Job Description: * ಇತ್ತೀಚಿಗಿನ ಸೈಯದ್ ಮೋದಿ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪಿ.ವಿ.ಸಿಂಧು ಅವರು ಯುವ ತಾರೆಯಾಗಿರುವ ಮಾಳವಿಕಾ ಬಾನ್ಸೋದ್ ಅವರ ಸೋಲಿಸುವ ಮೂಲಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಫೈನಲ್‌ ಪಂದ್ಯದ ಹಣಾಹಣಿಯಲ್ಲಿ ಸಿಂಧು ಅವರು ಎದುರಾಳಿಯನ್ನು 21-13, 21-16 ರಲ್ಲಿ ಸೋಲಿಸಿದ್ದಾರೆ. * ಮಾಜಿ ವಿಶ್ವ ಚಾಂಪಿಯನ್‌ ಸಿಂಧು ಅವರು ಈ ಹಿಂದೆ ಒಲಿಂಪಿಕ್ಸ್‌ನಲ್ಲಿ ಎರಡು ಪದಕಗಳನ್ನು ಜಯಿಸಿದ್ದಾರೆ. ಈ ಹಿಂದೆ 2017 ರಲ್ಲಿ ನ ಬಿಡಬ್ಲ್ಯುಎಫ್‌ ವಿಶ್ವ ಟೂರ್‌ನ ಸೂಪರ್ 300 ಟೂರ್ನಿಯಲ್ಲಿ ಸಿಂಧು ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. * ಪ್ರಸ್ತುತ ಭಾರತದ ಇಶಾನ್ ಭಟ್ನಾಗರ್ ಮತ್ತು ತನಿಶಾ ಕ್ರಾಸ್ಟೊ ಅವರು ಮಿಶ್ರ ಡಬಲ್ಸ್ ವಿಭಾಗದಲ್ಲಿ ಟಿ.ಹೇಮಾ ನಾಗೇಂದ್ರ ಬಾಬು ಹಾಗೂ ಶ್ರೀವೇದ್ಯ ಗುರಜಡಾ ಅವರ ವಿರುದ್ಧ ಜಯ ಗಳಿಸಿ ಪ್ರಶಸ್ತಿ ಜಯಿಸಿಕೊಂಡರು. * * ಮಹಿಳೆಯರ ಡಬಲ್ಸ್ ಪ್ರಶಸ್ತಿ : ಮಲೇಷ್ಯಾದ ಅನಾ ಚಿಂಗ್ ಯಿಕ್ ಚಿಯಾಂಗ್ ಮತ್ತು ಟಿಯೊ ಮೀ ಕ್ಸಿಂಗ್‌ ಅವರು ಭಾರತದ ಟ್ರೀಸಾ ಜೋಲಿ ಮತ್ತು ಗಾಯತ್ರಿ ಗೋಪಿಚಂದ್‌ ಅವರನ್ನು ಸೋಲಿಸಿ ಪ್ರಶಸ್ತಿಯನ್ನು ಜಯಿಸಿಕೊಂಡಿದ್ದಾರೆ. * * ಪುರುಷರ ಡಬಲ್ಸ್‌ ಪ್ರಶಸ್ತಿ : ಮಲೇಷ್ಯಾದ ಮ್ಯಾನ್ ವೀ ಚಾಂಗ್ ಮತ್ತು ಕಾಯ್‌ ವುನ್ ಟೀ ಅವರು ಭಾರತದ ಕೃಷ್ಣ ಪ್ರಸಾದ್ ಗರಗ ಮತ್ತು ಪಾಂಜಲ ವಿಷ್ಣುವರ್ಧನ್ ಅವರನ್ನು ಸೋಲಿಸುವ ಮೂಲಕ ಮಣಿಸಿ ಪ್ರಶಸ್ತಿಯನ್ನು ಜಯಿಸಿಕೊಂಡಿದ್ದಾರೆ. * ಈ ಟೂರ್ನಿಯ ಪುರುಷರ ವಿಭಾಗದ ಫೈನಲ್ ಪಂದ್ಯವನ್ನು ಕೋವಿಡ್‌-19ನಿಂದಾಗಿ ರದ್ದು ಮಾಡಲಾಗಿದೆ ಎಂದು ತಿಳಿಸಿದ್ದಾರೆ. * ಸೈಯದ್ ಮೋದಿ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಇದೊಂದು ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಪಂದ್ಯಾವಳಿಯಾಗಿದೆ, ಈ ಚಾಂಪಿಯನ್‌ಶಿಪ್ ಭಾರತದಲ್ಲಿ ವಾರ್ಷಿಕವಾಗಿ ನಡೆಯುತ್ತದೆ. * ಈ ಹಿಂದೆ 2009 ರಲ್ಲಿ ಇದನ್ನು BWF ಗ್ರ್ಯಾಂಡ್ ಪ್ರಿಕ್ಸ್ ಈವೆಂಟ್ ಆಗಿ ಪರಿವರ್ತಿಸಲಾಯಿತು. ಆಗಿನಿಂದಲೂ ಈ ಪಂದ್ಯಾವಳಿಯನ್ನು ವಾರ್ಷಿಕವಾಗಿ ಉತ್ತರ ಪ್ರದೇಶದ ಲಕ್ನೋದಲ್ಲಿ ಬಾಬು ಬನಾರಸಿ ದಾಸ್ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗುತ್ತದೆ. ಇದನ್ನು ತಾತ್ಕಾಲಿಕವಾಗಿ 2010 ರಲ್ಲಿ ಹೈದರಾಬಾದ್‌ಗೆ ಸ್ಥಳಾಂತರಿಸಲಾಯಿತು. * ಮತ್ತೇ 2011 ರಲ್ಲಿ ಈ ಈ ಚಾಂಪಿಯನ್‌ಶಿಪ್ ನ್ನು BWF ಗ್ರ್ಯಾಂಡ್ ಪ್ರಿಕ್ಸ್ ಗೋಲ್ಡ್ ಪಂದ್ಯಾವಳಿಗೆ ಅಪ್‌ಗ್ರೇಡ್ ಮಾಡಲಾಯಿತು. * ಉತ್ತರ ಪ್ರದೇಶ ಬ್ಯಾಡ್ಮಿಂಟನ್ ಅಸೋಸಿಯೇಷನ್ (UPBA) ಈ ಹಿಂದೆ 1991 ರಲ್ಲಿ ಈ ಪಂದ್ಯಾವಳಿಯನ್ನು ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಸೈಯದ್ ಮೋದಿ ಅವರ ಸ್ಮರಣಾರ್ಥ 'ಸೈಯದ್ ಮೋದಿ ಸ್ಮಾರಕ ಬ್ಯಾಡ್ಮಿಂಟನ್ ಟೂರ್ನಮೆಂಟ್' ಎಂದು ಉದ್ಘಾಟಣೆ ಮಾಡಿ ಆರಂಭಿಸಿತು. ಹಾಗೂ ಇದು 2003 ರವರೆಗೆ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಾಗಿತ್ತು. ಮತ್ತೇ 2004 ರಲ್ಲಿ ಈ ಪಂದ್ಯಾವಳಿಯನ್ನು ಮೊದಲ ಬಾರಿಗೆ ಅಂತರರಾಷ್ಟ್ರೀಯ ಕಾರ್ಯಕ್ರಮವಾಗಿ ಆಯೋಜಿಸುವ ಮೂಲಕ ಕಡಿಮೆ-ಕೀ ವಿದೇಶಿ ಭಾಗವಹಿಸುವಿಕೆಯನ್ನು ಕಂಡು ಕೊಂಡಿತ್ತು. * ಈ ಹಿಂದೆ 2005 ರಿಂದ 2008 ರವರೆಗೆ UPBA ಹಾಗೂ ಉತ್ತರ ಪ್ರದೇಶ ಸರ್ಕಾರದ ರಾಜಕೀಯದ ಬಿಕ್ಕಟ್ಟಿನಿಂದಾಗಿ ಈ ಪಂದ್ಯಾವಳಿಯನ್ನು ನಿಲ್ಲಿಸಲಾಗಿತ್ತು.