Job Description: * ಪ್ರಸ್ತುತ 2022 ರ ಜನವರಿ. 26 ಗಣರಾಜ್ಯೋತ್ಸವದಂದು ನವದೆಹಲಿಯಲ್ಲಿ ಜರುಗಲಿರುವ ಪಥಸಂಚಲನದಲ್ಲಿ ಗುಜರಾತ್‌ ರಾಜ್ಯದ ಬುಡಕಟ್ಟು ಜನಾಂಗದ ಸ್ವಾತಂತ್ರ್ಯಕ್ಕಾಗಿ ಪಾಲ್‌ ಹಾಗೂ ದಧವಾವ್‌ ಹಳ್ಳಿಗರ ಹೋರಾಟದ ಕಥೆ ಸಾರುವ ಸ್ತಬ್ಧಚಿತ್ರ ಪ್ರದರ್ಶನವಾಗಲಿದೆ ಎಂದು ಗುಜರಾತ್‌ ಸರ್ಕಾರವು ತಿಳಿಸಿದೆ. * ಪ್ರಸ್ತುತ ಈ ಬಾರಿಯ ಗಣರಾಜ್ಯೋತ್ಸವದಂದು ಪ್ರದರ್ಶನವಾಗುವ ಗುಜರಾತ್ ರಾಜ್ಯದ ಸ್ತಬ್ಧಚಿತ್ರವು ತನ್ನ ರಾಜ್ಯದಲ್ಲಿನ ಬುಡಕಟ್ಟು ಸಮುದಾಯಕ್ಕೆ ಸೇರಿರುವ ಸರಿ ಸುಮಾರು 1,200 ಜನರನ್ನು ಬ್ರಿಟಿಷರು ಹತ್ಯೆ ಮಾಡಿರುವ ಬ್ಧಚಿತ್ರ ಇದಾಗಿರಲಿದೆ ಎಂದು ತಿಳಿಸಿದ್ದಾರೆ. ಈ ಸ್ತಬ್ಧಚಿತ್ರವು ಜಲಿಯಾನ್‌ ವಾಲಾಬಾಗ್‌ ಹತ್ಯಾಕಾಂಡಕ್ಕಿಂತ ಭೀಕರವಾಗಿದೆ. ಇಲ್ಲಿಯವರೆಗೆ ಕೇಳಿರದ ಬುಡಕಟ್ಟು ಜನರ ಶೌರ್ಯ ಹಾಗೂ ಅವರ ಬಲಿದಾನದ ಕಥೆಯನ್ನು ಈ ಸ್ತಬ್ಧಚಿತ್ರ ತಿಳಿಸಲಿದೆ ಎಂದು ಗುಜರಾತ್‌ ಸರ್ಕಾರ ಹೇಳಿಕೆ ನೀಡಿದೆ. * ಸರಿ ಸುಮಾರು 100 ವರ್ಷಗಳ ಹಿಂದೆ ಉತ್ತರ ಗುಜರಾತ್‌'ನ ಸಬರ್‌ಕಾಂತ ಜಿಲ್ಲೆಯ ಪಾಲ್‌ ಹಾಗೂ ದಧವಾವ್‌ ಹಳ್ಳಿಗಳಲ್ಲಿ ನಡೆದಿರುವ ಘಟನೆಯಾಗಿದೆ ಎನ್ನಲಾಗಿದೆ. ಪ್ರಸ್ತುತ ಈ ಬಾರಿಯ ಪಥಸಂಚಲನದಲ್ಲಿ "ಗುಜರಾತ್‌ನ ಬುಡಕಟ್ಟು ಕ್ರಾಂತಿಕಾರಿಗಳು" ಎಂಬ ಸ್ತಬ್ಧಚಿತ್ರವು ಪ್ರದರ್ಶನವಾಗಲಿದೆ ಎಂದಿದ್ದಾರೆ. * ಪ್ರಸ್ತುತ "ಕೊಲಿಯಾರಿ ಗಾಂಧಿ" ಎಂದೇ ಪರಿಚಿತವಾಗಿದ್ದ ಮೋತಿಲಾಲ್‌ ತೇಜವತ್‌ ಅವರ ನೇತೃತ್ವದಲ್ಲಿ ಬುಡಕಟ್ಟು ಜನರು ಹೋಳಿ ಹಬ್ಬಕ್ಕೂ ಮೊದಲು ಅಮಲ್ಕಿ ಏಕಾದಶಿ ದಿನ ಅಂದರೆ 1922 ರ ಮಾರ್ಚ್‌. 7 ರಂದು ಸ್ವಾತಂತ್ರ್ಯಕ್ಕಾಗಿ ಆಗ್ರಹಿಸಿ ಆ ಹಳ್ಳಿಗಳಲ್ಲಿ ಸೇರಿದ್ದರು. ಆ ಸಂಧರ್ಭದಲ್ಲಿ ಬ್ರಿಟಿಷರ ಮೇವಾಡ್‌ ಭಿಲ್‌ ಕಾರ್ಪ್ಸ್‌ನ ಸೈನಿಕರು ಆ ಸ್ಥಳಗಳಿಗೆ ಆಗಮಿಸಿ, ಮೇಜರ್‌ ಎಚ್‌ ಜಿ ಸ್ಯಾಟರ್ನ್‌ ಅವರ ಆದೇಶ ಮೇರೆಗೆ ಅಲ್ಲಿರುವಂತಹ ಬುಡಕಟ್ಟು ಜನರ ಮೇಲೆ ಗುಂಡಿನ ದಾಳಿಯನ್ನು ಮಾಡಿದರು. ಆ ದುರ್ಘಟನೆಯಲ್ಲಿ ಸರಿ ಸುಮಾರು 1,200 ರಷ್ಟು ಬುಡಕಟ್ಟು ಜನರನ್ನು ಬ್ರಿಟಿಷ ಸೈನಿಕರು ಹತ್ಯೆ ಮಾಡಿದ್ದರು ಎಂದು ಗುಜರಾತ್‌ ಸರ್ಕಾರವು ಈ ವರದಿ ಮಾಡಿದೆ.