Job Description: * ದೇಶದಲ್ಲಿ 2022 ರ ಜನೆವರಿ. 15 ರಂದು 74 ನೇ ಭಾರತೀಯ ಸೇನಾ ದಿನವನ್ನು ಆಚರಿಸಿದೆ, ದೇಶದಲ್ಲಿ ಪ್ರತಿ ವರ್ಷವು ಈ ದಿನದಂದು, ರಾಷ್ಟ್ರಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿರುವ ಸೈನಿಕರಿಗೆ ಗೌರವವನ್ನು ನೀಡಲಾಗುತ್ತದೆ. ಭಾರತೀಯ ಸೇನಾ ದಿನವನ್ನು ಭಾರತೀಯ ಸೇನೆಯ ಎಲ್ಲಾ ಸೇನಾ ಕಮಾಂಡ್ ಪ್ರಧಾನ ಕಚೇರಿಗಳಲ್ಲಿ ಆಚರಣೆ ಮಾಡಲಾಗುತ್ತದೆ. * ಈ ಹಿಂದೆ 1895 ರ ಏಪ್ರಿಲ್. 1 ರಂದು ಭಾರತೀಯ ಸೇನೆಯನ್ನು ಅಧಿಕೃತವಾಗಿ ಸ್ಥಾಪನೆ ಮಾಡಲಾಗಿದೆ. ಹಾಗೂ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ 1949 ರಲ್ಲಿ ಸೇನೆಯ ಮೊದಲ ಮುಖ್ಯಸ್ಥರನ್ನು ಸೆಮಿಸಲಾಗಿತ್ತು. ಆ ದಿನದಂದು ಜನರಲ್ ಸರ್ ಫ್ರಾನ್ಸಿಸ್ ಬುಚರ್ ಅವರು ಲೆಫ್ಟಿನೆಂಟ್ ಜನರಲ್ ಕೆ.ಎಂ.ಕಾರ್ಯಪ್ಪ ಅವರಿಗೆ ಬ್ಯಾಟನ್ ಒದಗಿಸಿದರು. * ಈ ದಿನವು ಬ್ರಿಟಿಷರಿಂದ ಭಾರತಕ್ಕೆ ಅಧಿಕಾರದ ಹಸ್ತಾಂತರದ ದಿನವಾಗಿದೆ, ಭಾರತದ ಇತಿಹಾಸದಲ್ಲಿ ಈ ದಿನವು ವಿದೇಶಿ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದ ಪ್ರಮುಖ ದಿನವಾಗಿದೆ. * ಜನೇವರಿ. 15 ಈ ದಿನದಂದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಹಾಗೂ ಎಲ್ಲಾ ಪ್ರಧಾನ ಕಛೇರಿಗಳಲ್ಲಿ ಮೆರವಣಿ ಹಾಗೂ ಹಲವು ಮಿಲಿಟರಿ ಪ್ರದರ್ಶನಗಳ ಮೂಲಕ ಈ ದಿನವನ್ನು ಆಚರಿಸಲಾಗುತ್ತದೆ. ಇದೀಗ ಭಾರತವು 2022 ರ ಜನೇವರಿ. 15 ರಂದು 74 ನೇ ಭಾರತೀಯ ಸೇನಾ ದಿನವನ್ನು ನವದೆಹಲಿಯಲ್ಲಿ ಆಚರಿಸಲಾಗಿದೆ. ಹಾಗೂ ಈ ದಿನದಂದು ಶೌರ್ಯ ಪ್ರಶಸ್ತಿಗಳು ಮತ್ತು ಸೇನಾ ಪದಕಗಳನ್ನು ಸೈನಿಕರಿಗೆ ನೀಡಲಾಗುತ್ತದೆ.