Job Description: * ಪ್ರಸ್ತುತ ಹರಿಯಾಣ ಹಾಗೂ ಹಿಮಾಚಲ ಪ್ರದೇಶ ಸರ್ಕಾರಗಳು ಯಮುನಾನಗರ ಜಿಲ್ಲೆಯ ಆದಿ ಬದ್ರಿಯಲ್ಲಿ ಅಣೆಕಟ್ಟು ನಿರ್ಮಿಸುವ ಒಪ್ಪಂದಕ್ಕೆ 2022 ರ ಜನವರಿ. 21 ರಂದು ಸಹಿ ಹಾಕಿವೆ. * ಈ ಆದಿ ಬದರಿ ಅಣೆಕಟ್ಟು ಪೌರಾಣಿಕ ಸರಸ್ವತಿ ನದಿಯನ್ನು ಪುನರುಜ್ಜೀವನಗೊಳಿಸುತ್ತದೆ. ಇದೀಗ ಈ ನದಿಯು ಹಿಮಾಚಲ ಪ್ರದೇಶದ ಗಡಿಯ ಸಮೀಪ ಹರಿಯಾಣದಲ್ಲಿದೆ. ಈ ಪ್ರದೇಶವನ್ನು ನದಿಯ ಮೂಲ ಸ್ಥಳವೆಂದು ಗುರುತಿಸಲಾಗಿದೆ. * ಇದೀಗ ಈ ಸರಸ್ವತಿ ನದಿಯ ಪುನರುಜ್ಜೀವನಗೊಳ್ಳುವದರ ಜೊತೆಗೆ, ಈ ಕ್ಷೇತ್ರವನ್ನು ಯಾತ್ರಾ ಸ್ಥಳವಾಗಿ ಅಭಿವೃದ್ಧಿಪಡಿಸಲಾಗುತ್ತದೆ ಎಂದಿದ್ದಾರೆ. ಪ್ರಸ್ತುತ ಹಿಮಾಚಲ ಪ್ರದೇಶದಲ್ಲಿ 31.66 ಹೆಕ್ಟೇರ್ ಪ್ರದೇಶದಲ್ಲಿ ಈ ಅಣೆಕಟ್ಟು ನಿರ್ಮಾಣವಾಗಲಿದೆ. ಈ ಯೋಜನೆಗಾಗಿ ಸುಮಾರು 215.33 ಕೋಟಿ ರೂ. ವೆಚ್ಚ ತಗುಲಲಿದೆ ಎಂದಿದ್ದಾರೆ. * ಈ ಅಣೆಕಟ್ಟು 224.58-ಹೆಕ್ಟೇರ್‌ಗಳಷ್ಟು ನೀರಿನ ಸಾಮರ್ಥ್ಯವನ್ನು ಹೊಂದಿರುತ್ತದೆ. ಅದರಲ್ಲಿ ಹಿಮಾಚಲ ಪ್ರದೇಶ ಮತ್ತು ಹರಿಯಾಣ ರಾಜ್ಯಗಳು 61.88 ಹೆಕ್ಟೇರ್‌ಗಳಷ್ಟು ನೀರನ್ನು ಬಳಸಿಕೊಳ್ಳಲಿವೆ, ಇನ್ನುಳಿದ ನೀರು ಸರಸ್ವತಿ ನದಿಯನ್ನು ಸೇರಲಿದೆ. * ಈ ಆಣೆಕಟ್ಟು ನಿರ್ಮಿಸುವದರಿಂದ ಸರಸ್ವತಿ ನದಿಯನ್ನು ಪುನರುಜ್ಜೀವನಗೊಳಿಸಿದಂತಾಗುತ್ತದೆ, ಹಾಗೂ ಅಂತರ್ಜಲ ಮಟ್ಟವನ್ನು ವೃದಿಸುವ ಉದ್ದೇಶದಿಂದ ಈ ಆದಿ ಬದರಿ ಅಣೆಕಟ್ಟು ನಿರ್ಮಿಸಲಾಗುತ್ತದೆ ಎಂದಿದ್ದಾರೆ. ಹಾಗೂ ಅಲ್ಲಿರುವ ಸುತ್ತಮುತ್ತಲಿನ ಪ್ರದೇಶವನ್ನು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಎಂದಿದ್ದಾರೆ. * ಈ ಹಿಂದೆ 1986-87 ರಲ್ಲಿ ಸರಸ್ವತಿ ನದಿಯ ಪುನರುಜ್ಜೀವನದ ಸಂಶೋಧನೆಯು ಆರಂಭವಾಗಿದೆ. ನಂತರ ಇದು ಯಮುನಾನಗರದ ಆದಿ ಬದರಿಯಿಂದ ಆರಂಭವಾದ ಸಂಶೋಧನೆಯು ಕಚ್‌ವರೆಗೆ ತಲುಪಿತು. ಈ ಸಂಶೋಧನೆಯನ್ನು ಕುರುಕ್ಷೇತ್ರ ವಿಶ್ವವಿದ್ಯಾಲಯ ಹಾಗೂ ಹರಿಯಾಣ ಸರಸ್ವತಿ ಪರಂಪರೆ ಅಭಿವೃದ್ಧಿ ಮಂಡಳಿ ಇದರ ಸಂಶೋಧನೆ ನಡೆಸುತ್ತಿವೆ. * ಪ್ರಸ್ತುತ ಈ ಸರಸ್ವತಿ ನದಿಯು ಋಗ್ವೇದದಲ್ಲಿ ಹಾಗೂ ನಂತರದ ವೈದಿಕ ಮತ್ತು ವೇದೋತ್ತರ ಗ್ರಂಥಗಳಲ್ಲಿ ಉಲ್ಲೇಖವಾಗಿರುವ ಒಂದು ದೈವಿಕ ನದಿಯಾಗಿದೆ. ಈ ನದಿ ವಾಯುವ್ಯ ಭಾರತದಲ್ಲಿ ದೊಡ್ಡ ಮತ್ತು ಪವಿತ್ರ ನದಿ ಎಂದು ಗುರಿತಿಸಿಕೊಂಡಿದೆ. ಈ ನದಿಯು ಹಿಮಾಲಯದ ಕಪಾಲ್ ತಿರಿತ್‌ ನಲ್ಲಿ ಉದಯವಾಗಿದೆ, ಹಾಗೂ ಇದು ಮಾನಸಸರೋವರದ ಕಡೆಗೆ ಹರಿಯಿತಿತ್ತು ಹಾಗೂ ನಂತರ ಪಶ್ಚಿಮಕ್ಕೆ ತಿರುಗಿತು. ಪ್ರಸ್ತುತ ಈ ನದಿ ಹರಿಯಾಣ, ರಾಜಸ್ಥಾನ ಹಾಗೂ ಉತ್ತರ ಗುಜರಾತ್ ಮೂಲಕ ಹರಿಯುತ್ತಿದ್ದೆ. ಹಾಗೂ ಪಾಕಿಸ್ತಾನ ದೇಶದ ಮೂಲಕ ಹರಿದು ಅಂತಿಮವಾಗಿ ರಾನ್ ಆಫ್ ಕಚ್ ಮೂಲಕ ಪಶ್ಚಿಮ ಸಮುದ್ರವನ್ನು ಸೇರುತ್ತದೆ. ಈ ನದಿಯು ಸುಮಾರು 4,000 ಕಿಮೀ ಉದ್ದವಾಗಿದೆ.