Job Description: * ಪ್ರಸ್ತುತ ಭಾರತದ 'ರಕ್ಷಣ ರಫ್ತು' ಯೋಜನೆ ಅಡಿಯಲ್ಲಿ, ಇದೀಗ ಫಿಲಿಪ್ಪೀನ್ಸ್‌ ದೇಶವು ಭಾರತದಿಂದ ಬ್ರಹ್ಮೋಸ್‌ ಕ್ಷಿಪಣಿಯನ್ನು ಖರೀದಿಸಲು ಸಿದ್ಧವಾಗಿದೆ. ಇದೀಗ ಫಿಲಿಪ್ಪೀನ್ಸ್‌ ದೇಶದ ನೌಕಾಪಡೆಗೆ ನೌಕಾ ನಿಗ್ರಹ ಕ್ಷಿಪಣಿ ವ್ಯವಸ್ಥೆಯನ್ನು ಒದಗಿಸುವಂತೆ ಉಭಯ ದೇಶಗಳು ಸುಮಾರು 2,770 ಕೋಟಿ ರೂ.ಗಳ ಒಪ್ಪಂದಕ್ಕೆ ಸಹಿ ಹಾಕಿವೆ. * ಇತ್ತೀಚಿಗೆ ಚೀನಾ ದೇಶವು ದಕ್ಷಿಣ ಚೀನ ಸಮುದ್ರದಲ್ಲಿ ಫಿಲಿಪ್ಪೀನ್ಸ್‌ ದೇಶದ ಜೊತೆಗೆ ಕ್ಯಾತೆಯನ್ನು ತಗೆಯುತ್ತಿದೆ, ಈ ಹಿನ್ನಲೆಯಿಂದಾಗಿ ಫಿಲಿಪ್ಪೀನ್ಸ್‌ ದ್ವೀಪರಾಷ್ಟ್ರವು ಇದೀಗ ತನ್ನ ಭೂಪ್ರದೇಶದ ರಕ್ಷಣೆಗಾಗಿ ಭಾರತ ದೇಶದಿಂದ ಬ್ರಹ್ಮೋಸ್‌ ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸಲು ತೀರ್ಮಾನಿಸಿದೆ. ಇದೀಗ ಭಾರತವು ಕೂಡ ಇಂಡೋಪೆಸಿಫಿಕ್‌ನಲ್ಲಿ ಚೀನಾ ದೇಶದ ಆಕ್ರಮಣಕಾರಿ ನೀತಿಯ ವಿರುದ್ಧ ಹೋರಾಡಲು ಆಸಿಯಾನ್‌ ದೇಶಗಳ ಜೊತೆಗೆ ಸೇನಾ ಸಂಬಂಧವನ್ನು ಬಲಪಡಿಸಿ ಕೊಳ್ಳುತ್ತಿದೆ. * ಪ್ರಸ್ತುತ ಭಾರತ ಮತ್ತು ರಷ್ಯಾ ದೇಶಗಳು ಈ ಬ್ರಹ್ಮೋಸ್‌ ಕ್ಷಿಪಣಿಯನ್ನು ಜಂಟಿಯಾಗಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿವೆ. ಈ ಬ್ರಹ್ಮೋಸ್‌ ಕ್ಷಿಪಣಿಯ ಸೂಪರ್‌ಸಾನಿಕ್‌ ಕ್ರೂಸ್‌ ಕ್ಷಿಪಣಿಯಾಗಿದೆ, ಇದನ್ನು ಜಲಾಂತರ್ಗಾಮಿಗಳು, ನೌಕೆಗಳು, ವಿಮಾನ ಅಥವಾ ಭೂಪ್ರದೇಶದಿಂದ ಉಡಾವಣೆ ಮಾಡಲು ಬಳಸಲಾಗುತ್ತದೆ. * ಇದೀಗ ಫಿಲಿಪ್ಪೀನ್ಸ್‌ ದೇಶವು ಭಾರತದ ಬ್ರಹ್ಮೋಸ್‌ ಕ್ಷಿಪಣಿ ಖರೀದಿಗೆ ಮುಂದಾಗಿದೆ. ಇದು ಭಾರತಕ್ಕೆ ಸಿಕ್ಕ ಮೊದಲ ಪ್ರಮುಖ ಸೇನಾ ರಫ್ತು ಆಗಲಿದೆ. ಫಿಲಿಪ್ಪೀನ್ಸ್‌ ದೇಶ ಅಷ್ಟೇ ಅಲ್ಲದೇ ವಿಯೆಟ್ನಾಂ, ಇಂಡೋನೇಷ್ಯಾ ಹಾಗೂ ಅನೇಕ ಆಗ್ನೇಯ ಏಷ್ಯಾದ ಕೆಲ ದೇಶಗಳು ಈ ಬ್ರಹ್ಮೋಸ್‌ ಕ್ಷಿಪಣಿ ಖರೀದಿಗೆ ಆಸಕ್ತಿಯನ್ನು ತೋರಿಸಿವೆ. * ಪ್ರಸ್ತುತ ಭಾರತ ದೇಶವು ಈ ಬ್ರಹ್ಮೋಸ್‌ ಕ್ಷಿಪಣಿ ವ್ಯವಸ್ಥೆ ಮಾರಾಟದ ಬಗ್ಗೆ UAE ಹಾಗೂ ನೆರೆಯ ದೇಶಗಳ ಜೊತೆ ಮಾತುಕತೆಯನ್ನು ನಡೆಸುತ್ತಿದೆ. * ಬ್ರಹ್ಮೋಸ್: ಇದೊಂದು ಮಧ್ಯಮ-ಶ್ರೇಣಿಯ ರಾಮ್‌ಜೆಟ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯಾಗಿದೆ, ಇದನ್ನು ಜಲಾಂತರ್ಗಾಮಿ, ಹಡಗುಗಳು, ವಿಮಾನಗಳು ಅಥವಾ ಭೂಮಿಯಿಂದ ಉಡಾವಣೆ ಮಾಡಲು ಬಳಸಲಾಗುತ್ತದೆ. ಇದು ರಷ್ಯಾದ ಹಾಗೂ ಭಾರತ ದೇಶಗಳ ನಡುವಿನ ಜಂಟಿ ಉದ್ಯಮವಾಗಿದೆ, ಈ ಕ್ಷಿಪಣಿ ರಷ್ಯಾದ P-800 ಯೋನಿಕ್ಸ್ ಕ್ರೂಸ್ ಕ್ಷಿಪಣಿ ಹಾಗೂ ಇದು ಸಮುದ್ರ-ಸ್ಕಿಮ್ಮಿಂಗ್ ರಷ್ಯಾದ ಕ್ರೂಸ್ ಕ್ಷಿಪಣಿ ತಂತ್ರಜ್ಞಾನವನ್ನು ಹೊಂದಿದೆ. * ಭಾರತದ ಬ್ರಹ್ಮಪುತ್ರ ಮತ್ತು ರಷ್ಯಾದ ಮೋಸ್ಕ್ವಾ ಎಂಬ ಎರಡು ನದಿಗಳ ಹೆಸರುಗಳಿಂದ ಈ ಬ್ರಹ್ಮೋಸ್ ಎಂಬ ಹೆಸರನ್ನು ರಚಿಸಲಾಗಿದೆ. * ಭಾರತವು ಈ ಹಿಂದೆ 2016 ರಲ್ಲಿ ಮಿಸೈಲ್ ಟೆಕ್ನಾಲಜಿ ಕಂಟ್ರೋಲ್ ರೆಜಿಮ್ (MTCR) ಸದಸ್ಯರಾದ ಬಳಿಕ, ಭಾರತ ಮತ್ತು ರಷ್ಯಾ ದೇಶಗಳು ಜಂಟಿಯಾಗಿ 800 ಕಿ.ಮೀ. ವ್ಯಾಪ್ತಿಯ ಬ್ರಹ್ಮೋಸ್ ಕ್ಷಿಪಣಿಗಳು ನಿಖರವಾಗಿ ಹೊಡೆಯುವ ಸಾಮರ್ಥ್ಯವನ್ನು ಹೊಂದಿರುವ ನವ ಪೀಳಿಗೆಯ ಬ್ರಹ್ಮೋಸ್ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಲು ಯೋಜಿಸಿದ್ದವು. ನಂತರ ಭಾರತವು 2019 ರಲ್ಲಿ ಈ ಕ್ಷಿಪಣಿಯನ್ನು 650 ಕಿ.ಮೀ.ಗಳ ವ್ಯಾಪ್ತಿಗೆ ನವೀಕರಿಸಿತ್ತು, ಮತ್ತೇ ಅಂತಿಮವಾಗಿ ಈ ಎಲ್ಲಾ ಕ್ಷಿಪಣಿಗಳನ್ನು 1500 ಕಿ.ಮೀ. ವ್ಯಾಪ್ತಿಗೆ ನವೀಕರಿಸಲು ಯೋಜಿಸಲಾಗಿದೆ ಎಂದು ತಿಳಿಸಲಾಗಿದೆ.