Job Description: * ಇತ್ತೀಚಿಗೆ ಫುಟ್‌ಬಾಲ್ ದಿಗ್ಗಜ ಸುಭಾಸ್ ಭೌಮಿಕ್ ಅವರು ನಿಧನರಾಗಿದ್ದಾರೆ. ಇವರು ಏಷ್ಯನ್ ಗೇಮ್ಸ್'ನಲ್ಲಿ ಕಂಚಿನ ಪದಕ ಜಯಿಸಿರುವ ಭಾರತ ಫುಟ್‌ಬಾಲ್ ತಂಡದ ಆಟಗಾರರಾಗಿದ್ದರು. * ಫುಟ್‌ಬಾಲ್ ದಿಗ್ಗಜ ಸುಭಾಸ್ ಭೌಮಿಕ್ ಅವರು ಅನಾರೋಗ್ಯದ ಕಾರಣದಿಂದಾಗಿ ನಿಧನರಾಗಿದ್ದಾರೆ. * ಈ ಹಿಂದೆ 1970 ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಫುಟ್‌ಬಾಲ್ ತಂಡದಲ್ಲಿ ಆಟವಾಡಿದ್ದರು. * ಭಾರತದ ಫುಟ್ಬಾಲ್ ತಂಡದಲ್ಲಿ ಇವರು 24 ಪಂದ್ಯಗಳಲ್ಲಿ ಆಡಿದ್ದಾರೆ. 9 ಗೋಲುಗಳನ್ನು ಗಳಿಸಿದ್ದಾರೆ. ಹಾಗೂ ಮೆರ್ಡೆಕಾ ಕಪ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. * ಸುಭಾಷ್ ಭೌಮಿಕ್: ಈ ಹಿಂದೆ 1950 ರ ಅಕ್ಟೋಬರ್. 02 ರಂದು ಜನಿಸಿದ್ದರು. ಇತ್ತೀಚಿಗೆ 2022 ರ ಜನವರಿ. 22 ರಂದು ಅನಾರೋಗ್ಯದ ಕಾರಣದಿಂದ ನಿಧನರಾಗಿದ್ದಾರೆ. ಇವರೊಬ್ಬ ಭಾರತೀಯ ಫುಟ್‌ಬಾಲ್ ಆಟಗಾರ ಮತ್ತು ಮ್ಯಾನೇಜರ್ ಆಗಿದ್ದರು. ಇವರು ಕೋಲ್ಕತ್ತಾ ಫುಟ್‌ಬಾಲ್, ಈಸ್ಟ್ ಬೆಂಗಾಲ್ ಹಾಗೂ ಮೋಹನ್ ಬಗಾನ್‌ನ 'ಬಿಗ್ ಟು' ವನ್ನು ಪ್ರತಿನಿಧಿಸಿದ್ದರು. ಹಾಗೂ ಇವರು ಭಾರತವನ್ನು 1970 ಮತ್ತು 1985 ರ ನಡುವೆ ವಿವಿಧ ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಪ್ರತಿನಿಧಿಸಿದ್ದರು. * ಸುಭಾಸ್ ಭೌಮಿಕ್ ಅವರನ್ನು ಪಶ್ಚಿಮ ಬಂಗಾಳದ ಫುಟ್‌ಬಾಲ್ ಅಖಾಡದಲ್ಲಿ 'ಬೊಂಬೋಲ್' ಎಂದು ಜನಪ್ರಿಯವಾಗಿ ಕರೆಯುತ್ತಿದ್ದರು. * ಸುಭಾಸ್ ಭೌಮಿಕ್ ಅವರು ಈಸ್ಟ್ ಬೆಂಗಾಲ್ F.C ಗೆ ಸೇರಿದವರಾಗಿದ್ದಾರೆ. ಮತ್ತೇ 1970 ರಲ್ಲಿ ಮೋಹನ್ ಬಗಾನ್ ಸೇರ್ಪಡೆಯಾದರು. ಮತ್ತೇ 1973 ರ ಕೊನೆಯಲ್ಲಿ ಪೂರ್ವ ಬಂಗಾಳಕ್ಕೆ ಹಿಂದಿರುಗಿ ಸುಮಾರು 1976 ರವರೆಗೆ ಪೂರ್ವ ಬಂಗಾಳವನ್ನು ಪ್ರತಿನಿಧಿಸಿದ್ದರು. ನಂತರ ದಿನಗಳಲ್ಲಿ ಮೋಹನ್ ಬಗಾನ್‌'ಗೆ ಮರಳಿ ಸೇರ್ಪಡೆಯಾದರು. * ಇವರು ಈಸ್ಟ್ ಬೆಂಗಾಲ್ ಎಫ್‌ಸಿ(FC)ಯ ಪ್ರಮುಖರಲ್ಲಿ ಒಬ್ಬರಾಗಿದ್ದರು. ಈ ಹಿಂದೆ 1975 ರಲ್ಲಿ ಕಲ್ಕತ್ತಾದಲ್ಲಿ ನಡೆದ IFA ಶೀಲ್ಡ್ ಫೈನಲ್‌ನಲ್ಲಿ ಮೋಹನ್ ಬಗಾನ್ A.C. ತಂಡವನ್ನು 5-0 ಗೋಲುಗಳಿಂದ ಸೋಲಿಸಿದ್ದರು. ಹಾಗೇ 1969 ರಿಂದ 1977 ರ ನಡುವೆ ಈಸ್ಟ್ ಬೆಂಗಾಲ್‌ಗಾಗಿ 83 ಹಾಗೂ ಮೋಹನ್ ಬಗಾನ್‌ಗಾಗಿ 82 ಗೋಲುಗಳನ್ನು ಬಾರಿಸಿದ್ದರು. ನಂತರ ಇವರು 1979 ರಲ್ಲಿ ನಿವೃತ್ತರಾದರು.