Job Description: * ಪ್ರಸ್ತುತ ಭಾರತದಾದ್ಯಂತ ಗುರು ರವಿದಾಸ್ ಜಯಂತಿಯನ್ನು ಮಾಘ ಮಾಸದ ಅಮಾವಾಸ್ಯೆಯಂದು ಆಚರಿಸಲಾಗುತ್ತದೆ. * ಗುರು ರವಿದಾಸ್ ಅವರು ಒಬ್ಬ ಸಮಾಜ ಸುಧಾರಕ ಹಾಗೂ ಆಧ್ಯಾತ್ಮಿಕ ವ್ಯಕ್ತಿ. ಅವರು ಮುಖ್ಯವಾಗಿ ಜಾತಿವಾದದ ವಿರುದ್ಧದ ಕಾರ್ಯಗಳಲ್ಲಿ ಹೆಸರುವಾಸಿಯಾಗಿದ್ದಾರೆ. ರವಿದಾಸರು ಸಂತ ಕಬೀರನಿಗೆ ಸಮಕಾಲೀನ ಸಂತರಾಗಿದ್ದರು. ಗುರು ರವಿದಾಸ್ ಅವರು ತಮ್ಮ ಹಿಂದಿನ ಜನ್ಮದಲ್ಲಿ ಬ್ರಾಹ್ಮಣನಾಗಿದ್ದರು ಎಂದು ನಂಬಲಾಗಿದೆ. ಇವರು ಸಾಯುತ್ತಿರುವ ಸಂದರ್ಭದಲ್ಲಿ ಒಬ್ಬ ಮಹಿಳೆಯಿಂದ ಆಕರ್ಷಿತನಾಗಿದ್ದರು ಹಾಗೂ ಅವಳೇ ತನ್ನ ತಾಯಿಯಾಗಬೇಕೆಂದು ಬಯಸಿದ್ದರು. ಈ ಕಾರಣದಿಂದಾಗಿ ಇವರು ಮುಂದಿನ ಜನ್ಮದಲ್ಲಿ ಅದೇ ಮಹಿಳೆಯ ಉದರದಲ್ಲಿ ಜನಿಸಿದರು ಎಂದು ನಂಬಲಾಗಿದೆ. ಗುರು ರವಿದಾಸ ಅವರು 15 ನೇ ಶತಮಾನದ ಕವಿಯಾಗಿದ್ದಾರೆ. * ರವಿದಾಸ್ ಅವರು ಭಕ್ತಿ ಚಳುವಳಿಗೆ ಹೆಚ್ಚಿನ ಕೊಡುಗೆಗಳನ್ನೂ ನೀಡಿದ್ದಾರೆ. ಹಾಗೂ ಜಾತಿ ಪದ್ಧತಿ ನಿರ್ಮೂಲನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇಂದಿಗೂ ಒಂದು ಗುಂಪು ರವಿದಾಸ ಧರ್ಮವನ್ನು ಅನುಸರಿಸುತ್ತಿದೆ. * ಭಾರತದ ಚುನಾವಣಾ ಆಯೋಗವು ಪಂಜಾಬ್ ರಾಜ್ಯದ ವಿಧಾನಸಭಾ ಚುನಾವಣೆಯನ್ನು ರವಿದಾಸ್ ಜಯಂತಿಯ ಹಾಗೂ ಅಲ್ಲಿನ ಕೆಲವು ರಾಜಕೀಯ ಪಕ್ಷಗಳ ಮನವಿ ಮೇರೆಗೆ ಇತ್ತೀಚೆಗೆ ಮುಂದೂಡಿದೆ. ಪಂಜಾಬ್ ರಾಜ್ಯದಲ್ಲಿ ಹೊಸ ವೇಳಾಪಟ್ಟಿಯ ಪ್ರಕಾರ, ಇದೇ ಫೆಬ್ರವರಿ 20 ರಂದು ಚುನಾವಣೆ ನಡೆಯಲಿವೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ರವಿದಾಸ್ ಜಯಂತಿಯು ಫೆಬ್ರವರಿ 16 ರಂದು ಬರುತ್ತದೆ. ಈ ಹಿನ್ನಲೆಯಿಂದಾಗಿ ಫೆಬ್ರವರಿ 10 ಮತ್ತು ಫೆಬ್ರವರಿ 16 ರ ನಡುವೆ, ರವಿದಾಸ್ ಅವರ ಅನುಯಾಯಿಗಳು ಪಂಜಾಬ್‌ನಿಂದ ವಾರಣಾಸಿಗೆ ಪ್ರಯಾಣವನ್ನು ಬೆಳೆಸುತ್ತಾರೆ, ಆ ಸಂದರ್ಭದಲ್ಲಿ ಅಧಿಕ ಸಂಖ್ಯೆಯ ಮತದಾರರು ರಾಜ್ಯವನ್ನು ತೊರೆಯುತ್ತಾರೆ ಎಂದು ತಿಳಿಸಿತ್ತು. ಈ ಕಾರಣದಿಂದಾಗಿ ರಾಜ್ಯದಲ್ಲಿನ ಚುನಾವಣೆಗಳನ್ನು ಮುಂದೂಡಲಾಗಿತ್ತು ಎನ್ನಲಾಗಿದೆ. * ರವಿದಾಸ್ ಅನುಯಾಯಿಗಳಲ್ಲಿ ಹೆಚ್ಚಾಗಿ ದಲಿತರೇ ಇದ್ದಾರೆ. ಇದೀಗ ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಜನಸಂಖ್ಯೆಯ 32% ರಷ್ಟು ಕೊಡುಗೆ ನೀಡುತ್ತಾರೆ. ಇದರಿಂದ ಅಲ್ಲಿನ ರಾಜಕೀಯ ಪಕ್ಷಗಳು ಚುನಾವಣೆಯನ್ನು ಮುಂದೂಡಿಕೆಗೆ ಒತ್ತಾಯಿಸುತ್ತಿದ್ದವು ಎನ್ನಲಾಗಿದೆ, ಕಾರಣ ದಲಿತರ ಮತಗಳನ್ನು ಪಡೆಯುವ ಸಲುವಾಗಿ. * ಪ್ರಸ್ತುತ ಪಂಜಾಬ್ ರಾಜ್ಯದಲ್ಲಿ 39 ಪರಿಶಿಷ್ಟ ಜಾತಿಗಳಿವೆ. ಧರ್ಮಿಗಳು ಹಾಗೂ ರವಿದಾಸ್ಸಿಯಾಗಳು ರವಿದಾಸ್ಸಿಯಾ ಧರ್ಮ ಎಂಬ ಇತ್ತೀಚಿನ ಧರ್ಮವನ್ನು ಸ್ಥಾಪಿಸಿವೆ.