Job Description: * ಇತ್ತೀಚಿಗೆ ಭಾರತೀಯ ಕ್ರಿಕೆಟರ್ ವಿರಾಟ್ ಕೊಹ್ಲಿ ಅವರು ಭಾರತ ಟೆಸ್ಟ್‌ ತಂಡದ ನಾಯಕತ್ವಕ್ಕೆ ವಿದಾಯವನ್ನು ತಿಳಿಸಿದ್ದಾರೆ. ಇತ್ತೀಚಿಗೆ ಕೇಪ್ ಟೌನ್‌ನಲ್ಲಿ ದಕ್ಷಿಣ ಆಪ್ರಿಕಾ ವಿರುದ್ಧ ನಡೆದ 3 ನೇ ಟೆಸ್ಟ್‌ ಪಂದ್ಯದ ನಂತರ ವಿರಾಟ್ ಕೊಹ್ಲಿ ಅವರು ಈ ನಿರ್ಧಾರವನ್ನು ಬಹಿರಂಗ ಪಡಿಸಿದ್ದಾರೆ. * ವಿರಾಟ್‌ ಕೊಹ್ಲಿ ಅವರು ಟೆಸ್ಟ್‌ ತಂಡದ ನಾಯಕನಾಗಿ 68 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನೆಡೆಸಿದ್ದಾರೆ. ಅವುಗಳಲ್ಲಿ ಭಾರತ ತಂಡವು 40 ಟೆಸ್ಟ್ ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ, ಹಾಗೂ 17 ಟೆಸ್ಟ್‌ಗಳಲ್ಲಿ ಸೋಲನ್ನು ಕಂಡಿದೆ, ಮತ್ತು 11 ಟೆಸ್ಟ್ ಪಂದ್ಯಗಳು 'ಡ್ರಾ' ಆಗಿವೆ. * ಕೆಲ ತಿಂಗಳುಗಳ ಹಿಂದೆಯೇ ವಿರಾಟ್‌ ಕೊಹ್ಲಿ ಅವರು ಟಿ20 ಹಾಗೂ ಏಕದಿನ ಕ್ರಿಕೆಟ್‌ ನಾಯಕತ್ವಕ್ಕೂ ವಿದಾಯವನ್ನು ತಿಳಿಸಿದ್ದರು. * * ವಿರಾಟ್ ಕೊಹ್ಲಿ : - 1988 ರ ನವೆಂಬರ್. 05 ರಂದು ಜನಿಸಿದ್ದಾರೆ. ಇವರು ಭಾರತೀಯ ಅಂತರಾಷ್ಟ್ರೀಯ ಕ್ರಿಕೆಟಿಗ ಮತ್ತು ಭಾರತೀಯ ರಾಷ್ಟ್ರೀಯ ತಂಡದ ಮಾಜಿ ನಾಯಕ. ಇವರು ದೇಶೀಯ ಕ್ರಿಕೆಟ್‌ನಲ್ಲಿ ದೆಹಲಿ ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್‌(IPL)ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಆಡುತ್ತಾರೆ. ಕೊಹ್ಲಿ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟ್ ಆಟಗಾರರಲ್ಲಿ ಒಬ್ಬರಾಗಿದ್ದಾರೆ, ಈ ಹಿಂದೆ 2013 ರಿಂದ 2022 ರ ನಡುವೆ ಕೊಹ್ಲಿ ಅವರು ಎಲ್ಲಾ ಮೂರು ಸ್ವರೂಪಗಳಲ್ಲಿ 200 ಕ್ಕೂ ಅಧಿಕ ಪಂದ್ಯಗಳಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕನಾಗಿ ಆಟವಾಡಿದ್ದಾರೆ. * ಕೊಹ್ಲಿ ಅವರು 2011 ರಲ್ಲಿ ಟೆಸ್ಟ್‌ ಪಂದ್ಯಗಳನ್ನು ಆಡಲು ಆರಂಭಿಸಿದರು, ಮತ್ತೇ 2013 ರಲ್ಲಿ ಮೊದಲ ಬಾರಿಗೆ ODI ಬ್ಯಾಟ್ಸ್‌ಮನ್‌ ಆಗಿ ICC ಶ್ರೇಯಾಂಕದಲ್ಲಿ ಪ್ರಥಮ ಸ್ಥಾನವನ್ನು ಪಡೆದರು. ಇವರು 2 ಬಾರಿ 2014 ಮತ್ತು 2016 ರಲ್ಲಿ ಕ್ರಮವಾಗಿ ICC ವಿಶ್ವ ಟ್ವೆಂಟಿ20 ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಕೊಹ್ಲಿ ಅವರು ವೇಗವಾಗಿ 23,000 ಅಂತರಾಷ್ಟ್ರೀಯ ರನ್‌ಗಳನ್ನು ಗಳಿಸಿದ ವಿಶ್ವ ದಾಖಲೆಯನ್ನು ಹೊಂದಿದ್ದಾರೆ. * * ವಿರಾಟ್ ಕೊಹ್ಲಿ ಪಡೆದಿರುವ ಪ್ರಶಸ್ತಿಗಳು : 2017 ಮತ್ತು 2018 ರಲ್ಲಿ ಸರ್ ಗಾರ್ಫೀಲ್ಡ್ ಸೋಬರ್ಸ್ ಟ್ರೋಫಿ, 2018 ರಲ್ಲಿ ICC ವರ್ಷದ ಟೆಸ್ಟ್ ಆಟಗಾರ, ಮತ್ತೇ 2012, 2017, 2018 ರಲ್ಲಿ ICC ODI ವರ್ಷದ ಆಟಗಾರ. ಮತ್ತೇ 2016, 2017, 2018 ರಲ್ಲಿ ವಿಸ್ಡನ್ ವಿಶ್ವದ ಪ್ರಮುಖ ಕ್ರಿಕೆಟಿಗ ಪ್ರಶಸ್ತಿ. 2013 ರಲ್ಲಿ ಅರ್ಜುನ ಪ್ರಶಸ್ತಿ, 2017 ರಲ್ಲಿ ಪದ್ಮಶ್ರೀ, ಹಾಗೂ 2018 ರಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗಳನ್ನೂ ಪಡೆದಿದ್ದಾರೆ. ಕೊಹ್ಲಿ ಅವರು 2020 ವರ್ಷದಲ್ಲಿ ಫೋರ್ಬ್ಸ್‌ನ ಟಾಪ್ 100 ಅತಿ ಹೆಚ್ಚು ಸಂಭಾವನೆ ಪಡೆಯುವ ಅಥ್ಲೀಟ್‌ಗಳ ಪಟ್ಟಿಯಲ್ಲಿ 66 ನೇ ಸ್ಥಾನವನ್ನು ಪಡೆದಿದ್ದರು.