Job Description: * ಇತ್ತೀಚಿಗೆ ಸಮಾಜ ಸೇವಕಿ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಶಾಂತಿ ದೇವಿ ಅವರು ತಮ್ಮ 88 ನೇ ವಯಸ್ಸಿನಲ್ಲಿ 2022 ರ ಜನೆವರಿ. 16 ರಂದು ಒಡಿಶಾ ರಾಜ್ಯದ ರಾಯಗಡ ಜಿಲ್ಲೆಯ ಗುಣಪುರ್‌ದ ತಮ್ಮ ನಿವಾಸದಲ್ಲಿ ವಿಧಿವಶರಾಗಿದ್ದಾರೆ. ಇವರ ನಿಧಾನಕ್ಕೆ ಪ್ರಧಾನಿ ಮೋದಿ ಅವರು ಸಂತಾಪವನ್ನು ಸೂಚಿಸಿದ್ದಾರೆ. * ಸಮಾಜ ಸೇವಕಿ ಶಾಂತಿ ದೇವಿ ಅವರು ಬಡವರ ಹಾಗೂ ಹಿಂದುಳಿದವರ ಪರವಾಗಿ ಧ್ವನಿಯಾಗಿದ್ದರು, ಇವರು ಜನರಿಗೆ ಆರೋಗ್ಯಕರ ಮತ್ತು ನ್ಯಾಯಯುತ ಸಮಾಜವನ್ನು ರಚಿಸಲು ನಿಸ್ವಾರ್ಥವಾಗಿ ಸೇವೆಯನ್ನು ಮಾಡಿದ್ದಾರೆ, ಇವರ ಈ ಕಾರ್ಯಗಳಿಗೆ ಸರ್ಕಾರವು ಪದ್ಮಶ್ರೀ ಪ್ರಶಸ್ತಿ ಜೊತೆಗೆ 1994 ರಲ್ಲಿ ಜಮುನಾಲಾಲ್ ಬಜಾಜ್ ಪ್ರಶಸ್ತಿ, ಹಾಗೂ ರಾಧಾನತ್ ರಥ ಶಾಂತಿ ಪ್ರಶಸ್ತಿಯನ್ನು ನೀಡಿ ಗೌರವವನ್ನು ಒದಗಿಸಲಾಗಿತ್ತು. * ಶಾಂತಿ ದೇವಿ ಅವರು ಒಡಿಶಾ ರಾಜ್ಯದ ಬಾಲಸೋರ್ ಜಿಲ್ಲೆಯಲ್ಲಿ 1934 ರ ಏಪ್ರಿಲ್. 18 ರಂದು ಜನಿಸಿದ್ದಾರೆ. ಇವರು ಒಡಿಶಾ ರಾಜ್ಯದ ಖ್ಯಾತ ಸಮಾಜ ಸೇವಕಿ ಶಾಂತಿ ದೇವಿ ಅವರು ಮಾವೋವಾದಿ ಪೀಡಿತ ಪ್ರದೇಶಗಳಲ್ಲಿ ಶಾಂತಿಯನ್ನು ಮರುಸ್ಥಾಪಿಸಲು ಅಪಾರವಾಗಿ ಶ್ರಮಿಸಿದ್ದಾರೆ. ಹಾಗೂ ಇವರು ಸ್ವಯಂಸೇವಾ ಸಂಸ್ಥೆ ಸೇವಾ ಸಮಾಜವನ್ನು ಮುನ್ನಡೆಸಿದ್ದಾರೆ. ಇವರು ತಮ್ಮ ಮದುವೆಯ ನಂತರ ರಾಯಗಡ ಜಿಲ್ಲೆಯ ಗೋಬರಪಲ್ಲಿಯಲ್ಲಿ ಆಶ್ರಮವನ್ನು ಸ್ಥಾಪಿಸಿ ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಆರಂಭಿಸಿದರು. * ಈ ಹಿಂದೆ 1964 ರಲ್ಲಿ ಬುಡಕಟ್ಟು ಹೆಣ್ಣುಮಕ್ಕಳ ಅಭಿವೃದ್ಧಿ ಮತ್ತು ಶಿಕ್ಷಣಕ್ಕಾಗಿ ಸೇವಾ ಸಮಾಜ ಆಶ್ರಮವನ್ನು ಸ್ಥಾಪಿಸಿದರು, ಈ ಆಶ್ರಮವು ಅಲ್ಲಿನ ಹೆಣ್ಣುಮಕ್ಕಳಿಗೆ ಸ್ವಾವಲಂಬಿಯಾಗಿ ಸಮಾಜದಲ್ಲಿ ಸ್ವಾಭಿಮಾನದಿಂದ ಬದುಕಲು ಕಲಿಸಿಕೊಡುತಿತ್ತು. ಇದರ ಜೊತೆಯಲ್ಲಿ ಅನಾಥ ಮತ್ತು ನಿರ್ಗತಿಕ ಮಕ್ಕಳ ಶಿಕ್ಷಣ, ಪುನರ್ವಸತಿ ಮತ್ತು ವೃತ್ತಿಪರ ಶಿಕ್ಷಣ ನೀಡಲು ಒಡಿಶಾ ರಾಜ್ಯದ ಗುಣಪುರದಲ್ಲಿ ಆಶ್ರಮವನ್ನು ಸ್ಥಾಪಿಸಿದರು. * ಸಮಾಜ ಸೇವಕಿ ಶಾಂತಿ ದೇವಿಯವರು 'ಭೂದಾನ' ಚಳುವಳಿಯೊಂದಿಗೆ ನಿಕಟವಾದ ಸಂಬಂಧವನ್ನು ಹೊಂದಿದ್ದರು, ಈ ಹಿಂದೆ 1961 ರಲ್ಲಿ ಉತ್ಕಲ ನವಜೀವನ ಮಂಡಲದ ಕಾರ್ಯದರ್ಶಿಯಾದರು ಸೇವೆ ಸಲ್ಲಿಸಿದ್ದಾರೆ.