Job Description: * ಪ್ರಸ್ತುತ ಭಾರತದಲ್ಲಿನ ವಯಸ್ಕರ ಜನ ಸಂಖ್ಯೆಯು ಶೇ.70 ಪ್ರತಿಶತದಷ್ಟು ಕೊರೋನಾ ವಿರುದ್ಧ ಹೋರಾಡಲು ಎರಡು ಡೋಸ್ ಕೋವಿಡ್-19 ಲಸಿಕೆಯನ್ನು ಪಡೆದಿದ್ದಾರೆ. ಹಾಗೂ ಶೇ. 93 ಪ್ರತಿಶತದಷ್ಟು ಜನರು ಕೊರೋನಾ ವಿರುದ್ಧ ಹೋರಾಡಲು ಮೊದಲ ಡೋಸ್'ನ್ನು ಪಡೆದುಕೊಂಡಿದ್ದಾರೆ. ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ. * ಇದೀಗ ಲಸಿಕೆ ಅಭಿಯಾನವು ಆರಂಭವಾಗಿ ಒಂದು ವರ್ಷವಾಗಿದೆ, ಈ ಹಿನ್ನಲೆಯಿಂದಾಗಿ ಕೇಂದ್ರ ಸರ್ಕ್ರವು ಕೋವ್ಯಾಕ್ಸಿನ್'ನ ಪೋಸ್ಟೇಜ್ ಸ್ಟಾಂಪ್ ನ್ನು ಬಿಡುಗಡೆ ಮಾಡುವ ಮೂಲಕ ಜನರಲ್ಲಿ ಅರಿವು ಮೂಡಿಸಿದೆ, ಹಾಗೂ ಲಸಿಕೆ ಅಭಿಯಾನದ ವರ್ಷದ ಸಂಭ್ರಮವನ್ನು ಆಚರಿಸಿದೆ. * ಈ ಅಂಚೆಚೀಟಿಯನ್ನು ಆರೋಗ್ಯ ಕಾರ್ಯಕರ್ತರು ಹಿರಿಯ ನಾಗರಿಕರಿಗೆ ಕೋವಿಡ್ ಲಸಿಕೆ ನೀಡುತ್ತಿರುವ 'ಕೋವಾಕ್ಸಿನ್' ಬಾಟಲಿಯ ಚಿತ್ರದೊಂದಿಗೆ ವಿನ್ಯಾಸಗೊಳಿಸಲಾಗಿದೆ. * ಕಳೆದ ವರ್ಷ ಜನೆವರಿ. 16 ರಂದು ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಕೊರೋನಾ ಲಸಿಕೆಯನ್ನು ನೀಡುವ ಮೂಲಕ ಈ ಲಸಿಕಾ ಅಭಿಯಾನವನ್ನು ಆರಂಭಿಸಲಾಗಿತ್ತು, ಇದೀಗ ಈ ಅಭಿಯಾನವು ಒಂದು ವರ್ಷ ಪೂರೈಸಿದೆ. ಈ ಕಾರಣದಿಂದ ವರ್ಚುವಲ್ ಕಾರ್ಯಕ್ರಮದಲ್ಲಿ ಅಂಚೆ ಚೀಟಿ ಬಿಡುಗಡೆ ಮಾಡಲಾಗಿದೆ. ಸದ್ಯ ಭಾರತದಲ್ಲಿ ಜನ ಸಾಮಾನ್ಯರಿಗೆ ಸುಮಾರು 156 ಕೋಟಿ ಡೋಸ್‌ಗಳನ್ನು ನೀಡಲಾಗಿದೆ, ಇದರಿಂದಾಗಿ ಕೇಂದ್ರ ಸರ್ಕಾರವು ಹೊಸ ಮೈಲಿಗಲ್ಲನ್ನು ಸಾಧಿಸಿದಂತಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಹೇಳಿದ್ದಾರೆ. * ಸದ್ಯ ಭಾರತದಲ್ಲಿ ಸ್ಥಳೀಯವಾಗಿ ಲಸಿಕೆ ಅಭಿವೃದ್ಧಿಪಡಿಸುವ ಮೂಲಕ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ICMR) ಹಾಗೂ ಭಾರತ್ ಬಯೋಟೆಕ್ ಸಂಸ್ಥೆಗಳು ಆತ್ಮನಿರ್ಭರ ಯೋಜನೆ ಅಡಿಯಲ್ಲಿ ಭಾರತದ ಕನಸನ್ನು ನನಸು ಮಾಡಿವೆ ಎಂದಿದ್ದಾರೆ. * ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್ ಅವರು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮತ್ತು ಭಾರತ್ ಬಯೋಟೆಕ್ ತಂಡವನ್ನು ಇಷ್ಟು ಕಡಿಮೆ ಅವಧಿಯಲ್ಲಿ ಸ್ಥಳೀಯ ಲಸಿಕೆ ಅಭಿವೃದ್ಧಿಪಡಿಸಿದಕ್ಕಾಗಿ ಅಭಿನಂದಿಸಿದ್ದಾರೆ. * ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR): ಇದೊಂದು ಬಯೋಮೆಡಿಕಲ್ ಸಂಶೋಧನೆಯ ಪ್ರಚಾರಕ್ಕಾಗಿ ಭಾರತದಲ್ಲಿನ ಉನ್ನತ ಸಂಸ್ಥೆಯಾಗಿದೆ, ಈ ಸಂಸ್ಥೆಯು ವಿಶ್ವದ ಅತ್ಯಂತ ಹಳೆಯ ಮತ್ತು ದೊಡ್ಡ ವೈದ್ಯಕೀಯ ಸಂಶೋಧನಾ ಸಂಸ್ಥೆಗಳಲ್ಲಿ ಒಂದಾಗಿದೆ. ಭಾರತ ಸರ್ಕಾರವು ಆರೋಗ್ಯ ಸಂಶೋಧನೆ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮೂಲಕ ICMR ಗೆ ಹಣವನ್ನು ನೀಡುತ್ತದೆ. * ಈ ಸಂತೆಯು ಈ ಹಿಂದೆ 2007 ರಲ್ಲಿ ಸಂಸ್ಥೆಯು ಕ್ಲಿನಿಕಲ್ ಟ್ರಯಲ್ಸ್ ರಿಜಿಸ್ಟ್ರಿ ಇಂಡಿಯಾವನ್ನು ಸ್ಥಾಪನೆ ಮಾಡಿತು, ಇದು ಕ್ಲಿನಿಕಲ್ ಪ್ರಯೋಗಗಳಿಗೆ ಭಾರತದ ರಾಷ್ಟ್ರೀಯ ನೋಂದಣಿಯಾಗಿದೆ. ಈ ಸಂತೆಯು ಮಾನಸಿಕ ಆರೋಗ್ಯ ಸಂಶೋಧನೆ ಮತ್ತು ಔಷಧ ಸಂಶೋಧನೆಯ ಜೊತೆಗೆ ರೋಗದ ಒಟ್ಟು ಹೊರೆಯನ್ನು ಕಡಿಮೆ ಮಾಡುವದರ ಜೊತೆಗೆ ಜನರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸಲು ಹಲವಾರು ಪ್ರಯತ್ನಗಳನ್ನು ಮಾಡುತ್ತದೆ.