Job Description: * ಪ್ರಸ್ತುತ ಭಾರತೀಯ ನೌಕಾಪಡೆಯ ಸ್ವದೇಶವಾಗಿ ವಿನ್ಯಾಸಗೊಳಿಸಿ ಅಭಿವೃದ್ಧಿ ಪಡಿಸಿರುವ ಕ್ಷಿಪಣಿ ವಿಧ್ವಂಸಕ INS ಕೊಚ್ಚಿ ಇದೀಗ ಅರಬ್ಬಿ ಸಮುದ್ರದಲ್ಲಿ ರಷ್ಯಾದ ನೌಕಾಪಡೆಯ ಹಡಗುಗಳ ಜೊತೆಗೂಡಿ ಜಂಟಿ ಸಮರಾಭ್ಯಾಸ ನಡೆಸಿದೆ. * ಈ ಜಂಟಿ ಸಮರಾಭ್ಯಾಸದ ವ್ಯಾಯಾಮವು ಎರಡು ದೇಶಗಳ ನೌಕಾಪಡೆಗಳ ಸಂಬಂಧನವನ್ನು ಮತ್ತಷ್ಟು ಬಲಿಷ್ಠ ಮಾಡಲಿದೆ ಹಾಗೂ ಪರಸ್ಪರ ಕಾರ್ಯಸಾಧ್ಯತೆಯನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟಿವೆ. * ಪ್ರಸ್ತುತ ರಷ್ಯಾದ ಯುದ್ಧ ನೌಕೆಗಳ ಜೊತೆ INS ಕೊಚ್ಚಿಯ ಈ ಜಂಟಿ ಸಮರಾಭ್ಯಾಸದಲ್ಲಿ, ಯುದ್ಧತಂತ್ರದ ಕರ ಕುಶಲತೆಗಳು, ಕ್ರಾಸ್-ಡೆಕ್ ಹೆಲಿಕಾಪ್ಟರ್ ಕಾರ್ಯಾಚರಣೆ ಹಾಗೂ ಸಮುದ್ರಯಾನ ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. * ಭಾರತೀಯ INS ಕೊಚ್ಚಿಯ ಜೊತೆಗೆ ವ್ಯಾಯಾಮ‌ ನಡೆಸಿರುವ ರಷ್ಯಾದ '3' ಹಡಗುಗಳು ಕ್ಷಿಪಣಿ ಕ್ರೂಸರ್ ವರ್ಯಾಗ್, ವಿಧ್ವಂಸಕ ಅಡ್ಮಿರಲ್ ಟ್ರಿಬಜ್ ಹಾಗೂ ಟ್ಯಾಂಕರ್ ಬೋರಿಸ್ ಬುಟೋಮಾ ಎಂದು ತಿಳಿದು ಬಂದಿದೆ. * INS ಕೊಚ್ಚಿ: ಭಾರತೀಯ ನೌಕಾಪಡೆಗಾಗಿ ಪ್ರಾಜೆಕ್ಟ್ 15A ಎಂಬ ಕೋಡ್ ಹೆಸರಿನಲ್ಲಿ ನಿರ್ಮಾಣ ಮಾಡಲಾಗಿರುವ ಕೋಲ್ಕತ್ತಾ-ಕ್ಲಾಸ್ ಸ್ಟೆಲ್ತ್ ಗೈಡೆಡ್-ಮಿಸೈಲ್ ವಿಧ್ವಂಸಕಗಳ 2 ನೇ ಹಡಗಾಗಿದೆ. ಈ INS ಕೊಚ್ಚಿಯನ್ನು ಮುಂಬೈನಲ್ಲಿನ ಮಜಗಾನ್ ಡಾಕ್ ಲಿಮಿಟೆಡ್ (MDL)ನಿರ್ಮಿಸಲಾಗಿದೆ. ಇದನ್ನು ಅತಿ ಹೆಚ್ಚಾಗಿ ಸಮುದ್ರ ಪ್ರಯೋಗಗಳಿಗೆ ಬಳಸಲಾಗುತ್ತದೆ. ಇದನ್ನು ಭಾರತೀಯ ನೌಕಾಪಡೆಯ ಸೇವೆಗೆ 2015 ರ ಸೆಪ್ಟೆಂಬರ್. 30 ರಂದು ನಿಯೋಜಿಸಲಾಗಿದೆ. * INS ಕೊಚ್ಚಿಯ ಶಸ್ತ್ರಾಸ್ತ್ರ ಪ್ರಯೋಗಗಳು: 2015 ರ ನವೆಂಬರ್. 01 ರಂದು ನೌಕಾಪಡೆಯು ಕೊಚ್ಚಿಯಿಂದ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಯಿತು. ಪ್ರಸ್ತುತ ಕೊಚ್ಚಿಯಿಂದ ಮೊಟ್ಟಮೊದಲ ಬಾರಿಗೆ 7,500-ಟನ್ ಲಂಬವಾಗಿ ಉಡಾವಣೆ ಮಾಡುವಾಗ ಕ್ಷಿಪಣಿಯು ತನ್ನ ಗುರಿಯನ್ನು ತಲುಪಿತು. ಆ ಗುರಿಯನ್ನು INS ಅಲೆಪ್ಪಿ ಎಂದು ಕರೆಯುತ್ತಾರೆ. * ನೌಕಾಪಡೆಯು ಕೊಚ್ಚಿಯಿಂದ ಬರಾಕ್ 8 ಕ್ಷಿಪಣಿಗಳನ್ನು ಈ ಹಿಂದೆ 2017 ರ ನವೆಂಬರ್ 16 ಮೇ ಮತ್ತು 29 ರಂದು ಯಶಸ್ವಿಯಾಗಿ ಪರೀಕ್ಷಿಸಲಾಯಿತು.