Job Description: * ಪ್ರಸ್ತುತ ಇಂಗ್ಲೆಂಡ್ ಸರ್ಕಾರವು 10 ನೇ ಶತಮಾನದ ವೃಷಾನನ ಯೋಗಿನಿ ಮೂರ್ತಿಯನ್ನು ಭಾರತಕ್ಕೆ ಹಸ್ತಾಂತರಿಸಲು ತೀರ್ಮಾನಿಸಿದೆ ಎಂದು ಭಾರತೀಯ ಹೈಕಮಿಷನ್ ಮಾಹಿತಿ ನೀಡಿ ಇದರ ಪ್ರಕ್ರಿಯೆಗೆ ಚಾಲನೆ ನೀಡಿದೆ. ಈ ವೃಷಾನನ ಯೋಗಿನಿ ಮೂರ್ತಿಯ ಉತ್ತರಪ್ರದೇಶ ರಾಜ್ಯಕ್ಕೆ ಸೇರಿದೆ ಎನ್ನಲಾಗಿದೆ. * ಪ್ರಸ್ತುತ ಉತ್ತರಪ್ರದೇಶ ರಾಜ್ಯದ ಬಂದಾ ಜಿಲ್ಲೆಯ ಲಖೇರಿ ದೇಗುಲದ ವೃಷಾನನ ಮೂರ್ತಿಯು ಸುಮಾರು 40 ವರ್ಷದ ಹಿಂದೆ ನಾಪತ್ತೆಯಾಗಿತ್ತು ಎನ್ನಲಾಗಿತ್ತು. ಇದೀಗ ಈ 10 ನೇ ಶತಮಾನಕ್ಕೆ ಸೇರಿದ ಈ ಶಿಲಾಮೂರ್ತಿ ಇತ್ತೀಚೆಗೆ ಲಂಡನ್‌ನಲ್ಲಿ ಪತ್ತೆಯಾಗಿದೆ, ಇದೀಗ ಅಲ್ಲಿನ ಸರ್ಕಾರವು ಈ ಮೂರ್ತಿಯನ್ನು ಭಾರತಕ್ಕೆ ನೀಡಲು ನಿರ್ಧರಿಸಿದೆ. * ಇತ್ತೀಚಿಗೆ ಬ್ರಿಟನ್ ರಾಯಭಾರ ಕಚೇರಿ ಮುಖ್ಯಸ್ಥೆ ಚಾರಿಸ್ ಮರ್ನಿಲೋ ಅವರ ಸಮ್ಮುಖದಲ್ಲಿ ಭಾರತೀಯ ಹೈ ಕಮಿಷನರ್ ಗಾಯತ್ರಿ ಇಸ್ಸಾರ್ ಕುಮಾರ್ ಅವರಿಗೆ ಈ ಮೂರ್ತಿಯನ್ನು ಹಸ್ತಾಂತರಿಸಲಾಗಿದೆ. * ವೃಷಣನ ಯೋಗಿನಿಯ ಶಿಲ್ಪವನ್ನು ಸರಿ ಸುಮಾರು 1,000 ವರ್ಷಗಳ ಹಿಂದೆ ಕಲ್ಲಿನ ಮೇಲೆ ಕೆತ್ತಲಾಗಿದೆ, ಹಾಗೂ ಇದು ಎಮ್ಮೆ-ತಲೆಯ ಹೆಣ್ಣು ದೇವತೆಯ ವಿಗ್ರಹವನ್ನು ಉತ್ತರ ಪ್ರದೇಶದ ಬುಂದೇಲ್‌ಖಂಡ್ ಪ್ರದೇಶದ ಹಳ್ಳಿಯಲ್ಲಿನ ದೇವಸ್ಥಾನದಲ್ಲಿ ಈ ಮೂರ್ತಿಯನ್ನು ಸ್ಥಾಪಿಸಲಾಗಿತ್ತು. ಕೆಲ ದಿನಗಳ ನಂತರ ಈ ಮೂರ್ತಿಯನ್ನು ಕಳುವು ಮಾಡಿ ಪ್ಯಾರಿಸ್‌'ನಲ್ಲಿನ ಕಲಾ ಸಂಗ್ರಾಹಕರಿಗೆ ಮಾರಾಟಮಾಡಲಾಗಿತ್ತು ಎನ್ನಲಾಗಿದೆ. * ಕಳೆದ ತಿಂಗಳಿನಲ್ಲಿ ಇಂಗ್ಲೆಂಡ್ ಸರ್ಕಾರವು 4.5-ಅಡಿ ಎತ್ತರದ ಈ ವೃಷಣನ ಯೋಗಿನಿಯ ಮೂರ್ತಿಯನ್ನು ಭಾರತಕ್ಕೆ ಹಿಂತಿರುಗಿಸಿದೆ, ಇದೀಗ ಅದನ್ನು ಹೊಸ ದೆಹಲಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. * ಈ ವೃಷಣನ ಯೋಗಿನಿಯು ಮೂರ್ತಿಯು ಲಲಿತಾಸನದಲ್ಲಿ ಅಲಂಕೃತವಾಗಿ ಕಲ್ಲಿನ ಚಪ್ಪಡಿಯ ಮೇಲೆ ಕುಳಿತುಕೊಂಡು ಎಡಗೈಯಲ್ಲಿ ಗದೆಯನ್ನು ಹಾಗೂ ಬಲಗೈಯಲ್ಲಿ ಬಿಲ್ವಫಲವನ್ನು ಹಿಡಿದಿರುವ ವಿಗ್ರಹವಾಗಿದೆ. * ಪ್ರಸ್ತುತ ರಾಷ್ಟ್ರೀಯ ವಸ್ತುಸಂಗ್ರಹಾಲಯದ ಪ್ರಕಾರ ಈ ಯೋಗಿನಿ ಮೂರ್ತಿಯು ಸುಮಾರು 6 ನೇ ಮತ್ತು 10 ನೇ ಶತಮಾನದಾಗಿದೆ, ಇದು ಸ್ಕಂದ ಪುರಾಣ, ಅಗ್ನಿ ಪುರಾಣ, ಕೌಲಜ್ಞಾನನಿರ್ಣಯ, ಹಾಗೂ ಯೋಗಿ ನೀನಾಮಾವಳಿಗಳು ಎಂಬ ಹಲವು ಪವಿತ್ರ ಗ್ರಂಥಗಳಲ್ಲಿ ಹೆಸರುವಾಸಿಯಾಗಿದೆ. * ಈ ಹಿಂದೆ ವೃಷಣನ ಯೋಗಿನಿಯ ಮೂರ್ತಿಯನ್ನು ಫ್ರಾನ್ಸ್‌ಗೆ ಕದ್ದು ಸಾಗಿಸಲಾಗಿತ್ತು, ಇದನ್ನು ಪ್ಯಾರಿಸ್‌ನಲ್ಲಿನ ಖಾಸಗಿ ಸಂಗ್ರಾಹಕ ರಾಬರ್ಟ್ ಸ್ಕ್ರಿಂಪ್‌ ಅವರು ಸ್ವಾಧೀನಪಡಿಸಿಕೊಂಡಿದ್ದರು, ನಂತರದ ದಿನಗಳಲ್ಲಿ ಇದನ್ನು ವಿಧವೆಯಾಗಿರುವ ಮಾರ್ಟಿನ್ ಸ್ಕ್ರಿಂಪ್ಫ್ ಅವರು ಪ್ಯಾರಿಸ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಆ ಮೂರ್ತಿಯನ್ನು ಹಸ್ತಾತರಿಸಿದರು.