Job Description: * ಇತ್ತೀಚಿಗೆ ಭಾರತೀಯ ಸೇನೆಯು 12 ಲಕ್ಷಕ್ಕೂ ಅಧಿಕ ಸೇನಾ ಸಿಬ್ಬಂದಿಗಳಿಗೆ ಹೊಸ ಯುದ್ಧ ಸಮವಸ್ತ್ರಗಳನ್ನೂ ನೀಡಲಿದೆ. ಹಾಗೂ ಯುದ್ಧದ ಟಿ-ಶರ್ಟ್ ಗಳನ್ನೂ ನೀಡಲಿದೆ. * ಪ್ರಸ್ತುತ ಸೇನಾ ಸಿಬ್ಬಂದಿಗಳು ಈ ಹಿಂದೆ 2008 ರಿಂದ ಇಲ್ಲಿಯವರೆಗೆ ಹಿಂದಿನ ಶೈಲಿಯ ಸಮವಸ್ತ್ರಗಳನ್ನೂ ಬಳಸುತ್ತಿದ್ದರು. ಇದೀಗ ನೀಡಲಿರುವ ಹೊಸ ಸಮವಸ್ತ್ರವು ಹಳೆಯ ಒಂದೇ ಬಣ್ಣವನ್ನು ಹೊಂದಿದೆ. ಅದುವೇ ಮಣ್ಣಿನ ಛಾಯೆ ಹಾಗೂ ಆಲಿವ್ ಹಸಿರು ಬಣ್ಣ. ಪ್ರಸ್ತುತ ಈ ಹೊಸ ಸಮವಸ್ತ್ರವು ಬೆಳಕು, ಗಟ್ಟಿಮುಟ್ಟಾದ ಹಾಗೂ ಅಧಿಕ ಉಸಿರಾಡುವ ಬಟ್ಟೆಯಿಂದ ಸಿದ್ದಪಡಿಸಲಾಗಿದೆ. ಇದೀಗ ಸೇನೆಯ ಪುರುಷರು ಸೇವೆ ಸಲ್ಲಿಸುತ್ತಿರುವ ವಿವಿಧ ಭೂಪ್ರದೇಶಗಳನ್ನು ಪರಿಗಣಿಸಿ ಬಟ್ಟೆಯನ್ನು ಆಯ್ಕೆ ಮಾಡಲಾಗಿದೆ. ಈ ಎಲ್ಲ ಬಟ್ಟೆಗಳು ಹತ್ತಿ ಹಾಗೂ ಪಾಲಿಯೆಸ್ಟರ್ 70:30 ರಷ್ಟು ಅನುಪಾತವನ್ನು ಹೊಂದಿವೆ. ಸೇನೆಯ ಈ ಹೊಸ ಸಮವಸ್ತ್ರಗಳನ್ನೂ ಹಿಂದಿನ ಸಮವಸ್ತ್ರಗಳಿಗೆ ಹೋಲಿಸಿ ನೋಡಿದರೆ 15% ಹಗುರವಾಗಿವೆ, ಹಾಗೂ 23% ತಾಳಿಕೆ ಬರಲಿವೆ ಎಂದಿದ್ದಾರೆ. * ಮಹಿಳಾ ಅಧಿಕಾರಿಗಳಿಗೆ ಪ್ರತ್ಯೇಕ ಸಮವಸ್ತ್ರವಿರುವದಿಲ್ಲ. ಆದರೆ ಮಹಿಳಾ ಸಿಬ್ಬಂದಿಯ ಅವಶ್ಯಕತೆಗಳು ಹಾಗೂ ಸೌಕರ್ಯವನ್ನು ಪರಿಗಣಿಸಿ ಸಮವಸ್ತ್ರಗಳನ್ನೂ ಅಭಿವೃದ್ಧಿಪಡಿಸಲಾಗಿದೆ. ಇದೀಗ ಇದೇ ಮೊದಲ ಬಾರಿ ಸೇನಾ ಸಮವಸ್ತ್ರ ವಿನ್ಯಾಸ ಮತ್ತು ಅಭಿವೃದ್ಧಿಯಲ್ಲಿ ಬದಲಾವಣೆ ಮಾಡಲಾಗುತ್ತಿದೆ ಎಂದು ತಿಳಿಸಲಾಗಿದೆ. * ಪ್ರಸ್ತುತ ಈ ಸೇನಾ ಸಮವಸ್ತ್ರಗಳನ್ನು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿಯ '12' ವಿನ್ಯಾಸಕರ ತಂಡವು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದೆ. ಅವರಲ್ಲಿ '7' ಪ್ರಾಧ್ಯಾಪಕರು ಹಾಗೂ '3' ವಿದ್ಯಾರ್ಥಿಗಳು ಮತ್ತು ಇಬ್ಬರು ಹಳೆಯ ವಿದ್ಯಾರ್ಥಿಗಳಿದ್ದರು. * ಈ ಸಮವಸ್ತ್ರಗಳಿಗೆ ವಿನ್ಯಾಸದಲ್ಲಿ 4C ಗಳನ್ನು ಅಳವಡಿಸಲಾಗಿದೆ, ಈ 4C ವಿನ್ಯಾಸವಿಧಾನವು ಆರಾಮ, ಹವಾಮಾನ, ಮರೆಮಾಚುವಿಕೆ ಮತ್ತು ಗೌಪ್ಯತೆಯನ್ನು ಒಳಗೊಂಡಿದೆ. ಅಷ್ಟೇ ಅಲ್ಲದೇ ಈ ಹೊಸ ಸಮವಸ್ತ್ರವು QR ಕೋಡ್‌ ಹೊಂದಿರಲಿದೆ, ಈ QR ಕೋಡ್‌ ಸಮವಸ್ತ್ರದ ವಿಶಿಷ್ಟತೆಯನ್ನು ಕಾಪಾಡಲಿದೆ ಎಂದಿದ್ದಾರೆ. * ಇದೀಗ ವಿಧ್ಯುಕ್ತ ಸಮವಸ್ತ್ರಗಳು, ಶಾಂತಿ ಪ್ರದೇಶದ ಸಮವಸ್ತ್ರಗಳನ್ನು ಬದಲಾವಣೆ ಮಾಡಲಾಗುವದಿಲ್ಲ ಎಂದು ತಿಳಿಸಿದ್ದಾರೆ. * ಜನೇವರಿ. 15 ರ ಸೇನಾ ದಿನಾಚರಣೆಯ ಸಂದರ್ಭದಲ್ಲಿ ಈ ಹೊಸ ಸಮವಸ್ತ್ರವನ್ನು ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಎಫ್ ಆರ್ ರಾಯ್ ಬುಚೆರ್ ಅವರು ಅನಾವರಣಗೊಳಿಸಿದ್ದಾರೆ.