Job Description: * ಪ್ರಸ್ತುತ ಕೇಂದ್ರ ಸರ್ಕಾರವು ಕೊಳವೆ ಮಾರ್ಗದ ಮೂಲಕ ಮನೆಮನೆಗೆ ಮನೆ ಅಡುಗೆ ಅನಿಲ ಸಂಪರ್ಕವನ್ನು ನೀಡುವ ಯೋಜನೆಗೆ ಕರ್ನಾಟಕದ ರಾಜ್ಯದ ಮತ್ತೆರಡು ನಗರಗಳು ಚಿಕ್ಕಬಳ್ಳಾಪುರ ಮತ್ತು ಯಾದಗಿರಿ ಆಯ್ಕೆಯಾಗಿವೆ. ಕೇಂದ್ರವು ಈ ಯೋಜನೆಯಿಂದಾಗಿ ಸಿಲಿಂಡರ್ ಕೊರತೆಯನ್ನು ನೀಗಿಸಲಿದೆ ಎನ್ನಲಾಗಿದೆ. * ಇದೀಗ ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರು, ಮಂಗಳೂರು, ಮೈಸೂರು, ತುಮಕೂರು, ಬೆಳಗಾವಿ ಯಂತಹ ನಗರಗಳನ್ನು ಆಯ್ದ ಭೌಗೋಳಿಕ ಪ್ರದೇಶಗಳ ಮನೆಮನೆಗೆ ಪೈಪ್ ಲೈನ್ ಮೂಲಕ ಅಡುಗೆ ಅನಿಲ ಪೂರೈಸುವ ಯೋಜನೆಯ ಕಾರ್ಯವು ಈಗಾಗಲೇ ಚಾಲನೆಯಲ್ಲಿದೆ. ಈ ಕಾಮಗಾರಿಯು 2022 ರ ಏಪ್ರಿಲ್ ಅಥವಾ ಮೇ ತಿoಗಳಿಗೆ ಪೂರ್ಣಗೊಳ್ಳಲಿದೆ, ನಂತರ ಪ್ರತಿ ಮನೆಗೂ ಮೊದಲ ಹಂತದಲ್ಲಿ ಪೈಪ್ ಲೈನ್ ಮೂಲಕ ಅಡುಗೆ ಅನಿಲವನ್ನು ನಗರಗಳಿಗೆ ಪೂರೈಕೆ ಮಾಡಲಾಗುತ್ತದೆ, ಇದೀಗ ಮೈಸೂರು ನಗರ ವ್ಯಾಪ್ತಿಗೆ ಅಡುಗೆ ಅನಿಲ ಪೂರೈಕೆ ಮಾಡಲು ನಗರದ ಹೆಬ್ಬಾಳದಲ್ಲಿ ಅಡುಗೆ ಅನಿಲ ಘಟಕ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. * ಇತ್ತೀಚಿಗೆ ಕೇಂದ್ರ ಸರಕಾರದ ಪೆಟ್ರೋಲಿಯಂ ಇಲಾಖೆಯ ವ್ಯಾಪ್ತಿಯಲ್ಲಿನ ನೈಸರ್ಗಿಕ ನಿಯಂತ್ರಣ ಮಂಡಳಿ ದೇಶದ ವಿವಿಧ ನಗರಗಳ ಭೌಗೋಳಿಕ ಪ್ರದೇಶಗಳಿಗೆ ಪೈಪ್ ಲೈನ್ ಮೂಲಕ ಅಡುಗೆ ಅನಿಲವನ್ನು ಪೂರೈಸಲು ಟೆಂಡರ್'ನ್ನು ಕರೆದಿತ್ತು. ಇದೀಗ ರಾಜ್ಯದ '5' ನಗರಗಳ ಜೊತೆಗೆ ರಾಜ್ಯದ ಮತ್ತೆರಡು (ಚಿಕ್ಕಬಳ್ಳಾಪುರ ಮತ್ತು ಯಾದಗಿರಿ) ನಗರಗಳನ್ನೂ ಈ ಯೋಜನೆಯ ಅಡಿಗೆ ಸೇರಿಸಲು ನಿರ್ಧರಿಸಿದೆ. ಅದರಲ್ಲಿನ ಕರ್ನಾಟಕದ ಎರಡು ನಗರಗಳಿಗೆ ಅಡುಗೆ ಅನಿಲ ಪೂರೈಸಲು ಹೈದರಾಬಾದ್'ನ ಮೇಘಾ ಇಂಜಿನಿಯರಿಂಗ್ ಎಂಡ್ ಇನ್ಫ್ರಾಸ್ಟ್ರಕ್ಚರ್ ಕಂಪನಿಯು ಟೆಂಡರ್ ನ್ನು ಪಡೆದುಕೊಂಡಿದೆ. * ಪ್ರಸ್ತುತ ಕೇಂದ್ರ ಸರ್ಕಾರವು ಹಸಿರು ಅನಿಲ ಬಳಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಗಾಗಿ CNG (ಸಂಕುಚಿತ ನೈಸರ್ಗಿಕ ಅನಿಲ) ಘಟಕಗಳನ್ನೂ ಟೆಂಡರ್ ಪಡೆದುಕೊಂಡಿರುವ ಸಂಸ್ಥೆಗಳು ನಿರ್ಮಾಣ ಮಾಡಲಿವೆ. ಸದ್ಯ ದೇಶದಲ್ಲಿ '3' ರಾಜ್ಯಗಳಲ್ಲಿ ಎಂಇಐಎಲ್ ಸಂಸ್ಥೆಯು ಮೇಘಾ ಗ್ಯಾಸ್ ಅಡಿಯಲ್ಲಿ 32 CNG ಕೇಂದ್ರಗಳನ್ನು ನಿರ್ಮಾಣ ಮಾಡಿ ಯಶಸ್ವಿಯಾಗಿ ಕಾರ್ಯಾಚರಿಸುತ್ತಿದೆ. * ರಾಜ್ಯದ ಮೈಸೂರು ನಗರಕ್ಕೆ ಅಡುಗೆ ಅನಿಲ ಪೂರೈಕೆಗಾಗಿ ಮೊದಲ ಹಂತದಲ್ಲಿ 40,000 ಕ್ಕೂ ಅಧಿಕ ಮನೆಗಳಿಗೆ ಅಡುಗೆ ಅನಿಲ ಪೂರೈಕೆ ಮಾಡಲು ಪೈಪ್ಡ್(piped) ನ್ಯಾಚುರಲ್ ಗ್ಯಾಸ್ (PNG) ಯೋಜನೆ 2023 ರ ವೇಳೆಗೆ ಪೂರ್ಣಗೊಳ್ಳಲಿದೆ, ಇದಕ್ಕಾಗಿಯೇ ನಗರದ ಹೆಬ್ಬಾಳದಲ್ಲಿ ಸುಮಾರು 600 ಕೋಟಿ ರೂ. ವೆಚ್ಚದಲ್ಲಿ ಅಡುಗೆ ಅನಿಲ ಸ್ಥಾವರ ಸ್ಥಾಪನೆಯಾಗಲಿದೆ. ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಮಾಹಿತಿ ನೀಡಿದ್ದಾರೆ. * ಸದ್ಯ ಭಾರತವು ಇಂಧನ ಮಿಶ್ರಣದಲ್ಲಿ ಪ್ರಸ್ತುತ ಅನಿಲದ ಪಾಲು ಶೇ. 6 ರಷ್ಟಿದೆ, ಇದನ್ನು 2030 ರ ವೇಳೆಗೆ ಶೇ. 15 ಪ್ರತಿಶತಕ್ಕೆ ಹೆಚ್ಚಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.