Job Description: * ಇತ್ತೀಚಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ಸಾರಿಗೆ ನಿಗಮದ ಮೊದಲ ಎಲೆಕ್ಟ್ರಿಕ್ ಬಸ್'ಗೆ ಚಾಲನೆ ನೀಡಿದರು. ಈ ಇ-ಬಸ್‌ಗಳು 27-ಕಿಮೀ ಉದ್ದದ ಮಾರ್ಗದಲ್ಲಿ ಸಂಚರಿಸಲಿವೆ. ಜೆಬಿಎಂ ಆಟೋ ಲಿಮಿಟೆಡ್ ಕಂಪನಿ ಈ ಎಲೆಕ್ಟ್ರಿಕ್ ಬಸ್ ಗಳನ್ನೂ ತಯಾರಿಸಿದೆ. * ಈ ಎಲೆಕ್ಟ್ರಿಕ್ ಬಸ್‌ಗಳು ಸಂಪೂರ್ಣವಾಗಿ ಹವಾನಿಯಂತ್ರಿತವಾಗಿವೆ. ಪ್ರಸ್ತುತ ಭಾರತದಲ್ಲಿ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳ ವೇಗದ ಅಳವಡಿಕೆ ಮತ್ತು ತಯಾರಿಕೆಯ ಅಡಿಯಲ್ಲಿ ಈ ಬಸ್'ಗಳನ್ನೂ ಸ್ವಾಧೀನಪಡಿಸಿಕೊಳ್ಳಲಾಗಿದೆ, ಮೊದಲಿಗೆ ಫೇಮ್ - II 300 ಬಸ್‌ಗಳ ಮೊದಲ ಫ್ಲೀಟ್ ಸಿದ್ಧವಾಗಿದೆ. ಈ ಬಸ್'ಗಳು ಮೊದಲಿಗೆ ದೆಹಲಿಯ ಪ್ರಗತಿ ಮೈದಾನದಿಂದ ಐಪಿ ಡಿಪೋಗೆ ನಡುವೆ ಸಂಚರಿಸಲಿವೆ, ಈ ಮಾರ್ಗವು 27 ಕಿ.ಮೀ. ಉದ್ದವಾಗಿದೆ. * ಚಾರ್ಜಿಂಗ್ ಕೇಂದ್ರಗಳು: ದೆಹಲಿ ಸರ್ಕಾರವು ಬಸ್ ಡಿಪೋಗಳಲ್ಲಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲಿದೆ. ನಂತರದಲ್ಲಿ ಹಂತ ಹಂತವಾಗಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ನಿರ್ಮಿಸಲಾಗುವುದು. * ದೆಹಲಿ ಸಾರಿಗೆ ನಿಗಮವು ಚಾರ್ಜಿಂಗ್ ಸ್ಟೇಷನ್‌ಗಳ ಜೊತೆಗೆ, ಹೈಬ್ರಿಡ್ ಬಸ್ ಡಿಪೋಗಳನ್ನು ಸಹ ನಿರ್ಮಿಸಲಿದೆ. ಈ ಡಿಪೋಗಳು CNG (ಸಂಕುಚಿತ ನೈಸರ್ಗಿಕ ಅನಿಲ) ಬಸ್‌ಗಳು ಹಾಗೂ ಎಲೆಕ್ಟ್ರಿಕ್ ಬಸ್‌ಗಳ ಸಂಯೋಜನೆಯಾಗಿದೆ ಎಂದು ತಿಳಿಸಿದೆ. * ಸದ್ಯ ದೆಹಲಿಯಲ್ಲಿ 6,793 ಬಸ್‌ಗಳಿವೆ. ಇದರಲ್ಲಿ 3,760 ದೆಹಲಿ ಸಾರಿಗೆ ನಿಗಮದಿಂದ ಮತ್ತು 3,033 DIMTS (ದೆಹಲಿ ಇಂಟಿಗ್ರೇಟೆಡ್ ಮಲ್ಟಿ-ಮೋಡಲ್ ಟ್ರಾನ್ಸಿಟ್ ಸಿಸ್ಟಮ್)ನಿರ್ವಹಿಸುತ್ತಿವೆ. * ದೆಹಲಿ ಸರ್ಕಾರವು ಈ ಹಿಂದೆ 2018 ರಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ಓಡಿಸಲು ನಿರ್ಧರಿಸಿದೆ. * ಭಾರತ ಸರ್ಕಾರವು ಈ ಹಿಂದೆ 1948 ರಲ್ಲಿ ದೆಹಲಿ ಸಾರಿಗೆ ನಿಗಮವನ್ನು ಸ್ಥಳೀಯ ಬಸ್ ಸೇವೆಗಳಿಗಾಗಿ ಆರಂಭಿಸಿದೆ, ಈ ಮೊದಲು ಸೇವಾ ಪೂರೈಕೆದಾರ ಗ್ವಾಲಿಯರ್ ಹಾಗೂ ಉತ್ತರ ಭಾರತ ಸಾರಿಗೆ ಕಂಪನಿ ಲಿಮಿಟೆಡ್ ಉದ್ದೇಶವನ್ನು ಪೂರೈಸುವಲ್ಲಿ ಸಮರ್ಪಕವಾಗಿಲ್ಲ ಎಂದು ತಿಳಿದ ನಂತರ ಅದನ್ನು 'ದೆಹಲಿ ಸಾರಿಗೆ ಸೇವೆ' ಎಂದು ಮರು ನಾಮಕರಿಸಲಾಯಿತು. ಮತ್ತೇ ಇದನ್ನು ರಸ್ತೆ ಸಾರಿಗೆ ನಿಗಮ ಕಾಯಿದೆ, 1950 ರ ಅಡಿಯಲ್ಲಿ ಮತ್ತೊಮ್ಮೆ ಇದನ್ನು 'ದೆಹಲಿ ರಸ್ತೆ ಸಾರಿಗೆ ಪ್ರಾಧಿಕಾರ' ಎಂದು ಸ್ಥಾಪನೆ ಮಾಡಲಾಯಿತು.ಭಾರತ ಸರ್ಕಾರದ ಆಡಳಿತಾತ್ಮಕ ನಿಯಂತ್ರಣದಲ್ಲಿದ್ದರುವ ದೆಹಲಿ ಸಾರಿಗೆ ನಿಗಮವನ್ನು ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿನ ಸರ್ಕಾರಕ್ಕೆ ವರ್ಗಾವಣೆ ಮಾಡಲಾಯಿತು. ಪ್ರಸ್ತುತ ಹೊಸ ದೆಹಲಿ, ದೆಹಲಿ ಸಾರಿಗೆ ಸಂಸ್ಥೆಯಲ್ಲಿ 2019 ರಿಂದ ಮಹಿಳೆಯರಿಗೆ ಉಚಿತ ಬಸ್ ಸಾರಿಗೆಯನ್ನು ಆರಂಭಿಸಿತ್ತು, ಹಾಗೂ ಅವರಿಗಾಗಿ ಗುಲಾಬಿ ಟಿಕೆಟ್‌ಗಳನ್ನು ನೀಡಿ ಉಚಿತವಾಗಿ ಪ್ರಯಾಣಿಸುವಂತೆ ಮಾಡಿದ್ದಾರೆ.