Job Description: * ಸುಪ್ರಸಿದ್ದ ಹಾಗೂ ಪ್ರಖ್ಯಾತ ಕಥಕ್ ನೃತ್ಯಗಾರ ಬಿರ್ಜು ಮಹಾರಾಜ್ ಅವರು ತಮ್ಮ 83 ನೇ ವರ್ಷ ವಯಸ್ಸಿನಲ್ಲಿ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. * ಪಂಡಿತ್ ಬಿರ್ಜು ಮಹಾರಾಜ್ ಅವರು 1937 ರ ಫೆಬ್ರವರಿ.04 ರಂದು ಜನಿಸಿದ್ದರು, ಇತ್ತೀಚಿಗೆ 2022 ರ ಜನೆವರಿ. 17 ರಂದು ನಿಧನರಾಗಿದ್ದಾರೆ, ಇವರನ್ನು ಸಾಮಾನ್ಯವಾಗಿ ಬಿರ್ಜು ಮಹಾರಾಜ್ ಎಂದು ಕರೆಯಲಾಗುತಿತ್ತು, ಇವರೊಬ್ಬ ಭಾರತೀಯ ನೃತ್ಯಗಾರ, ಸಂಯೋಜಕ, ಗಾಯಕ ಹಾಗೂ ಭಾರತದಲ್ಲಿ ಕಥಕ್ ನೃತ್ಯದ ಲಕ್ನೋ 'ಕಲ್ಕಾ-ಬಿಂದಾದಿನ್' ಘರಾನಾದ ಪ್ರತಿಪಾದಕರಾಗಿದ್ದರು. ಅಷ್ಟೇ ಅಲ್ಲದೇ ಇವರು ಕಥಕ್ ನೃತ್ಯಗಾರರ ಮಹಾರಾಜ್ ಕುಟುಂಬದವರಾಗಿದ್ದರು. ಇವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿದ್ದರು ಹಾಗೂ ಗಾಯಕರು ಕೂಡ ಆಗಿದ್ದರು. * ಬಿರ್ಜು ಮಹಾರಾಜ್ ಅವರು ಹಲವು ವರ್ಷಗಳವರೆಗೆ ನವದೆಹಲಿನ ಕಥಕ್ ಕೇಂದ್ರದ ಮುಖ್ಯಸ್ಥರಾಗಿ ಸೇವೆಸಲ್ಲಿಸಿದ್ದಾರೆ, ಮತ್ತೇ 1998 ರಲ್ಲಿ ಅವರು ತಮ್ಮ ಸ್ವಂತ ನೃತ್ಯ ಶಾಲೆಯಾಗಿರುವ ಕಲಾಶ್ರಮವನ್ನು ಆರಂಭಿಸಿದ್ದರು. * ಬಿರ್ಜು ಮಹಾರಾಜ್ ಅವರು ಅಲಹಾಬಾದ್ ಜಿಲ್ಲೆಯ ಹಂಡಿಯಾದಲ್ಲಿ ಹಿಂದೂ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರಾಗಿದ್ದಾರೆ, ಇವರು ರಾಯ್‌ಗಢ್ ರಾಜಪ್ರಭುತ್ವದ ರಾಜ್ಯದಲ್ಲಿ ಆಸ್ಥಾನ ನರ್ತಕಿಯಾಗಿ ಸೇವೆ ಸಲ್ಲಿಸಿದರು. * ಈ ಮಹಾರಾಜರು ತಮ್ಮ 13 ನೇ ವಯಸ್ಸಿನಲ್ಲಿ ನವ ದೆಹಲಿಯ ಸಂಗೀತ ಭಾರತಿಯಲ್ಲಿ ನೃತ್ಯ ಪ್ರಕಾರವನ್ನು ಕಲಿಸಲು ಆರಂಭಿಸಿದರು. ನಂತರದ ದಿನಗಳಲ್ಲಿ ಇವರು ದೆಹಲಿಯ ಭಾರತೀಯ ಕಲಾ ಕೇಂದ್ರ ಹಾಗೂ ಕಥಕ್ ಕೇಂದ್ರದಲ್ಲಿ ಸಂಗೀತ ನಾಟಕ ಅಕಾಡೆಮಿಯ ಘಟಕದ ಅಧ್ಯಾಪಕರ ಮುಖ್ಯಸ್ಥರಾಗಿ ಹಾಗೂ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇದಾದ ಬಳಿಕ 1998 ರಲ್ಲಿ ನಿವೃತ್ತಿಯನ್ನು ಹೊಂದಿದರು. ನಂತರ ಇವರು ದೆಹಲಿಯಲ್ಲಿನ ತಮ್ಮ ನೃತ್ಯಾಲದಲ್ಲಿ ಸತ್ಯಜಿತ್ ರೇ ಅವರ ಶತ್ರಂಜ್ ಕೆ ಖಿಲಾರಿಯಲ್ಲಿ ಎರಡು ನೃತ್ಯ ಸರಣಿಗಳಿಗೆ ಸಂಗೀತ ಸಂಯೋಜಿಸಿ ಹಾಡಿದರು, ಮತ್ತೇ 2002 ರಲ್ಲಿ ಕಾದಂಬರಿ ದೇವದಾಸ್‌ ನ ಚಲನಚಿತ್ರ ಆವೃತ್ತಿಯಿಂದ ಕಾಹೆ ಛೇದ್ ಮೋಹೆ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದರು. * ಈ ಹಿಂದೆ 2013 ರಲ್ಲಿ ತೆರೆ ಕಂಡಿರುವ ಕಮಲ್ ಹಾಸನ್ ಅಭಿನಯದ ವಿಶ್ವರೂಪಂ ಚಿತ್ರದ ನೃತ್ಯ ಸಂಯೋಜನೆಗೆ ರಾಷ್ಟ್ರಪ್ರಶಸ್ತಿಯನ್ನು ಪಡೆದುಕೊಂಡಿದ್ದರು.