ ಮತ್ತು ವಿಕೆಟ್-ಕೀಪರ್ ಕೂಡ ಆಗಿದ್ದಾರೆ. ಇವರು ಟೆಸ್ಟ್ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಉಪನಾಯಕರಾಗಿದ್ದಾರೆ. ಹಾಗೂ 2021 ನೇ ವರ್ಷದ ವಿಸ್ಡನ್ ಕ್ರಿಕೆಟಿಗರಲ್ಲಿ ಇವರು ಒಬ್ಬರಾಗಿದ್ದರು. ಈ ಹಿಂದೆ ಇವರು 2016 ರಿಂದ 2017 ರವರೆಗೆ ಲಾಹೋರ್ ಖಲಂದರ್ಸ್‌ಗಾಗಿ, 2018 ರಿಂದ 2020 ರವರೆಗೆ ಕರಾಚಿ ಕಿಂಗ್ಸ್‌ಗಾಗಿ ಆಟವಾಡಿದ್ದರು. ಪ್ರಸ್ತುತ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಮುಲ್ತಾನ್ ಸುಲ್ತಾನ್ಸ್‌ನ ನಾಯಕರಾಗಿದ್ದಾರೆ. * * ಟ್ಯಾಮ್ಸಿನ್ ಟಿಲ್ಲೆ ಬ್ಯೂಮಾಂಟ್ : ಇವರೊಬ್ಬ ಇಂಗ್ಲಿಷ್ ಕ್ರಿಕೆಟಿಗ. ಅವರು ಕೆಂಟ್ ಮತ್ತು ಇಂಗ್ಲೆಂಡ್‌ಗಾಗಿ ಬ್ಯಾಟಿಂಗ್ ವಿಭಾಗದಲ್ಲಿ ಆಟವಾಡಿದ್ದಾರೆ. ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಎರಡು ತಂಡಗಳಲ್ಲಿ ಇತರ ದೇಶೀಯ ತಂಡಗಳಿಗಾಗಿ ಆಟವಾಡಿದ್ದಾರೆ.